ವಸತಿ ಯೋಜನೆಯಡಿ ಚಳ್ಳಕೆರೆ ನಗರಸಭೆಗೆ ರಾಷ್ಟ್ರೀಯ ಪುರಸ್ಕಾರ
Team Udayavani, Jan 2, 2021, 4:32 PM IST
ಚಳ್ಳಕೆರೆ: ಪ್ರಧಾನಮಂತ್ರಿ ವಸತಿ ಯೋಜನೆಯಡಿ ಮನೆ ನಿರ್ಮಿಸಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಪಂಕಜಾ ಮತ್ತು ಕುಟುಂಬದವರನ್ನು ಶಾಸಕ ಟಿ. ರಘುಮೂರ್ತಿ ಅಭಿನಂದಿಸಿದರು.
ಚಳ್ಳಕೆರೆ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಸತಿ ಯೋಜನೆಯಡಿ ನೂತನತಾಂತ್ರಿಕತೆಯನ್ನು ಅಳವಡಿಸಿಕೊಂಡು ವೆಂಕಟೇಶ್ವರ ನಗರದಲ್ಲಿ ಬಿ.ಸಿ. ಪಂಕಜಾ ನಿರ್ಮಿಸಿದಮನೆಗೆ ಪ್ರಧಾನಮಂತ್ರಿ ವಸತಿ ಯೋಜನೆಯರಾಷ್ಟ್ರೀಯ ಪ್ರಶಸ್ತಿ ಲಭ್ಯವಾಗಿದೆ. ವಿಶೇಷವಾಗಿರಾಜ್ಯಮಟ್ಟದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಈ ಮನೆಯನ್ನು ಗುರುತಿಸುವಮೂಲಕ ನಮ್ಮ ವಿಧಾನಸಭಾ ಕ್ಷೇತ್ರದ ಹೆಸರುರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುವಂತೆ ಆಗಿದೆ ಎಂದು ಶಾಸಕ ಟಿ.ರಘುಮೂರ್ತಿ ಸಂತಸ ವ್ಯಕ್ತಪಡಿಸಿದರು.
ಶುಕ್ರವಾರ ಶಾಸಕರ ಭವನದಲ್ಲಿಪ್ರಧಾನಮಂತ್ರಿಯವರ ರಾಷ್ಟ್ರೀಯ ಪುರಸ್ಕಾರಪಡೆದ ಬಿ.ಸಿ.ಪಂಕಜಾ ಮತ್ತು ಕುಟುಂಬ ವರ್ಗಹಾಗೂ ನಗರಸಭೆ ಅಧಿಕಾರಿಗಳು ಸಿಬ್ಬಂದಿಯನ್ನುಅಭಿನಂದಿಸಿ ಅವರು ಮಾತನಾಡಿದರು.ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನನ್ನ ಆಡಳಿತ ಅವ ಧಿಯಲ್ಲಿ ಹಲವಾರು ನೂತನ ಪ್ರಗತಿಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ನಿರೀಕ್ಷೆಗೂಮೀರಿದ ಅಭಿವೃದ್ಧಿ ಕಾಮಗಾರಿ ಈ ಕ್ಷೇತ್ರದಲ್ಲಿಉತ್ತಮವಾಗಿ ನಡೆದಿದ್ದು, ಇದಕ್ಕೆ ಕಿರೀಟವಿಟ್ಟಂತರಾಷ್ಟ್ರ ಮಟ್ಟದ ಪುರಸ್ಕಾರ ದೊರಕಿರುವುದು ಎಲ್ಲರೂ ಹೆಮ್ಮೆ ಪಡುವ ವಿಷಯ. ನಗರಸಭೆ ಪೌರಾಯುಕ್ತಪಿ.ಪಾಲಯ್ಯ, ಚಿತ್ರದುರ್ಗ ಪೌರಾಯುಕ್ತ ಜೆ.ಟಿ.ಹನುಮಂತರಾಜು ಫಲಾನುಭವಿಗೆ ಸೂಕ್ತ ಮಾರ್ಗದರ್ಶನ ನೀಡಿದ ನಗರಸಭೆ ಅ ಕಾರಿಗಳೂ ಸಹ ಪ್ರಶಂಸೆಗೆ ಆರ್ಹರು ಎಂದರು.
ಪೌರಾಯುಕ್ತ ಪಿ. ಪಾಲಯ್ಯ ಮಾತನಾಡಿ, ರಾಷ್ಟ್ರೀಯ ಪುರಸ್ಕಾರ ದೊರೆತ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಪ್ರಧಾನಮಂತ್ರಿಯವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನೀಕೆರಿ ಪ್ರಶಸ್ತಿ ಸ್ವೀಕರಿಸಿದ್ದಾರೆ ಎಂದರು.
ರಾಜ್ಯದ ಚಾಮರಾಜನಗರ, ತಾವರಗೆರೆ ಮತ್ತು ಚಳ್ಳಕೆರೆ ನಗರ ಮಾತ್ರ ಈಪ್ರಶಸ್ತಿಯನ್ನು ಪಡೆಯುತ್ತಿದೆ. ವಸತಿ ಯೋಜನೆ ಫಲಾನುಭವಿಗಳೂ ಸೇರಿದಂತೆ ಸರ್ಕಾರವಿವಿಧ ಯೋಜನೆಗಳನ್ನು ಸಿದ್ಧಪಡಿಸುವಾಗಹಲವಾರು ಆಯಾಮಗಳಲ್ಲಿ ಚಿಂತನೆ ನಡೆಸಿ ಫಲಾನುಭವಿಗಳನ್ನು ಗುರುತಿಸಲಾಗುತ್ತಿದೆ. ಕಳೆದ2016-17ನೇ ಸಾಲಿನ ಆಯ್ಕೆ ಇದಾಗಿದ್ದು, ಶಾಸಕರ ಮಾರ್ಗದರ್ಶನದಲ್ಲಿ ಈ ಕಾರ್ಯವನ್ನು ಮಾಡಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.