ಧರ್ಮ ಸಂರಕ್ಷ ಣೆಗೆ ಗಮನ ಕೊಡಿ


Team Udayavani, Apr 19, 2021, 9:30 PM IST

್ಗಹ್ದಗಸ

ಚಿತ್ರದುರ್ಗ: ಧರ್ಮವನ್ನು ನಾವು ರಕ್ಷಣೆ ಮಾಡಿದರೆ, ಆಪತ್ಕಾಲದಲ್ಲಿ ಅದು ನಮ್ಮ ರಕ್ಷಣೆಗೆ ಬರುತ್ತದೆ. ಎಲ್ಲರೂ ಧರ್ಮವನ್ನು ಅರಿತು ಪಾಲನೆ ಮಾಡಬೇಕು ಎಂದು ವೇಣುಕಲ್ಲುಗುಡ್ಡದ ಹಾಲಪ್ಪಯ್ಯ ಸ್ವಾಮಿ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ರಂಗಯ್ಯನಬಾಗಿಲು ಬಳಿ ಇರುವ ಉಜ್ಜಯಿನಿ ಮಠದಲ್ಲಿ ನಡೆದ ಲಿಂಗೈಕ್ಯ ಮರುಳಾರಾಧ್ಯ ಶಿವಾಚಾರ್ಯ ಭಗವತ್ಪಾದರ 26ನೇ ವರ್ಷದ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜನ ಜಾಗೃತಿ ಕಾರ್ಯಕ್ರಮ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ರಾಜ್ಯದಲ್ಲಿ ಸರ್ಕಾರ ಮಾಡದಂತಹ ಕೆಲಸಗಳನ್ನು ನಾಡಿನ ವಿವಿಧ ಮಠಗಳು ಮಾಡುತ್ತಿವೆ. ವಿದ್ಯೆ, ಅನ್ನದಾನ ಮಾಡುವ ಮೂಲಕ ಸರ್ಕಾರದ ಹೊರೆಯನ್ನು ಕಡಿಮೆ ಮಾಡಿವೆ ಎಂದರು. ಹಿಂದೆ ರಾಜ-ಮಹಾರಾಜರು ಗುರುಗಳ ಆಜ್ಞೆಯನ್ನು ಮೀರುತ್ತಿರಲಿಲ್ಲ. ಗುರುಗಳ ಅನುಮತಿ ಸಿಕ್ಕಿದ ನಂತರವೇ ಕೆಲಸಕ್ಕೆ ಮುಂದಾಗುತ್ತಿದ್ದರು. ಚಿತ್ರದುರ್ಗದ ಮಹಾರಾಜರು ಸಹ ಮುರುಘಾ ಮಠದ ಶ್ರೀಗಳ ಆಣತಿಯಂತೆ ನಡೆಯುವ ಮೂಲಕ ಉತ್ತಮ ಆಡಳಿತ ನೀಡಿದ್ದಾರೆ.

ಇಂದಿಗೂ ಗುರುವಿನ ಕಾರುಣ್ಯ ಅತ್ಯಗತ್ಯವಾಗಿದೆ. ಅದಕ್ಕೆ ಈಗಿನ ಸರ್ಕಾರಗಳೂ ಹೊರತಾಗಿಲ್ಲ ಎಂದು ತಿಳಿಸಿದರು. ಮಾನವನಿಗೆ ಭಗವಂತ ಎಲ್ಲಾ ರೀತಿಯಾದ ಸೌಲಭ್ಯ ನೀಡಿದ್ದಾನೆ. ಗಾಳಿ, ಮಳೆ, ನೀರು, ಬೆಂಕಿಯಂತಹ ವಸ್ತುಗಳನ್ನು ನೀಡಿದ್ದಾನೆ. ಇವುಗಳ ಉಪಯೋಗ ಪಡೆದುಕೊಂಡ ಮಾನವ ದೇವರು ನಮಗೇನು ಕೊಟ್ಟಿದ್ದಾನೆ ಎಂದು ಪ್ರಶ್ನೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾನೆ ಎಂದು ವಿಷಾದಿಸಿದರು. ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರದ ಕರೆವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜನ ಸ್ವಾಮೀಜಿ, ಮುಸ್ಟೂರಿನ ಓಂಕಾರೇಶ್ವರ ಮಠದ ಶ್ರೀ ರುದ್ರಮುನಿ ಸ್ವಾಮಿಜಿ, ಉಜ್ಜಯನಿ ಮಠದ ನಿಯೋಜತ ಉತ್ತರಾಧಿಕಾರಿಗಳಾದ ಅಭಿಷೇಕ ದೇವರು, ಕಾರ್ಯದರ್ಶಿ ಈಶ್ವರಪ್ರಸಾದ್‌ ಪಾಲ್ಗೊಂಡಿದ್ದರು. ಎಂಟು ವಟುಗಳಿಗೆ ಲಿಂಗದೀಕ್ಷೆ ನೀಡಲಾಯಿತು. ಶ್ರೀ ಮಠದಲ್ಲಿನ ಬಿಲ್ವವೃಕ್ಷಕ್ಕೆ ಶಿವದೀಕ್ಷೆ, ಲಿಂಗೈಕ್ಯ ಜಗದ್ಗುರುಗಳ ಕತೃì ಗದ್ದುಗೆಗೆ ಹಾಗೂ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ಮಹಾ ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿ ನೆರವೇರವೇರಿದವು. ಲೋಕ ಕಲ್ಯಾಣಕ್ಕಾಗಿ ಗಣಹೋಮ, ನವಗ್ರಹ ಹೋಮ, ಧನ್ವಂತರಿ ಹೋಮ ಮಾಡಲಾಯಿತು.

ಟಾಪ್ ನ್ಯೂಸ್

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

Chitradurga: ನಾವು ದರ್ಶನ್‌ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ

Chitradurga: ನಾವು ದರ್ಶನ್‌ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ

Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ

Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ

KJ-Goerge

ತೋಟದ ಮನೆಗಳಿಗೆ ಹಗಲು ತ್ರಿಫೇಸ್‌, ರಾತ್ರಿ ಸಿಂಗಲ್‌ ಫೇಸ್‌ ವಿದ್ಯುತ್‌: ಸಚಿವ ಜಾರ್ಜ್‌

K-J-George

ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

crime

Padubidri: ಸ್ಕೂಟಿಗೆ ಈಚರ್‌ ವಾಹನ ಢಿಕ್ಕಿ; ಸವಾರನಿಗೆ ಗಾಯ

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-wl

ಅಖಿಲ ಭಾರತ ಅಂತರ್‌ ವಿ.ವಿ.ವೇಟ್‌ಲಿಫ್ಟಿಂಗ್‌:ಮಂಗಳೂರು ವಿವಿ ರನ್ನರ್ ಅಪ್‌

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.