ಮೊಳಕಾಲ್ಮೂರು: ಹೊರ ರಾಜ್ಯದಿಂದ ಬಂದ 6 ಜನರಿಗೆ ಸಾಂಸ್ಥಿಕ ಕ್ವಾರಂಟೈನ್
Team Udayavani, May 18, 2020, 12:58 PM IST
ಸಾಂದರ್ಭಿಕ ಚಿತ್ರ
ಮೊಳಕಾಲ್ಮೂರು: ತಾಲೂಕಿಗೆ ಹೊರ ರಾಜ್ಯಗಳಿಂದ ಆಗಮಿಸಿದ್ದ 6 ಜನ ಸ್ಥಳೀಯರನ್ನು ತಾಲೂಕು ಆಡಳಿತ ಪಟ್ಟಣದ ಆರ್.ಎಂ.ಎಸ್.ಎ ಬಾಲಕಿಯರ ವಸತಿನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಟ್ಟಿದೆ.
ಚಳ್ಳಕೆರೆ ತಾಲೂಕು ಕೋಡಿಹಳ್ಳಿಯಲ್ಲಿ ಪತ್ತೆಯಾಗಿರುವ ಸೋಂಕಿತ ವ್ಯಕ್ತಿ, ತಾಲೂಕಿನ ವಿವಿಧ ಗ್ರಾಮಗಳಿಗೆ ಬಂದಿರುವ ಭೀತಿಯ ಬೆನ್ನಲ್ಲೇ ಹೊರ ರಾಜ್ಯಗಳಿಂದ ಬಂದ 6 ಜನ ಸ್ಥಳೀಯರನ್ನು ತಾಲೂಕು ಆಡಳಿತ ಪತ್ತೆ ಹಚ್ಚಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಟ್ಟಿದೆ. ಆಂಧ್ರಪ್ರದೇಶದ ಧರ್ಮವರಂನಿಂದ ಮಹಿಳೆ, ಪೆರಗುಪಾಳ್ಯದಿಂದ ಒಬ್ಬ ಪುರುಷ, ಹೈದರಾಬಾದ್ ನಿಂದ ಒಬ್ಬ ಪುರುಷ, ದೆಹಲಿಯಿಂದ ಇಬ್ಬರು ಪುರುಷರು ಹಾಗೂ ಚೆನ್ನೈನಿಂದ ಒಬ್ಬ ಪುರುಷ ಸೇರಿದಂತೆ ಒಟ್ಟು 6 ಜನರು ಮೇ 16 ರಂದು ಆಗಮಿಸಿದ್ದರು. ಈ ಮಾಹಿತಿ ಆಧರಿಸಿ ತಹಶೀಲ್ದಾರ್ ಎಂ. ಬಸವರಾಜ್ ಹಾಗೂ ಸಿಬ್ಬಂದಿ ಪೊಲೀಸರ ಸಹಕಾರದೊಂದಿಗೆ ಅವರೆಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಟ್ಟಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ| ಪದ್ಮಾವತಿ, ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಚಿದಾನಂದಪ್ಪ, ಕ್ಷೇತ್ರ ಶಿಕ್ಷಣಾ ಧಿಕಾರಿ ಎನ್. ಸೋಮಶೇಖರ್, ಅಕ್ಷರ ದಾಸೋಹದ ಪಾತಲಿಂಗಪ್ಪ, ಕೆ.ಎಚ್. ಸಣ್ಣಯಲ್ಲಪ್ಪ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಶ್ರೀನಿವಾಸ್, ತಿಪ್ಪೇಶ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.