ಕೆರೆ-ಹಳ್ಳ ಪುನಶ್ಚೇತನಕ್ಕೆ ಅಗತ್ಯ ಕ್ರಮ: ಗೂಳಿಹಟ್ಟಿ
Team Udayavani, Jun 17, 2020, 9:08 AM IST
ಹೊಸದುರ್ಗ: ತಾಲೂಕಿನ ಕೆಲವು ಕೆರೆ ಕಟ್ಟೆ, ಹಳ್ಳಗಳ ಪುನಶ್ಚೇತನಕ್ಕೆ ಜಿಲ್ಲಾ ಖನಿಜ ಪ್ರತಿಷ್ಠಾನ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಸೂಚಿಸಲಾಗಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ತಿಳಿಸಿದರು.
ತಾಲೂಕಿನ ದೇವಪುರ ಸಮೀಪದ ಹಿರೇಹಳ್ಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಎಲ್ಲ ಹೋಬಳಿಗಳಲ್ಲೂ ಹಳ್ಳಗಳನ್ನು ಗುರುತಿಸಿ ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಸುಮಾರು 15 ಕಿಮೀ ಉದ್ದದ ಹಿರೇಹಳ್ಳದಲ್ಲಿದ್ದ ಕಲ್ಲು ಮುಳ್ಳು ತೆಗೆಸಿ ಜೆಸಿಬಿ ಬಳಸಿ ದುರಸ್ತಿ ಮಾಡಿಸಿದ್ದರಿಂದ ಕಾಲುವೆಯ ಸ್ಪಷ್ಟ ಚಿತ್ರಣ ಕಂಡು ಬಂದಿದೆ. ಮುಂದೆ ಹಳ್ಳದ ಹೂಳೆತ್ತುವ, ಎರಡು ಬದುಗಳ ನಿರ್ಮಾಣ, ಕಲ್ಲು ಪಿಚ್ಚಿಂಗ್ ಸೇರಿದಂತೆ ಸುಮಾರು 10 ಚೆಕ್ ಡ್ಯಾಂಗಳ ನಿರ್ಮಾಣ ಕಾಮಗಾರಿಯನ್ನು ವಿವಿಧ ಇಲಾಖೆ ಹಾಗೂ ಉದ್ಯೋಗ ಖಾತ್ರಿ ಅಡಿಯಲ್ಲಿ ಕೈಗೊಳ್ಳಲಾಗುವುದು ಎಂದರು.
ದೇವರಹಟ್ಟಿ ಸಮೀಪದ ನೇರಲ ಹಳ್ಳ, ಬಾಗೂರು ಸಮೀಪದ ನ್ಯಾಕಿಕೆರೆ (ಶೃಂಗೇರಿ ಹಳ್ಳ), ಮಾಡದಕೆರೆ ಹೋಬಳಿಯ ಹಳ್ಳಗಳ ಪುನಶ್ಚೇತನ ಮಾಡಲಾಗುತ್ತಿದೆ. ಹಳ್ಳಗಳ ಪುನಶ್ಚೇತನದಿಂದ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹರಿಯುವ ಭದ್ರಾ ನೀರಿನಿಂದ ಕೆರೆ ಕಟ್ಟೆ ತುಂಬಿಸಲು ಹಾಗೂ ಅಂತರ್ಜಲ ವೃದ್ಧಿಗೆ ಸಹಕಾರಿ. ಭದ್ರಾ ಮೇಲ್ದಂಡೆ ಕಾಲುವೆಯ ಬಲ ಭಾಗದ ರೈತರಿಗೆ ಭದ್ರಾ ಯೋಜನೆಯ ಫಲ ಸಿಗಲಿದ್ದು, ಹಳ್ಳಗಳಲ್ಲಿ ನಿರ್ಮಿಸುವ ಚೆಕ್‌ಡ್ಯಾಂಗಳಲ್ಲಿ ನೀರು ಸಂಗ್ರಹಿಸಿ ಭದ್ರಾ ಮೇಲ್ದಂಡೆ ಕಾಲುವೆಯ ಎಡ ಭಾಗದಲ್ಲಿರುವ ಕೆರೆ ಕಟ್ಟೆ, ಚೆಕ್ ಡ್ಯಾಂಗಳಿಗೆ ಲಿಫ್ಟ್ ಮೂಲಕ ನೀರುಣಿಸಲು ಯೋಜನೆ ರೂಪಿಸಲಾಗುವುದು. ಆ ಮೂಲಕ ಭದ್ರಾ ನೀರು ವಂಚಿತ ಗ್ರಾಮಗಳಿಗೆ ನೀರು ತಲುಪಿಸಲಾಗುವುದು ಎಂದರು.
ಮಹಾರಾಷ್ಟ್ರ ಸೇರಿದಂತೆ ಅನ್ಯರಾಜ್ಯಗಳಿಗೆ ವಲಸೆ ಹೋಗಿದ್ದ ಸ್ಥಳೀಯರು ವಾಪಸಾಗಿದ್ದು, ಎಲ್ಲರಿಗೂ ಉದ್ಯೋಗಕೊಡಲು ಕಡ್ಡಾಯವಾಗಿ ಜಾಬ್‌ಕಾರ್ಡ್ ನೀಡುವಂತೆ ಸೂಚಿಸಲಾಗಿದೆ ಎಂದ ಗೂಳಿಹಟ್ಟಿ, ಹಿರೇಹಳ್ಳ ಕಾಮಗಾರಿಯನ್ನು ಯಂತ್ರ ಬಳಸಿ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕರು ವಿನಾಕಾರಣ ಆರೋಪಿಸಿದ್ದರು. ಈಗ ಅವರೇ ಬಂದು ಖಾತ್ರಿ ಕಾಮಗಾರಿಯನ್ನು ವೀಕ್ಷಿಸಬಹುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
ByPolls; ಕಾಂಗ್ರೆಸ್ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.