ಜಯವಿಭವ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಣೆ
Team Udayavani, May 22, 2021, 11:30 AM IST
ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶುಕ್ರವಾರಲಿಂಗೈಕ್ಯ ಶ್ರೀ ಜಗದ್ಗುರು ಜಯವಿಭವ ಮುರುಘರಾಜೇಂದ್ರ ಸ್ವಾಮಿಗಳ ಸ್ಮರಣೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ,ಜಯದೇವ ಶ್ರೀಗಳು ಲಿಂಗೈಕ್ಯರಾದ ನಂತರಜಯವಿಭವ ಸ್ವಾಮಿಗಳು ಪೀಠಾಧ್ಯಕ್ಷರಾಗಿಆಯ್ಕೆಯಾದರು. ಇವರ ಪೂರ್ವಾಶ್ರಮದ ಹೆಸರು ಶಿವಲಿಂಗದೇವರು. ಮೊದಲು ಅಥಣಿಗಚ್ಚಿನಮಠದಲ್ಲಿ ಮುರುಘೇಂದ್ರ ಶ್ರೀಗಳ ಕಾರುಣ್ಯದ ಜತೆ ಕಾರ್ಯಾರಂಭ ಮಾಡಿದರು.
ಮುಳಗುಂದದ ಬಾಲಲೀಲ ಶ್ರೀಗಳವರಮತ್ತು ಮುರುಘೇಂದ್ರ ಶಿವಯೋಗಿಗಳವರಆಶೀರ್ವಾದ ಇದ್ದುದನ್ನು ನೋಡಿದಜಯದೇವ ಶ್ರೀಗಳು ಶಿವಲಿಂಗ ದೇವರನ್ನುಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಾಶಿಗೆ ಕಳುಹಿಸುತ್ತಾರೆ. ಇವರ ಜತೆ ಮಲ್ಲಿಕಾರ್ಜುನ ಜಗದ್ಗುರುಗಳುಸಹ ಕಾಶಿ ಪೀಠದಲ್ಲಿ ಜೊತೆಯಾಗಿ ಇಬ್ಬರುಒಂದೇ ಕೊಠಡಿಯಲ್ಲಿ ಇದ್ದು ವಿದ್ಯಾಭ್ಯಾಸ ಮಾಡಿದ್ದರು.
ಜಯವಿಭವ ಶ್ರೀಗಳಲ್ಲಿ ಕೃಷಿ ಆಸಕ್ತಿಯ ಜತೆಗೆ ಪಾಕಪ್ರವೀಣರಾಗಿದ್ದರು. ಪೀಠಾಧಿಶರಾದ ಮೇಲೆ ಪಶುಪಾಲನೆಗೆ ಹೆಚ್ಚಿನ ಆದ್ಯತೆ ನೀಡಿದರು. ಯಾವ ಮಠವು ಗೋಶಾಲೆ ಮಾಡದ ಸಂದರ್ಭದಲ್ಲಿ ಜಯವಿಭವ ಸ್ವಾಮಿಗಳು ಗೋಶಾಲೆ ಮಾಡಿದ್ದರು. ಸಾವಿರಾರು ದನಕರುಗಳು ಇದ್ದವು. ಮಠದೊಳಗೆ ಇರುವ ತೆಂಗಿನ ಮರಗಳು ಸಹ ಅವರೇ ಹಾಕಿಸಿದ್ದು.
ಸಾಧನೆ ಮಾಡಿದವರುಲಿಂಗೈಕ್ಯರಾಗಬಹುದು ಆದರೆ ಅವರ ಸಾಧನೆಗೆ ಸಾವಿರುವುದಿಲ್ಲ. ದವಳಿ ಹೊಂಡದತೋಟವು ಸಹ ಅವರೇ ಹಾಕಿ ಬೆಳೆಸಿದ್ದು.ಜಯದೇವ ಶ್ರೀಗಳು ಹಾಗು ಜಯವಿಭವ ಶ್ರೀಗಳ ಮಧ್ಯೆ ಹಾರ್ದಿಕವಾದ ಸ್ಪರ್ಧೆ ಇತ್ತು. ಸಾತ್ವಿಕರು, ಸಂಪನ್ನರು. ಬಹಳ ಕಾಲ ಪೀಠಾಧ್ಯಕ್ಷರಾಗಿರಲಿಲ್ಲ. ಅನಾರೋಗ್ಯದಿಂದ ಅಲ್ಪಕಾಲದಲ್ಲಿಯೇ ಲಿಂಗೈಕ್ಯರಾದರು. ಕಡಿಮೆ ಅವಧಿಯಲ್ಲಿ ಶ್ರೀಮಠದ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ಇಂದು ಹಣ ಸಂಪಾದನೆಗಿಂತಪ್ರಾಣ ಸಂಪಾದನೆ ಮುಖ್ಯ. ನಮ್ಮ ಜೀವವನ್ನುನಾವೇ ಉಳಿಸಿಕೊಳ್ಳಬೇಕಿದೆ ಎಂದು ಹೇಳಿದರು.
ವೀರಶೈವ ಸಮಾಜದ ಮುಖಂಡ ಕೆಇಬಿ ಷಣ್ಮುಖಪ್ಪ ಮಾತನಾಡಿ, 1956 ರಿಂದ 65 ರವರೆಗೆ ಶ್ರೀಮಠದ ಪೀಠಾಧ್ಯಕ್ಷರಾಗಿದ್ದ ಜಯವಿಭವ ಶ್ರೀಗಳಿಗೆ ಕೃಷಿಯ ಬಗ್ಗೆ ಅಪಾರ ಪ್ರೀತಿ. 1962 ರಲ್ಲಿ ಚೀನಾ ಯುದ್ಧವಾದಾಗ ನಿಜಲಿಂಗಪ್ಪ ಮುಖ್ಯಮಂತ್ರಿಗಳಾಗಿದ್ದರು. ಆ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲೆಂದು ಪರಂಪರಾಗತರಾಗಿ ಬಂದಿದ್ದಂತಹ ಕಿರೀಟವನ್ನು ಭಾರತ ಸರ್ಕಾರಕ್ಕೆ ಕೊಟ್ಟ ಉದಾರಿಗಳು ಎಂದು ಸ್ಮರಿಸಿದರು.
ವೀರಶೈವ ಬ್ಯಾಂಕ್ ಅಧ್ಯಕ್ಷ ಪಟೇಲ್‌ಶಿವಕುಮಾರ್, ಮುಖಂಡರಾದ ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ವೀರಶೈವಮಹಾಸಭಾ ಜಿಲ್ಲಾಧ್ಯಕ್ಷ ಮಹಡಿಶಿವಮೂರ್ತಿ, ಎಸ್.ಜೆ.ಎಂ. ವಿದ್ಯಾಪೀಠದಕಾರ್ಯದರ್ಶಿ ಎ.ಜೆ. ಪರಮಶಿವಯ್ಯ ಇದ್ದರು. ಉಮೇಶ ಪತ್ತಾರ ಪ್ರಾರ್ಥಿಸಿದರು. ಕೆ.ಎಂ.ವೀರೇಶ್ ವಂದಿಸಿದರು. ವೀರೇಂದ್ರಕುಮಾರ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.