ವಲಸೆ ಕಾರ್ಮಿಕರಿಗೆ ಖಾತ್ರಿ ಕೆಲಸ ಕೊಡಿ
Team Udayavani, May 7, 2020, 1:07 PM IST
ಸಾಂದರ್ಭಿಕ ಚಿತ್ರ
ನಾಯಕನಹಟ್ಟಿ: ಬೆಂಗಳೂರಿನಿಂದ ವಲಸೆ ಬಂದಿರುವ ಎಲ್ಲ ಕಾರ್ಮಿಕರಿಗೆ ಸ್ವ ಸ್ಥಳಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವಕಾಶ ನೀಡಬೇಕು ಎಂದು ಜಿಪಂ ಸಿಇಒ ಎಸ್. ಹೊನ್ನಾಂಬ ಹೇಳಿದ್ದಾರೆ.
ಎನ್. ಮಹಾದೇವಪುರ ಗ್ರಾಪಂ ವ್ಯಾಪ್ತಿಯ ಮನಮೈನಹಟ್ಟಿ ಗ್ರಾಮದಲ್ಲಿ ಬುಧವಾರ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಸರಕಾರ ಈಗಾಗಲೇ 100 ದಿನಗಳ ಕೂಲಿ ದಿನಗಳನ್ನು ಒದಗಿಸುವಂತೆ ಆದೇಶ ನೀಡಿದೆ. ಕೊರೊನಾ ಆವರಿಸಿರುವ ಇಂದಿನ ಸಂದರ್ಭದಲ್ಲಿ ಕೂಲಿ ಕಾರ್ಯಗಳು ಸ್ಥಗಿತಗೊಂಡಿವೆ. ಹೀಗಾಗಿ ಎಲ್ಲ ಗ್ರಾಪಂಗಳಲ್ಲಿ ಕೂಲಿ ಕಾರ್ಯ ಆರಂಭಿಸಲಾಗಿದೆ. ಸರಕಾರ ಈಗಾಗಲೇ 100 ಮಾನವ ದಿನಗಳ ಖಾತ್ರಿ ಯೋಜನೆಗೆ ಅನುಮೋದನೆ ನೀಡಿದೆ. ರೈತರು ತಮ್ಮ ಹೊಲಗಳಲ್ಲಿ ರೇಷ್ಮೆ, ಕೃಷಿ ಹೊಂಡ ಸೇರಿದಂತೆ ನಾನಾ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಹೆಚ್ಚುವರಿ 50 ದಿನ ಉದ್ಯೋಗ ನೀಡಬೇಕು ಎಂದು ಗ್ರಾಪಂಗಳ ಒತ್ತಾಯವಾಗಿದೆ. ಸರಕಾರದಿಂದ ಒಪ್ಪಿಗೆ ಬಂದ ನಂತರ ಇದನ್ನು 150 ದಿನಗಳಿಗೆ ಮುಂದುವರಿಸಲಾಗುವುದು. ಬೆಂಗಳೂರಿನಿಂದ ತಮ್ಮ ಹಳ್ಳಿಗಳಿಗೆ ಹಿಂದುರುಗಿದ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವಕಾಶ ನೀಡಬೇಕು. ಅದೇ ಗ್ರಾಮದವರಾಗಿದ್ದರೆ, ಅರ್ಜಿ ನೀಡಿದ ಒಂದೆರಡು ದಿನಗಳಲ್ಲಿ ಕೂಲಿ ಕಾರ್ಯ ನೀಡಬೇಕು ಎಂದು ಹೇಳಿದರು.
ಪಿಡಿಒ ಎಸ್. ರಾಘವೇಂದ್ರ ಮಾತನಾಡಿ, ಎನ್ ಮಹಾದೇವಪುರ ಗ್ರಾಮದಲ್ಲಿ 3 ಲಕ್ಷ ರೂ. ವೆಚ್ಚದ ಈ ಕಾಮಗಾರಿಯಲ್ಲಿ 129 ಕೂಲಿ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮನಮೈನಹಟ್ಟಿ ಗ್ರಾಮದ ಗೋಕಟ್ಟೆ ಹೂಳು ತೆಗೆಯುವ ಮೂರು ಲಕ್ಷ ರೂ. ಕಾಮಗಾರಿಯಲ್ಲಿ 110 ಕೂಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಈ ದಿನ 497 ಜನರು ಉದ್ಯೋಗ ಖಾತ್ರಿಯ ನಾನಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ವಿವರಿಸಿದರು. ಉಪ ಕಾರ್ಯದರ್ಶಿಡಾ. ಎಸ್.ರಂಗಸ್ವಾಮಿ, ತಾಪಂ ಇಒ ಡಾ.ಶ್ರೀಧರ ಬಾರಕೇರ್, ಸಂಯೋಜಕ ಮಂಜುನಾಥ, ಮೊನಿಷ, ಬೋರನಾಯಕ, ಎನ್. ತಿಪ್ಪೇಸ್ವಾಮಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
ByPolls; ಕಾಂಗ್ರೆಸ್ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.