ತಡರಾತ್ರಿ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡಿದ ಸಚಿವ ಶ್ರೀರಾಮುಲು
Team Udayavani, Jan 24, 2020, 7:55 AM IST
ಚಿತ್ರದುರ್ಗ: ಸರ್ಕಾರಿ ಆಸ್ಪತ್ರೆಗಳಲ್ಲಿನ ಕೆಲ ಅಧಿಕಾರಿಗಳು, ಗುತ್ತಿಗೆದಾರರು, ಸಿಬ್ಬಂದಿಗಳು. ಸರ್ಕಾರದ ಸೌಲಭ್ಯ ಪಡೆದು ಅದನ್ನುಸಮರ್ಪಕವಾಗಿ ಜನರಿಗೆ ತಲುಪಿದೆ ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ. ಇದನ್ನೆಲ್ಲಾ ಸರಿ ಮಾಡುವುದು ನಮ್ಮ ಉದ್ದೇಶ. ಮಾತ್ರವಲ್ಲದೆ ಸಚಿವರು ಬರುತ್ತಾರೆ ಎಂಬ ಕಾರಣಕ್ಕೆ ಮೂರ್ನಾಲ್ಕು ದಿನದಿಂದಲೇ ಆಸ್ಪತ್ರೆ ಸ್ವಚ್ಛಮಾಡಲಾಗುತ್ತದೆ. ಈ ಬದಲಾವಣೆ ಪ್ರತಿನಿತ್ಯ ನಡೆಯಬೇಕು. ಇದರಿಂದ ಒಂದಿಷ್ಟಾದರೂ ಬದಲಾವಣೆ ಆಗಬಹುದು ಎಂಬ ಆಸೆ ಇದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಗುರುವಾರ ತಡರಾತ್ರಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ವಾಸ್ತವ್ಯ ಮಾಡಿ ಅವರು ಮಾತನಾಡಿದರು. ನನ್ನಿಂದ ಎಲ್ಲವೂ ಸರಿಯಾಗುತ್ತೆ ಎಂದು ಹೇಳುವುದಿಲ್ಲ. ಆದರೆ, ಪ್ರಯತ್ನ ಮಾಡುತ್ತೇನೆ. ಅದರ ಭಾಗವಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ. ಮೈಸೂರು, ಎಚ್.ಡಿ.ಕೋಟೆ ಕಾರ್ಯಕ್ರಮ ಮುಗಿಸಿ ಬರುವಷ್ಟರಲ್ಲಿ ತಡವಾಗಿದೆ. ಆದ್ದರಿಂದ ಆಸ್ಪತ್ರೆ, ವಾರ್ಡ್ ಗಳನ್ನು ವೀಕ್ಷಿಸಿ ಅಲ್ಲಿನ ಸಮಸ್ಯೆ ಆಲಿಸಲು ಸಾಧ್ಯವಾಗಿಲ್ಲ. ಆದರೆ, ಬೆಳಗ್ಗೆ ರೌಂಡ್ಸ್ ಮಾಡುತ್ತೇನೆ ಎಂದರು.
ಪೂರ್ವ ನಿಗಧಿಯಾಗಿದ್ದ ವಾಸ್ತವ್ಯ ಕಾರ್ಯಕ್ರಮಕ್ಕೆ ಸಚಿವರ ಪ್ರವಾಸದ ವೇಳಾಪಟ್ಟಿ ಪ್ರಕಾರ ರಾತ್ರಿ 10.30ಕ್ಕೆ ಆಗಮಿಸಬೇಕಾಗಿತ್ತು. ಆದರೆ, ಮೈಸೂರಿನಿಂದ ತಡವಾಗಿ ಆಗಮಿಸಿದ್ದರಿಂದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಆವರಣ ಪ್ರವೇಶಿಸಿದಾಗ ಸಮಯ 12.05 ಗಂಟೆಯಾಗಿತ್ತು. ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಸಾರ್ವಜನಿಕಕರು, ರೋಗಿಗಳು ತಡರಾತ್ರಿವರೆಗೆ ಸಚಿವರಿಗಾಗಿ ಕಾದು ಸ್ವಾಗತಿಸಿದರು. ಇದೇ ವೇಳೆ ಹಲವರು ಆಸ್ಪತ್ರೆಯ ಸ್ವಚ್ಛತೆ, ಭ್ರಷ್ಟಾಚಾರ, ಸಿಬ್ಬಂದಿಗಳ ನಿರ್ಲಕ್ಷ್ಯ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಸಚಿವರ ಬಳಿ ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.