ಶಾಸಕರ ಅನರ್ಹತೆ ಪ್ರಕರಣ: ಸುಪ್ರೀಂ ತೀರ್ಪು ನಮಗೆ ಮುಖ್ಯ
Team Udayavani, Oct 26, 2019, 8:40 PM IST
ಚಿತ್ರದುರ್ಗ: ಅನರ್ಹ ಶಾಸಕರ ಕುರಿತ ತೀರ್ಪು ನಮಗೆ ಬಹಳ ಮುಖ್ಯವಾಗಿದ್ದು, ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿದ ಶಾಸಕರ ಬಗ್ಗೆ ಹಿಂದಿನ ಸ್ಪೀಕರ್ ತೆಗೆದುಕೊಂಡ ನಿರ್ಧಾರದ ಬಗ್ಗೆ ನಮ್ಮ ಅಸಮಾಧಾನವಿದೆ. ಈ ತೀರ್ಪು ಸರಿಯಲ್ಲ ಎನ್ನುವುದು ಮೊದಲಿನಿಂದಲೂ ನಮ್ಮ ವಾದವಾಗಿತ್ತು ಎಂದರು.
ವ್ಯಾಕರಣ ಸರಿಯಿಲ್ಲ
ಸ್ಪೀಕರ್ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಏಕವಚನ ಬಳಕೆ ಮಾಡಿರುವುದು ಸರಿಯಲ್ಲ. ನಮಗೂ ಏಕವಚನ, ಬಹುವಚನಗಳು ಗೊತ್ತು. ಆದರೆ ಸಿದ್ದರಾಮಯ್ಯ ವ್ಯಾಕರಣದ ಮೇಷ್ಟ್ರು. ಅವರಿಗೆ ಏಕವಚನ ಮಾತ್ರ ಗೊತ್ತಿದೆ. ವ್ಯಾಕರಣದ ವ್ಯತ್ಯಾಸ ಗೊತ್ತಿಲ್ಲದೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರಕಾರ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೈತರ ಹಿತ ಕಾಯುವುದು ನಮ್ಮ ಮೊದಲ ಆದ್ಯತೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಕೇಂದ್ರ ಸರಕಾರಕ್ಕೆ ತಿಳಿಸುತ್ತೇವೆ. ರೈತರಿಗೆ ತೊಂದರೆಯಾಗದಂತೆ ಕೇಂದ್ರದ ಗಮನ ಸೆಳೆಯುತ್ತೇವೆ ಎಂದರು.
ನೆರೆಯಿಂದ ಕುಸಿದು ಬಿದ್ದಿರುವ ಶಾಲೆಗಳ ಪುನಶ್ಚೇತನಕ್ಕೆ 540 ಕೋ. ರೂ. ಬೇಕಾಗಬಹುದು. ಈ ಶಾಲೆಗಳನ್ನು ಸರಿಪಡಿಸುವುದು ನಮ್ಮ ಮೊದಲ ಆದ್ಯತೆ. ಶತಮಾನ ಕಳೆದಿರುವ ಹೆರಿಟೇಜ್ ಶಾಲೆಗಳ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.