ಮಹಿಳೆ ಕೀಳರಿಮೆ ತೊರೆದು ಉತ್ತಮ ಸಾಧನೆ ಮಾಡಲಿ
Team Udayavani, Mar 29, 2018, 5:39 PM IST
ಚಿತ್ರದುರ್ಗ: ಮಹಿಳೆಯರು ಶೋಷಣೆ ವಿರುದ್ಧ ಧ್ವನಿ ಎತ್ತಬೇಕು. ಮಹಿಳೆ ಎನ್ನುವ ಕೀಳರಿಮೆಯಿಂದ ಹೊರ ಬಂದು ಜೀವನದಲ್ಲಿ ಸಮಾನತೆ ಕಂಡುಕೊಳ್ಳಬೇಕು ಎಂದು ಎಸ್.ಜೆ.ಎಂ ಕಾನೂನು ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಸುಮನ ಎಸ್. ಅಂಗಡಿ ಹೇಳಿದರು.
ಇಲ್ಲಿನ ಸರ್ಕಾರಿ ಕಲಾ ಕಾಲೇಜಿನ ಮಹಿಳಾ ಸಬಲೀಕರಣ ಕೋಶದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾರ್ಚ್ ತಿಂಗಳಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸುವ ಬದಲು ವರ್ಷವಿಡಿ ಆಚರಿಸುವಂತಾಗಬೇಕು. ಹೆಣ್ಣು ಶೋಷಣೆಗೆ ಒಳಗಾಗಿರಬಹುದು, ಆದರೆ ಹೆಣ್ಣಿಗೆ ವಿಶೇಷ
ಸ್ಥಾನಮಾನ ನೀಡಲಾಗಿದೆ. ತಾಯಿ, ಮಗಳು, ಸೊಸೆ, ಸಹೋದರಿ, ಮಡದಿಯಾಗಿ ಹೆಣ್ಣು ತನ್ನ ಪಾತ್ರವನ್ನು ಚಾಚೂ ತಪ್ಪದೆ ನಿಭಾಯಿಸುತ್ತಾಳೆ. ಹೆಣ್ಣನ್ನು ನಾರಿ, ಸ್ತ್ರೀ, ಮಾತೆ ಎಂದು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ಶೋಷಣೆಯಾದರೆ ದೂರು ನೀಡಿ ರಕ್ಷಣೆ ಪಡೆದುಕೊಳ್ಳಲು ಮಹಿಳಾ ಸಬಲೀಕರಣ ಕೋಶ ತೆರೆಯಲಾಗಿದೆ ಎಂದರು.
ಭ್ರೂಣಹತ್ಯೆ, ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಲೈಂಗಿಕ ಕಿರುಕುಳ ಇವುಗಳೆಲ್ಲಾ ಮೊದಲು ನಿಲ್ಲಬೇಕು. ಆಗ ಮಾತ್ರ ವಿಶ್ವ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ. ಗ್ರಾಪಂನಿಂದ ವಿಧಾನಸಭೆ, ಸಂಸತ್ ವರೆಗೆ ಮಹಿಳೆಗೆ ಮೀಸಲಾತಿ ನೀಡಲಾಗಿದೆ. ಕೌಟುಂಬಿಕ ದೌರ್ಜನ್ಯ ತಡೆಗೆ ವಿಶೇಷವಾದ ಕಾಯ್ದೆ ಇದೆ. ಸರ್ಕಾರ ಯಾವುದೇ ಭೇದಭಾವ ಮಾಡುತ್ತಿಲ್ಲ. ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಲು ಕಾನೂನು ಇದೆ ಎಂದರು.
ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಹಕ್ಕು ಇದೆ ಎಂಬುದನ್ನು ಮರೆಯಬೇಡಿ. ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗೆ ಬ್ಯಾಂಕ್ ಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿರುವುದನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿಗಳಾಗಬೇಕು. ಸಂವಿಧಾನದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. ಹಾಗೆಂದು ಸ್ವಾತಂತ್ರ್ಯವಿದೆಎಂದು ರುಪಯೋಗಪಡಿಸಿಕೊಳ್ಳಬಾರದು.·
ಎಲ್ಲದಕ್ಕೂ ಕಾನೂನಿನಿಂದಲೇ ಪರಿಹಾರ ಕಂಡುಕೊಳ್ಳುವ ಬದಲು ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುವುದನ್ನು ಕಲಿತಾಗ ಮಾತ್ರ ಜೀವನದಲ್ಲಿ ಯಾವ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಹೇಳಿದರು.
ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯ ಟಿ.ಎಲ್. ಸುಧಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಎಲ್ಲದಕ್ಕೂ
ಪುರುಷರನ್ನು ಅವಲಂಬಿಸುವ ಬದಲು ಸ್ವಾವಲಂಬಿಗಳಾಗಬೇಕು. ಪ್ರತಿಷ್ಠೆ ಬಿಟ್ಟರೆ ಸಂಸಾರ ನೆಮ್ಮದಿಯಿಂದ ಇರುತ್ತದೆ. ಸತಿ-ಪತಿ ಹೊಂದಾಣಿಕೆಯಿಂದ ಇರಬೇಕು ಎನ್ನುವುದಕ್ಕಿಂತ ಅತ್ತೆ- ಸೊಸೆ ಬಾಂಧವ್ಯವೂ ಮಧುರವಾಗಿರಬೇಕು ಎಂದರು.
ಒಂದು ಕಾಲದಲ್ಲಿ ಹೆಣ್ಣು ವಿದ್ಯೆ ಕಲಿಯುವುದೇ ಅಪರಾಧ ಎನ್ನುವಂತಾಗಿತ್ತು. ಈಗ ಶೇ. 60 ರಷ್ಟು ಮಹಿಳೆಯರು ಶಿಕ್ಷಣ
ಕಲಿಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಾಧ್ಯಾಪಕಿ ಮಂಜುಳಾ, ಮಹಿಳಾ ಘಟಕದ ಸಂಚಾಲಕಿ ಸುನೀತಾ ಇದ್ದರು. ವಿಜಯಾ ಪ್ರಾರ್ಥಿಸಿದರು. ಜ್ಯೋತಿ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.