ಗ್ರಹಣ ಕಾಲೇ ಪಾಣಿಗ್ರಹಣ…!

Team Udayavani, Jul 28, 2018, 12:25 PM IST

cta-2.jpg

ಚಿತ್ರದುರ್ಗ: ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಲ್ಲ. ಅದರಲ್ಲೂ ಮದುವೆಯನ್ನಂತೂ ಮಾಡೊದೇ ಇಲ್ಲ. ಹೊಸದಾಗಿ ಮದುವೆಯಾದ ದಂಪತಿಗಳೂ ಸಹ ಇದೊಂದು ಮಾಸ ಬೇರೆ ಬೇರೆ ಇರುತ್ತಾರೆ. ಇಂತಹ ಆಷಾಢ ಮಾಸದ ಚಂದ್ರಗ್ರಹಣದ ದಿನ ಮುರುಘಾಮಠದಲ್ಲಿ ಮದುವೆಯೊಂದು ನಡೆದಿದೆ.!

ಹೌದು. ಹಲವು ಹೊಸತನಕ್ಕೆ ನಾಂದಿ ಹಾಡಿದ ಮುರುಘಾ ಮಠ ಶುಕ್ರವಾರ ಮತ್ತೂಂದು ವಿಶೇಷಕ್ಕೆ ಸಾಕ್ಷಿಯಾಗಿದೆ. ಮುರುಘಾ ಶರಣರ ಸಮ್ಮುಖದಲ್ಲಿ ಯುವಪ್ರೇಮಿಗಳು ಪಾಣಿಗ್ರಹಣ ಮಾಡಿದ್ದಾರೆ.

ಗ್ರಹಣ ಸಮಯದಲ್ಲಿ ಮನೆಯಲ್ಲಿ ಮಾಡಿಟ್ಟ ಅಡುಗೆ, ಕೂಡಿಟ್ಟಿದ್ದ ನೀರು ಎಲ್ಲವನ್ನು ಹೊರ ಚೆಲ್ಲಿ ಬರೀ ಹೊಟ್ಟೆಯಲ್ಲಿ ಮಲಗುವುದು, ಜನ ಜಾನುವಾರುಗಳಿಗೆ ಗ್ರಹಣದ ದಿನದಂದು ತೊಂದರೆ ಆಗದಂತೆ ಜಾನುವಾರುಗಳ ಮೈ ಮೇಲೆ ಚಂದ್ರ ಸೂರ್ಯರನ್ನು ಸುಣ್ಣದಲ್ಲಿ ಬರೆದು ರಕ್ಷಣೆ ಮಾಡುವುದನ್ನು ನೋಡಿದ್ದೇವೆ. ಆದರೆ ಇದೆಲ್ಲವನ್ನು ಮೀರಿ ವೈಚಾರಿಕ ಚಿಂತಕ ಡಾ| ಶಿವಮೂರ್ತಿ ಮುರುಘಾ ಶರಣರು ರಕ್ತ ಚಂದ್ರ ಗ್ರಹಣದಲ್ಲಿ ಮದುವೆ ಮಾಡಿಸುವ ಮೂಲಕ ಮೌಢಾಚರಣೆಗಳಿಗೆ ತಿಲಾಂಜಲಿ ಇಟ್ಟಿದ್ದಾರೆ. ಗ್ರಹಣದ ದಿನ ಮದುವೆಯಾದ ವಧು-ವರರು ಒಂದೇ ಕೋಮಿ(ಜಾತಿ)ಗೆ ಸೇರಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ವರನ ಕಡೆಯವರಿಗೆ ಸಂಪೂರ್ಣ ಒಪ್ಪಿಗೆ ಇದ್ದು ವಧುವಿನ ಕಡೆಯವರಿಗೆ ಈ ರೀತಿಯ ಮದುವೆ ಇಷ್ಟವಿರಲಿಲ್ಲ ಎನ್ನಲಾಗುತ್ತಿದೆ. ಆದರೆ, ಮುರುಘಾ ಮಠದ ಸ್ವಾಮೀಜಿಗಳು ನೇತೃತ್ವ ವಹಿಸಿ ಮುಂದೆ ನಿಂತು ಗ್ರಹಣದ ದಿನ ಮದುವೆ ಮಾಡಿಸಿದ್ದು ಮಾತ್ರ ಇತಿಹಾಸದಲ್ಲೊಂದು ಮೈಲುಗಲ್ಲು. 

ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದ ಶೋಷಿತ ಬುಡಕಟ್ಟು ಸಮುದಾಯದ ಮರಡಿ ರಂಗ ನಾಯಕ(28) ಮತ್ತು ಅದೇ ಗ್ರಾಮದ ವಧು, ಬಿಕಾಂ ಪದವೀಧರೆ ವಸಂತಾ(22) ಗ್ರಹಣದ ದಿನ ಸಪ್ತಪದಿ ತುಳಿದಿದ್ದಾರೆ.

ಈ ಇಬ್ಬರು ಯುವ ಪ್ರೇಮಿಗಳು ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ಆದರೆ ಇವರೊಟ್ಟಿಗೆ ಆಗಬೇಕೆಂದು
ಇಬ್ಬರೂ ನಿರ್ಧರಿಸಿದರು. ಒಂದೇ ಜಾತಿ ಮತ್ತು ಸಂಬಂಧಿಗಳೇ ಆಗಿದ್ದರಿಂದ ಎರಡೂ ಕುಟುಂಬಗಳ ಸಂಪೂರ್ಣ ಆಶೀರ್ವಾದ ಸಿಗುವ ಬಲವಾದ ನಂಬಿಕೆ ಇಬ್ಬರಲ್ಲೂ ಇತ್ತು. ಆದರೆ ವರನ ಕಡೆಯವರು ಮಾತ್ರ ಸಂಭ್ರಮದಿಂದ ಮದುವೆಯಲ್ಲಿ ಪಾಲ್ಗೊಂಡಿದ್ದರೆ ವಧುವಿನ
ಕಡೆಯವರ ಸುಳಿವು ಇರಲಿಲ್ಲ.

ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ, ಕಾರ್ಯದರ್ಶಿ ಎಚ್‌.ಎಸ್‌.ಟಿ.ಸ್ವಾಮಿ ಮತ್ತಿತರರಿದ್ದರು. ಮುರುಘಾಮಠದಲ್ಲಿ ಸಂಪೂರ್ಣ ಚಂದ್ರ ಗ್ರಹಣದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಲಿಂಗದೀಕ್ಷೆ ಮತ್ತು ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಡಾ|ಶಿವಮೂರ್ತಿ ಮುರುಘಾ ಶರಣರು, ಮಾನವ ಜನಾಂಗಕ್ಕೆ ಒಕ್ಕರಿಸಿರುವ ಪಂಚಾಂಗ, ಶುಭ ದಿನ ಎನ್ನುವ ಮೌಡ್ಯದ ಗ್ರಹಣ ಬಿಡುಗಡೆ ಆಗಬೇಕಿದೆ
ಎಂದರು. ಸೂರ್ಯಗ್ರಹಣ, ಚಂದ್ರಗ್ರಹಣವು ಈ ಜಗತ್ತಿನ ಅಪೂರ್ವ ಸಂಗತಿ. ಗ್ರಹಣ ಸಂಭವಿಸುವುದು ಎಂದರೆ ನಿಸರ್ಗದ ವಿಸ್ಮಯ ಹಾಗೂ ಅದ್ಭುತಗಳು. ಅಂತಹ ಅಪರೂಪದ ಸನ್ನಿವೇಶ ನೋಡಿ ಖುಷಿ ಪಡಬೇಕು. ಆಷಾಢ ಮಾಸ, ಹುಣ್ಣಿಮೆ, ಅಮಾವಾಸ್ಯೆ, ಶುಭ ಅಶುಭ, ಮಂಗಳ ಅಮಂಗಳ ಅನ್ನುವ ಮೌಡ್ಯ ಬಿಡಬೇಕು.

ಉತ್ತಮ ಕಾರ್ಯಗಳಿಗೆ ಪ್ರತಿ ಕ್ಷಣ, ಪ್ರತಿ ದಿನ ಎಲ್ಲವೂ ಮಂಗಳವೇ. ಸರ್ವವೂ ಶುಭ ಕಾರ್ಯವೇ ಎಂದು ತಿಳಿಸಿದರು. ದೇಶದ ಜನತೆ ಬ್ರಿಟಿಷರ ದಾಸ್ಯದಿಂದ ಹೊರಬಂದರೂ ಪಂಚಾಂಗ, ಶುಭಗಳಿಗೆ ಎಂಬ ಮೌಡ್ಯ ದಾಸ್ಯದಿಂದ ಹೊರಬಂದಿಲ್ಲ ಇದು ವಿಪರ್ಯಾಸದ ಸಂಗತಿ. ಪಂಚಾಂಗ ಹಿಡಿದು ಕೆಲ ಜ್ಯೋತಿಷಿಗಳು ಸಮಾಜದಲ್ಲಿ ಭೀತಿಯ ಬೀಜ ಬಿತ್ತಿ ಮುಗ ಜನತೆಯನ್ನು ಪಾಪದ ಕೂಪಕ್ಕೆ ತಳ್ಳಿ ಹಾಳು ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು. ಸೂರ್ಯ, ಚಂದ್ರ ಗ್ರಹಣಗಳು ನೂರಾರು ವರ್ಷಗಳಿಂದ ನಡೆಯುತ್ತ ಬಂದಿದೆ. 

ನಾವು ನೋಡುತ್ತಲೇ ಪ್ರಸಾದ ಮಾಡಿದೆವು. ಆದರೆ ಏನೂ ಆಗಲಿಲ್ಲ. ಅದೊಂದು ಸಹಜ ಕ್ರಿಯೆ. ಆದರೆ ಮಾಧ್ಯಮಗಳು ಹುಟ್ಟಿಸುತ್ತಿರುವ ಭಯದ ಪ್ರಸಾರದಿಂದ ಜನರಲ್ಲಿ ಭೀತಿ ಉಂಟಾಗಿದೆ ಎಂದರು

ದೇವರನ್ನು ಭಕ್ತಿಯಿಂದ ಪೂಜಿಸುತ್ತೇನೆ. ಅಷ್ಟೇ ನಂಬಿಕೆಯೂ ಇದೆ. ಆದರೆ ಶಾಸ್ತ್ರ, ಸಂಬಂಧ, ಕಂಕಣ ದಿನ ಎನ್ನುವ ಮೌಡ್ಯ, ಕಂದಚಾರಗಳನ್ನು ಒಪ್ಪುವುದಿಲ್ಲ. ಹಾಗಾಗಿ ಚಂದ್ರ ಗ್ರಹಣದ ದಿನ ಇಬ್ಬರು ಒಪ್ಪಿ ಮದುವೆ ಮಾಡಿಕೊಂಡಿದ್ದೇವೆ.
●ಮರಡಿ ರಂಗ ನಾಯಕ, ವರ

ಟಾಪ್ ನ್ಯೂಸ್

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Supreme Court: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

SC: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

CM-Sidda-BGV

Belagavi: ಖಾನಾಪುರ ಪೊಲೀಸ್‌ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ

u1

Udupi: ಮನೆಯೊಳಗೆ ಧರ್ಮಗ್ರಂಥ, ಹೊರಗೆ ಸಂವಿಧಾನ ಮುನ್ನೆಡೆಸಬೇಕು: ನ್ಯಾ| ಶ್ರೀಶಾನಂದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-chitradurga

Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್‌

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Supreme Court: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

SC: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.