ದೊಡ್ಲ ಮಾರಮ್ಮ ದೇವಿ ಅದ್ಧೂರಿ ಉತ್ಸವ
Team Udayavani, Jan 9, 2020, 5:50 PM IST
ನಾಯಕನಹಟ್ಟಿ: ದೊಡ್ಲ ಮಾರಮ್ಮ ದೇವಿ ಉತ್ಸವ ಬುಧವಾರ ಸಂಭ್ರಮದಿಂದ ನೆರವೇರಿತು. 13 ವರ್ಷಗಳ ನಂತರ ಜರುಗಿದ ಉತ್ಸವಕ್ಕೆ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಜನರು ಆಗಮಿಸಿದ್ದರು.
ಮಂಗಳವಾರ ರಾತ್ರಿ ಎನ್. ದೇವರಹಳ್ಳಿ ಗ್ರಾಮದಿಂದ ಆಗಮಿಸಿದ ದೊಡ್ಲ ಮಾರಮ್ಮ ದೇವಿಯನ್ನು ಗ್ರಾಮದ ಜನರು ಬರಮಾಡಿಕೊಂಡರು. ದೀರ್ಘ ಕಾಲದ ನಂತರ ಆಗಮಿಸಿದ ದೇವತೆಯ ಆಗಮನಕ್ಕೆ ಸಾವಿರಾರು ಭಕ್ತರು ಕಾದು ಕುಳಿತಿದ್ದರು. ಬೆಸ್ಕಾಂ ಬಡಾವಣೆಯ ಸಮೀಪ ಕಾವಲಪ್ಪನವರ ನಿಂಗಣ್ಣನವರ ಹೊಲದ ಸಮೀಪ ದೇವಿಯನ್ನು ಬರಮಾಡಿಕೊಂಡು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ಪಟ್ಟಣಕ್ಕೆ ಕರೆ ತರಲಾಯಿತು. ಡೊಳ್ಳು, ತಮಟೆ ಹಾಗೂ ತ್ರಾಷ್‌ಗಳ ಸೇರಿದಂತೆ ವಿವಿಧ ವಾದ್ಯಗಳನ್ನು ಮೆರವಣಿಯಲ್ಲಿ ಬಳಸಲಾಯಿತು.
ಬುಧವಾರ ನಸುಕಿನಿಂದಲೇ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿದ ಅಕ್ಕಿ, ಬೇಳೆ, ಕುಂಕುಮ, ಬಳೆ ಸೇರಿದಂತೆ ಕಾಣಿಕೆ ಅರ್ಪಿಸಿದರು. ಮ್ಯಾಸ ಬೇಡರ ಹಾಗೂ ಪಶುಪಾಲಕರ ನಾನಾ ಸಂಪ್ರದಾಯಗಳಂತೆ ಪೂಜಾ ವಿಧಾನಗಳ ಜರುಗಿದವು. 13 ವರ್ಷಗಳ ನಂತರ ಜರುಗಿದ ಉತ್ಸವವಾಗಿದ್ದರಿಂದ ಪಟ್ಟಣದ ಜನರು ತಮ್ಮ ನೆಂಟರು, ಇಷ್ಟರನ್ನು ಕರೆಸಿದ್ದರು.
ಪಟ್ಟಣದಲ್ಲಿ ಪ್ರತಿ ಮನೆಗೆ ಒಂದು, ಎರಡು ಕುರಿಗಳಂತೆ ಭರ್ಜರಿ ಬಾಡೂಟ ಜರುಗಿತು. ಗ್ರಾಮ ದೇವತೆಯನ್ನು ಗುಡಿಯಿಂದ ಹೊರ ಹಾಕಿದ ನಂತರ ತಿಪ್ಪೇರುದ್ರಸ್ವಾಮಿಗಳು ದೇವಾಲಯದಲ್ಲಿ ನೆಲೆಸಿದ್ದರು. ತಾಮಸ ಶಕ್ತಿಗಳನ್ನು ಗ್ರಾಮದಿಂದ ಹೊರಹಾಕಿ, ಸಾತ್ವಿಕ ಶಕ್ತಿಗಳು ಬೆಳೆಯಬೇಕು ಎನ್ನುವ ಉದ್ದೇಶವನ್ನು ಶ್ರೀಗಳು ಹೊಂದಿದ್ದರು. ಮಾರಮ್ಮ ದೇವಿ ಮತ್ತೂಮ್ಮೆ ದೇವಾಲಯದ ಒಳಗೆ ಬರಲು ಹವಣಿಸುತ್ತಾಳೆ ಎನ್ನುವ ನಂಬಿಕೆ ಜನರಲ್ಲಿದೆ. ಹೀಗಾಗಿ ದೊಡ್ಲ ಮಾರಮ್ಮ ದೇವಿ ಉತ್ಸವದ ಮೆರವಣಿಗೆ ದೇವಾಲಯದ ಸಮೀಪ ಆಗಮಿಸುವ ಕೆಲವು ಸಮಯಕ್ಕೆ ಮುಂಚೆ ತಿಪ್ಪೇರುದ್ರಸ್ವಾಮಿ ದೇವಾಲಯದ ಗೇಟ್‌ಗಳನ್ನು ಮುಚ್ಚಲಾಯಿತು.
ನಂತರ ಮೆರವಣಿಗೆ ದೊಡ್ಲ ಮಾರಮ್ಮ ದೇವಾಲಯಕ್ಕೆ ಹೋದ ನಂತರ ದೇವಾಲಯದ ಗೇಟ್‌ನ್ನು ಪುನಃ ತೆರೆಯಲಾಯಿತು. ಕೆಲವು ಸಮಯದವರೆಗೆ ಭಕ್ತರಿಗೆ ಪ್ರಮುಖ ಗೇಟ್ ಮೂಲಕ ಪ್ರವೇಶ ನಿರಾಕರಿಸಲಾಗಿತ್ತು. ತಿಪ್ಪೇರುದ್ರಸ್ವಾಮಿ ದೇವಾಲಯದ ಮುಂದೆ ಬಂದಾಗ ದೇವಿ ತಮ್ಮ ಮೂಲ ದೇವಾಲಯಕ್ಕೆ ಹೋಗಲು ಪ್ರಯತ್ನ ನಡೆಸುತ್ತಾಳೆ. ಅರ್ಚಕರ ಮೂಲಕ ದೇವಿ ಪ್ರೇರೇಪಣೆ ನೀಡುತ್ತಾಳೆ ಎನ್ನುವು ನಂಬಿಕೆಯನ್ನು ಭಕ್ತರು ಹೊಂದಿದ್ದಾರೆ. ಗುರುವಾರ ದೊಡ್ಲ ಮಾರಮ್ಮ ದೇವಿ ಪುನಃ ಎನ್. ದೇವರಹಳ್ಳಿ ಗ್ರಾಮಕ್ಕೆ ತೆರಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
ByPolls; ಕಾಂಗ್ರೆಸ್ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.