ಜನರ ನಿರೀಕ್ಷೆಗೆ ತಕ್ಕಂತೆ ಕಾಮಗಾರಿಗಳು ನಡೆಯಲಿ
Team Udayavani, Mar 2, 2021, 3:18 PM IST
ಚಿತ್ರದುರ್ಗ: ಜನರ ನಿರೀಕ್ಷೆ ಹೆಚ್ಚಾಗಿದೆ. ನಗರದಲ್ಲಿ ಅಭಿವೃದ್ಧಿ ಕೆಲಸಗಳು ಸರಿಯಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ನಗರಸಭೆಗೆ ಬರಬೇಕಾದ ಬಾಕಿಗಳನ್ನು ಸರಿಯಾಗಿ ಸಂಗ್ರಹ ಮಾಡಬೇಕು ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಗರಸಭೆಯಿಂದ ಆಯೋಜಿಸಿದ್ದ ಆಯವ್ಯಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನೀರಿನ, ಮನೆ ಕಂದಾಯ ಸೇರಿದಂತೆ ನಗರಸಭೆಗೆ ಬರುವ ಆದಾಯದ ಮೂಲಗಳಿಂದಬಾಕಿ ಸಂಗ್ರಹ ಮಾಡಲು ಎಲ್ಲರೂ ಸಹಕಾರ ನೀಡಬೇಕು. ನೀರು, ಕಂದಾಯ ಕೆಲವರದ್ದು 10 ಲಕ್ಷದವರೆಗೆ ಬಾಕಿ ಇದೆ ಎನ್ನುವ ಮಾಹಿತಿಯಿದೆ. ಇದನ್ನು ಅಧಿಕಾರಿಗಳು ಬಹಿರಂಗಪಡಿಸಿ, ಸದಸ್ಯರ ಸಹಕಾರ ಪಡೆದು ವಸೂಲು ಮಾಡಬೇಕು. ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳಾಗದಿದ್ದರೆ ಜನರ ಬಳಿ ಸದಸ್ಯರು ನಿಷ್ಠುರವಾಗಬೇಕಾಗುತ್ತದೆ ಎಂದರು. ಪೌರಾಯುಕ್ತ ಹನುಮಂತರಾಜು ಮಾತನಾಡಿ, ಶೇ.69ರಷ್ಟು ಕಂದಾಯ ವಸೂಲಾಗಿದೆ. ನೀರಿನ ಕಂದಾಯ 4 ಕೋಟಿ ರೂ. ಸಂಗ್ರಹವಾಗಬೇಕು. ಆದರೆ, 1.21 ಕೋಟಿ ರೂ. ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.
ಸದಸ್ಯ ಮಲ್ಲಿಕಾರ್ಜುನ ಮಾತನಾಡಿ,ಅಕ್ರಮವಾಗಿರುವ ನಲ್ಲಿ ಸಂಪರ್ಕವನ್ನುಕಡಿತಗೊಳಿಸಬೇಕು. ನಗರದಲ್ಲಿರುವ ಫ್ಲೆಕ್ಸ್, ಹೋರ್ಡಿಂಗ್ಸ್ ಮೂಲಗಳಿಂದ ಲಕ್ಷಾಂತರ ರೂ.ಆದಾಯ ಬರಬೇಕಿದೆ. ನಗರದಲ್ಲಿ ಸಾಕಷ್ಟು ಅಂಗಡಿ, ವ್ಯಾಪಾರಿಗಳಿದ್ದಾರೆ. ಆದರೆ, ಟ್ರೇಡಿಂಗ್ ಲೈಸೆನ್ಸ್ ಕೇವಲ 900 ಇದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಲ್ಲವನ್ನೂ ಪಟ್ಟಿ ಮಾಡಿದರೆ ನಗರಸಭೆಯ ಆದಾಯ ಹೆಚ್ಚಾಗಲಿದೆ ಎಂದು ಸಲಹೆ ನೀಡಿದರು.
ಈ ವೇಳೆ ಕೆಲ ಸದಸ್ಯರು, ಅಧಿಕಾರಿಗಳು ಅಕ್ರಮ ನಲ್ಲಿ ಸಂಪರ್ಕ ಕಡಿತಗೊಳಿಸಲು ಬಂದಾಗ ನಾವೇ ಅದಕ್ಕೆ ತಡೆಯಾಗುತ್ತೇವೆ. ನಮಗೆ ಮತಹಾಕುತ್ತಾರೆ ಎಂಬ ಮುಲಾಜಿರುತ್ತದೆ. ಇದರಬದಲು ನಲ್ಲಿಗಳಿಗೆ ಮೀಟರ್ ಅಳವಡಿಸುವುದುಉತ್ತಮ ಎಂದು ಹೇಳಿದರು.
ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಪ್ರತಿಕ್ರಿಯಿಸಿ, ಅಮೃತ್ ಯೋಜನೆಯಲ್ಲಿ ನಲ್ಲಿಗಳಿಗೆ ಮೀಟರ್ ಅಳವಡಿಸುವುದೇ ಆದ್ಯತೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ನಲ್ಲಿಗಳಿಗೆ ಮೀಟರ್ ಹಾಕಿದರೆ ಕಂದಾಯವೂ ಬರುತ್ತದೆ, ಜತೆಗೆ ನೀರು ಪೋಲಾಗುವುದಿಲ್ಲ ಎಂದರು.
ಸದಸ್ಯ ಭಾಸ್ಕರ್ ಮಾತನಾಡಿ, ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಸಬೇಕು. ಸ್ಥಾಯಿ ಸಮಿತಿ ರಚನೆಯಾಗಬೇಕು. ಆದರೆ, ಅಧಿಕಾರಿಗಳು ಹಾಗೂ ನಗರಸಭೆ ಅಧ್ಯಕ್ಷರು ಯಾಕೆ ವಿಳಂಬ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಈ ವೇಳೆ ಸದಸ್ಯವೆಂಕಟೇಶ್ ಮಾತನಾಡಲು ಯತ್ನಿಸಿದಾಗ ಕೆಲ ಸದಸ್ಯರು, ನೀವ್ಯಾಕೆ ಮಾತನಾಡುತ್ತಿರಿ, ಅಧ್ಯಕ್ಷರು ಉತ್ತರ ಕೊಡಲಿ ಎಂದು ಆಗ್ರಹಿಸಿದರು. ಈ ವೇಳೆ ಮಾತಿನ ಚಕಮಕಿಯಾಯಿತು.
ಅಧ್ಯಕ್ಷೆ ತಿಪ್ಪಮ್ಮ ಮಾತನಾಡಿ, ಮುಂದೆ, ಪ್ರತಿ ತಿಂಗಳು ಸಭೆ ನಡೆಸೋಣ ಎಂದು ಸಮಾಧಾನಪಡಿಸಿದರು. ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಧ್ಯೆ ಪ್ರವೇಶಿಸಿ ಅಧ್ಯಕ್ಷರಿಗೆ ನಿಯಮಗಳನ್ನು ಅಧಿಕಾರಿಗಳು ತಿಳಿಸಿಕೊಡಬೇಕು. ವೆಂಕಟೇಶ್ ಕೂಡಾ ತಿಳಿಸಿಕೊಡಬಹುದು, ತಪ್ಪೇನಿಲ್ಲ ಎಂದು ಹೇಳಿದರು. ಇದೇ ವೇಳೆ ಪ್ರತಿ ತಿಂಗಳ 1ನೇ ತಾರೀಕು ಸಾಮಾನ್ಯ ಸಭೆ ನಡೆಸಲು ದಿನಾಂಕ ನಿಗದಿಪಡಿಸಲಾಯಿತು. ನಗರಸಭೆ ವ್ಯಾಪ್ತಿಯ ವಿದ್ಯುತ್ ಸಂಬಂಧಿ ಕೆಲಸಗಳಿಗೆ ಪ್ರತ್ಯೇಕವಾಗಿ ಒಬ್ಬ ಇಂಜಿನಿಯರ್ ನೇಮಕ ಮಾಡಿಕೊಳ್ಳಬೇಕು. ವಿದ್ಯುತ್ ಕಂಬ ಸ್ಥಳಾಂತರ ಮತ್ತಿತರೆ ಕೆಲಸಗಳು ವಿಳಂಬವಾಗುತ್ತಿವೆ ಎಂದು ಹೇಳಿದರು. ಈ ಕುರಿತುಸರ್ಕಾರಕ್ಕೆ ಪತ್ರ ಬರೆಯಲು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಆಯುಕ್ತರಿಗೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.