ಯಾವುದೇ ಪಕ್ಷದ ಪ್ರಚಾರಕ ಅಲ್ಲ: ಸುದೀಪ್
Team Udayavani, May 8, 2018, 7:00 AM IST
ಕೊಂಡ್ಲಹಳ್ಳಿ: “ಈ ಬಾರಿ ಚುನಾವಣೆಯಲ್ಲಿ ಯಾವ ಪಕ್ಷದ ಪರವೂ ತಾವು ಪ್ರಚಾರ ನಡೆಸುತ್ತಿಲ್ಲ. ಆದರೆ ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಸ್ನೇಹಿತರಾಗಿದ್ದು, ಅವರ ಪರ ಪ್ರಚಾರ ಮಾಡುತ್ತಿರುವೆ’ ಎಂದು ಚಿತ್ರನಟ ಸುದೀಪ್ ಹೇಳಿದರು.
ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಪರವಾಗಿ ಸೋಮವಾರ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮತ ಯಾಚಿಸಿದ ಅವರು, “ಕಳೆದ 25 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನಾನು ಯಾವ ಪಕ್ಷದ ಪರವಾಗಿಯೂ ಪ್ರಚಾರದಲ್ಲಿ ತೊಡಗಿಲ್ಲ. ಶ್ರೀರಾಮುಲು ನನ್ನ ಸ್ನೇಹಿತರಾಗಿದ್ದು, ಅವರಿಂದ ಮೊಳಕಾಲ್ಮೂರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯವಿದೆ. ಈ ಕಾರಣಕ್ಕೆ ಅವರ ಪರವಾಗಿ ಪ್ರಚಾರ ಮಾಡಲು ಬಂದಿದ್ದೇನೆಯೇ ವಿನಃ ನಾನು ಯಾವುದೇ ಪಕ್ಷದ ಕ್ಯಾಂಪೇನರ್ ಅಲ್ಲ’ ಎಂದು ಸ್ಪಷ್ಟಪಡಿಸಿದರು.
ಕೊಂಡ್ಲಹಳ್ಳಿ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಕಾತರದಿಂದ ಕಾದಿದ್ದರು. 3 ಗಂಟೆಗೂ ಹೆಚ್ಚು ಕಾಲ ಬಿರುಬಿಸಿಲಿನಲ್ಲಿ ನಿಂತಿದ್ದರು. ಸಾವಿರಾರು ಅಭಿಮಾನಗಳ ನಡುವೆ ದಿವ್ಯಾಂಗ ಮಹಿಳೆ ಕೂಡ ಇದ್ದರು. ಇದನ್ನು ಗಮನಿಸಿದ ಸುದೀಪ್ ಅವರತ್ತ ಕೈಬೀಸಿ ನಮಸ್ಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.