ತುಂಬಿ ಹರಿದ ಹಳ್ಳ-ಕೊಳ್ಳಗಳು
Team Udayavani, May 19, 2020, 12:24 PM IST
ಕೊಂಡ್ಲಹಳ್ಳಿ: ಸಮೀಪದ ಮಾರಮ್ಮನಹಳ್ಳಿಯಲ್ಲಿ ಸುರಿದ ಆಲಿಕಲ್ಲು ಮಳೆ ಸುರಿದು ಹಳ್ಳ-ಕೊಳ್ಳಗಳು ತುಂಬಿ ಹರಿದಿದ್ದು, ಚೆಕ್ ಡ್ಯಾಂಗಳು ಭರ್ತಿಯಾಗಿವೆ. ಗಾಳಿಗೆ ಗ್ರಾಮದಲ್ಲಿ ಮರಗಳು ಬಿದ್ದು ಗ್ರಾಮದ ಇಸ್ಲಾಂಪುರ ರಸ್ತೆ ಬಂದ್ ಆಗಿತ್ತು. ರಾತ್ರಿಯಿಂದ ಸೋಮವಾರ ಮಧ್ಯಾಹ್ನವರೆಗೂ ಕರೆಂಟ್ ಸಂಪರ್ಕ ಇರಲಿಲ್ಲ. ಮನೆಗಳ ಮೇಲೆ ಮರಗಳು, ವಿದ್ಯುತ್ ಕಂಬ ಬಿದ್ದು ಹಾನಿ ಸಂಭವಿಸಿದೆ. 20ಕ್ಕೂ ವಿದ್ಯುತ್ ಕಂಬಗಳು ಗಾಳಿಗೆ ಮುರಿದು ಬಿದ್ದಿವೆ. ನೀರಾವರಿ ತೋಟಗಳಲ್ಲಿನ ಟೊಮಾಟೋ, ಪಪ್ಪಾಯಿ, ಈರುಳ್ಳಿ ಬೆಳೆಗಳು ನೆಲಕ್ಕಚ್ಚಿ ರೈತರಿಗೆ ಅಪಾರ ಹಾನಿಯಾಗಿದೆ. ಕೊಂಡ್ಲಹಳ್ಳಿ, ಮೊಗಲಹಳ್ಳಿ, ಬಿ.ಜಿ.ಕೆರೆ, ಕೋನಸಾಗರ, ಉಡೇವು ಗ್ರಾಮಗಳ ಭಾನುವಾರ ಭಾರಿ ಗಾಳಿ-ಮಳೆಯಿಂದ ಅಪಾರ ಹಾನಿಯಾಗಿದೆ.
ಮಾರಮ್ಮನಹಳ್ಳಿ, ಕೊಂಡ್ಲಹಳ್ಳಿ, ಮಾರಮ್ಮನಹಳ್ಳಿ, ಮೊಗಲಹಳ್ಳಿಗಳ ಹಳ್ಳಗಳು ತುಂಬಿ ಹರಿದಿವೆ. ಚೆಕ್ ಡ್ಯಾಂಗಳು ಭರ್ತಿಯಾಗಿವೆ. ಗ್ರಾಮಸ್ಥರು ತುಂಬಿ ಹರಿಯುವ ಹಳ್ಳ ಸಂತಸಪಟ್ಟರು. ಕೊಂಡ್ಲಹಳ್ಳಿಯ ಹಳ್ಳದ ದಂಡೆಯಲ್ಲಿ ತಾ ಪಂ ಸದಸ್ಯ ಟಿ.ರೇವಣ್ಣ ಪೂಜೆ ಸಲ್ಲಿಸಿದರು. ಸ್ಥಳಕ್ಕೆ ಕಂದಾಯ ಇಲಾಖೆಯ ನಾಗರಾಜ್ ,ಬೊಮ್ಮಣ್ಣ, ಕೃಷಿ ಇಲಾಖೆ ನಾಗರಾಜ್ ಭೇಟಿ ನೀಡಿದ ನಷ್ಟದ ವಿವರ ಮಾಹಿತಿ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.