ಜೀವನದಲ್ಲಿ ಸಾಧನೆ ರೂಢಿಸಿಕೊಳ್ಳಿ: ಶಿಮುಶ
Team Udayavani, Dec 28, 2020, 5:14 PM IST
ನಾಯಕನಹಟ್ಟಿ: ಸಾಧನೆಯಿಂದ ಸಾವು ಗೆಲ್ಲುವುದು ಸಾಧ್ಯ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಪಟ್ಟಣದಲ್ಲಿ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಸಮಾಜದಮುಕ್ತಿವಾಹನಕ್ಕೆ ಚಾಲನೆ ಹಾಗೂಲಿಂಗಾಯತ ಮುಖಂಡರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಹುಟ್ಟಿದ ಎಲ್ಲ ಜನರಿಗೆ ಸಾವು ನಿಶ್ಚಿತ ಹಾಗೂ ಸ್ವಾಭಾವಿಕವಾಗಿದೆ. ಬಸವ ತತ್ವದಹಲವು ಕುಟುಂಬಗಳು ಸಾವನ್ನುಮರಣವೇ ಮಹಾನವಮಿ ಎಂಬಂತೆ ಆಚರಿಸುತ್ತಾರೆ. ಮರಣದಲ್ಲಿ ನಾವುದುಃಖ ಪಡುವುದಕ್ಕಿಂತ ಜೀವನದಲ್ಲಿಸಾಧನೆಯನ್ನು ರೂಢಿಸಿಕೊಳ್ಳಬೇಕು. ಇತ್ತೀಚೆಗೆ ವಿಶ್ವವನ್ನು ಬಾಧಿಸುತ್ತಿರುವ ಕೋವಿಡ್ ಜನರಿಗೆ ಹಲವಾರು ಪಾಠಗಳನ್ನು ಕಲಿಸಿದೆ. ಸಾವುಗಳಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜನ, ಜೀವನತತ್ತರಗೊಂಡಿದೆ. ಸಿರಿ ಸಂಪತ್ತುಗಳೇಜೀವನ ಎಂದು ಭಾವಿಸಿದ್ದವರ ಮನಃಸ್ಥಿತಿ ಬದಲಾಗಿದೆ. ಆರ್ಥಿಕ ವಿಷಯಗಳಿಗೆಗಮನ ನೀಡಿದ್ದ ಜನರು ಇದೀಗ ಆರೋಗ್ಯದ ಕಡೆಗೆ ಗಮನ ಹರಿಸಿದ್ದಾರೆ. ದುಡಿಮೆಯ ಹಿಂದೆ ಬಿದ್ದ ಜನರು ಆರೋಗ್ಯ ವಿಷಯಗಳ ಕಡೆಗೆ ನಿರ್ಲಕ್ಷ್ಯ ವಹಿಸಿದ್ದರು. ಇತ್ತೀಚೆಗೆ ಸಾವನ್ನಪ್ಪಿದವರು ಆರೋಗ್ಯ ನಿಯಮಗಳ ನಿರ್ಲಕ್ಷ್ಯ ವಹಿಸಿರುವ ಸಂಭವವಿದೆ. ಹುಟ್ಟಿದ ಎಲ್ಲ ಜನರು ಒಂದಲ್ಲ ಒಂದು ದಿನ ಸಾಯಬೇಕು. ಸಾವು ನಿಶ್ಚಿತ ಹಾಗೂ ಸ್ವಾಭಾವಿಕವಾಗಿದೆ. ಇದನ್ನು ಮುನ್ನುಡಿಯುವುದು ಸಾಧ್ಯವಿಲ್ಲ. ಸಾವಿನ ನಿಖರ ದಿನ ಹೇಳುವುದಲ್ಲಿ ಎಲ್ಲ ಜ್ಯೋತಿಷಿಗಳು ವಿಫಲವಾಗಿದ್ದಾರೆ.
ಕುಟುಂಬ ಹೊರತುಪಡಿಸಿ ಸಮಾಜಕ್ಕೆ ಸ್ವಲ್ಪವಾದರೂ ಸೇವೆ ಸಲ್ಲಿಸುವುದು ಅಗತ್ಯ. ಜೀವನವನ್ನು ಸಾತ್ವಿಕವಾಗಿಸಮಾಜ ಸೇವೆಗಾಗಿ ಸವೆಸಬೇಕು ಎಂದರು. ವಿ.ಹೇಮರೆಡ್ಡಿ ಹಾಗೂರಾಧಮ್ಮ ದಂಪತಿಯನ್ನು ಶರಣರುಸನ್ಮಾನಿಸಿದರು. ಮುಖಂಡರಾದ ಎಂ.ವೈ.ಟಿ. ಸ್ವಾಮಿ, ಕೆ.ತಿಪ್ಪೇಸ್ವಾಮಿಮಾತನಾಡಿದರು. ಕೌನ್ಸಿಲರ್ ಜೆ.ಆರ್.ರವಿಕುಮಾರ್ ವೀರಶೈವ ಸಮಾಜದಕಾರ್ಯ ದರ್ಶಿ ವಿ.ತಿಪ್ಪೇಸ್ವಾಮಿ, ಪಿ.ಎಂ. ಗುರುಲಿಂಗಯ್ಯ, ಜೆ.ಎಸ್.ಪ್ರಭುಸ್ವಾಮಿ, ಮುಖಂಡರಾದ ಬೊಮ್ಮನಹಳ್ಳಿ ಶಿವಣ್ಣ, ಕೆ. ನಾಗರಾಜ್, ಪಿ.ಎಂ.ಜಿ.ರಾಜೇಶ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.