Lok Adalat;ಹೊಳಲ್ಕೆರೆಯಲ್ಲಿ ಮತ್ತೆ ಒಂದು ಗೂಡಿದ ದಂಪತಿಗಳು
Team Udayavani, Sep 9, 2023, 8:14 PM IST
ಹೊಳಲ್ಕೆರೆ : ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ರಾಷ್ಟಿಯ ಲೋಕ್ ಅದಾಲತ್ ನಲ್ಲಿ ಬ್ಯಾಂಕ್, ಚಕ್, ವಿಭಾಗ, ಮತ್ತು ವಿವಾಹ ವಿಚ್ಛೇದನ ಕ್ಕೆ ಸಲ್ಲಿಸಿದ್ದ ಹಲವಾರು ಪ್ರಕರಣಗಳನ್ನು ಇತ್ಯಾರ್ಥಗೊಳಿಸಲಾಗಿದೆ.
ಪ್ರಮುಖವಾಗಿ ಲೋಕ್ ಅದಾಲತ್ ಕಟ್ಟೆಯಲ್ಲಿದ್ದ ಎರಡು ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ದಂಪತಿಗಳನ್ನು ಒಂದು ಗೂಡಿಸಿ ಸುಖ ಜೀವನ ನಡೆಸಲು ಪ್ರೋತ್ಸಾಹ ನೀಡಿ, ಪ್ರಕಣವನ್ನು ಇತ್ಯಾರ್ಥಗೊಳಿಸಿದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಸರವಣನ್ ಇಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಕುಟುಂಬಗಳಲ್ಲಿ ಉಂಟಾಗುವ ವೈಮನಸ್ಸುಗಳನ್ನು ಕಟ್ಟು ಕೆಲಸ ಸಾಮಾನ್ಯದಲ್ಲ. ಹಲವು ಕಾರಣಗಳಿಂದ ಘಟಾನುಘಟಿ ದಂಪತಿಗಳ ನಡುವೆ ವ್ಯಾಜ್ಯಗಳು ಉಂಟಾಗಿ ಕೊನೆಗೆ ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಬರುತ್ತಾರೆ. ಎಷ್ಟೋ ಪ್ರಕಣಗಳಲ್ಲಿ ವಿವಾಹ ವಿಚ್ಚೇದನ ಪಡೆದ ಘಟನೆಗಳಿವೆ. ಅದರೇ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಗಳನ್ನು ಒಂದು ಮಾಡುವ ಮೂಲಕ ಹೊಸಜೀವನಕ್ಕೆ ಮುನ್ನುಡಿ ಬರೆಯುವಂತ ಕೆಲಸಗಳನ್ನು ನ್ಯಾಯಾಧೀಶರು ಮಾಡಿದ್ದಾರೆ.
ತಾಲೂಕಿನ ತಾಳಿಕಟ್ಟಿಯ ಬಸವರಾಜ್ ಹಾಗೂ ವಿಜಯ ಹಾಗೂ ಮಲ್ಲಾಡಿಹಳ್ಳಿ ಶ್ವೇತಾ- ನವಿನ್ ದಂಪತಿಗಳು ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ವಿವಾಹ ವಿಚ್ಛೇದನದ ಅರ್ಜಿಯನ್ನು ಶನಿವಾರ ನಡೆದ ಲೋಕದಲತ್‌ನಲ್ಲಿ ನ್ಯಾಯಾಧೀಶ ಎಸ್.ಶರವಣನ್ ನೇತೃತ್ವದಲ್ಲಿ ವಕೀಲರಾದ ಎಸ್.ವೇದಮೂರ್ತಿ, ಎಸ್.ವಿಜಯ, ಎನ್.ಹೆಚ್.ಶಾಂತವೀರಪ್ಪ, ಬಿ.ಎಸ್.ಪ್ರಭಕರ್ ಮಧ್ಯಸ್ಥಿಕೆಯಲ್ಲಿ ಇತ್ಯಾರ್ಥಗೊಳಿಸಿದೆ.
ತಾಲೂಕಿನ ಮಲ್ಲಾಡಿಹಳ್ಳಿ ಅಮೃತ್ ಅಗ್ಯಾನಿಕ್ ಸಂಸ್ಥೆ ಉದ್ಯೋಗಿ ಶ್ವೇತಾ ನವಿನ್ ದಂಪತಿಗಳು ವಿವಾಹ ವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ೨೦೨೦ ರಲ್ಲಿ ಅರ್ಜಿ ಸಲ್ಲಿಸಿದ್ದರು. ದಂಪತಿಗಳಿಗೆ 4 ವರ್ಷದ ಮಗು ಇದೆ. ಇಬ್ಬರ ನಡುವೆ ಕ್ರಿಮಿನಲ್ ಪ್ರಕರಣ ದಾವಣಗೆರೆ ನ್ಯಾಯಾಲಯದಲ್ಲಿ ಇತ್ತು. ಸುಖಸಂಸಾರಕ್ಕಾಗಿ ರಾಜಿ ಮಾಡಿಕೊಂಡು ಪರಸ್ಪರ ಪ್ರೀತಿ ಹೊಂದಾಣಿಕೆ ಯಿಂದ ಜೀವನ ನಡೆಸಬೇಕು ಎನ್ನುವ ತಿಳುವಳಿಕೆ ಹೇಳಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶರವಣನ್ ನೇತೃತ್ವದಲ್ಲಿ, ವಕೀಲರಾದ ಎಸ್.ವೇದಮೂರ್ತಿ, ಎಸ್.ವಿಜಯ ಹಾಗೂ ಮಧ್ಯಸ್ಥಿಕೆಗಾರರಾದ ಪ್ರೇಮಾ ಸಮಕ್ಷಮ ಲೋಕ ಅದಾಲತ್‌ನಲ್ಲಿ ರಾಜಿ ಮಾಡಿಕೊಂಡು ಒಂದುಗೂಡಿ ಸಂತಸಗೊಂಡಿದ್ದಾರೆ.
ತಾಲೂಕಿನ ತಾಳಿಕಟ್ಟೆ ನಿವಾಸಿ ಬಸವರಾಜ್-ವಿಜಯಮ್ಮ ವಿವಾಹವನ್ನು ವಿಚ್ಛೇದನ ಗೊಳಿಸುವಂತೆ ಕೋರಿ 2023 ರಲ್ಲಿ ವಿವಾಹ ವಿಚ್ಛೇದನ ಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಮಧ್ಯಸ್ಥಿಕೆ ಯಿಂದಾಗಿ ಪರಸ್ಪರರು ಜೀವನವನ್ನು ಮುಂದುವರಿಸಬೇಕು ಎನ್ನುವ ತೀರ್ಮಾನಕ್ಕೆ ಬಂದು ಶನಿವಾರ ಲೋಕದಲತ್ ನಲ್ಲಿ ಪುನಃ ವಿವಾಹವನ್ನು ಸ್ಥಾಪಿಸಿಕೊಳ್ಳುವುದರ ಮೂಲಕ ಹೊಸ ಜೀವನ ಆರಂಭಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಲೋಕ್ ಅದಾಲತ್ ನಲ್ಲಿ ರಾಜಿ ಮಾಡಿಕೊಂಡಿದ್ದಾರೆ.
ಇಬ್ಬರನ್ನು ಒಂದುಗೂಡಿಸಿದ ವಕೀಲರಾದ ಎನ್.ಹೆಚ್.ಶಾಂತವೀರಪ್ಪ, ಬಿ.ಎಸ್.ಪ್ರಭಕರ್ ಪ್ರಕರಣಗಳನ್ನು ಇತ್ಯಾರ್ಥಕ್ಕೆ ಶ್ರಮಿಸಿದ್ದಾರೆ. ಇದೆ ಸಮಯದಲ್ಲಿ ಮಧ್ಯಸ್ಥಿಕೆಯ ವಕೀಲರಾದ ಪೇಮಾ, ವಕೀಲರ ಸಂಘದ ಅಧ್ಯಕ್ಷ ಎಲ್.ಕೆ.ಶಿವಕುಮಾರ್. ಹಿರಿಯ ವಕೀಲರಾದ ಹನುಮಂತೆಗೌಡ, ವಿಜಯ್, ಜಿ.ಈ.ರಂಗಸ್ವಾಮಿ, ಜಿ.ಮುನಿಶ್ವರಪ್ಪ, ಎಸ್.ಜಿ.ರಂಗಸ್ವಾಮಿ, ಕೆ.ಎಸ್.ಜಯದೇವ, ಚಂದ್ರಹಾಸ್, ನಟರಾಜ್, ಬುರನ್ ಬೇಗಂ, ರವಿ. ಡಿ.ಜಯಣ್ಣ, ಸಂತೋಷಕುಮಾರ್, ಶಶಿಧರ್, ದಿನಕರ್ ಸೇರಿದಂತೆ ವಕೀಲರ ಸಂಘದ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.