ಫಲ-ಪುಷ್ಪ ಪ್ರದರ್ಶನದಲ್ಲಿಲ್ಲ ಜನದರ್ಶನ!


Team Udayavani, Mar 24, 2018, 4:19 PM IST

cta.jpg

ಚಿತ್ರದುರ್ಗ: ತೋಟಗಾರಿಕೆ ಇಲಾಖೆ ಶ್ರಮವಹಿಸಿ ಕೆಲಸ ಮಾಡದೆ ಬೇರೆ ಕಡೆಗಳಿಂದ ಹೂ, ಸ್ತಬ್ದ ಚಿತ್ರ ತರಿಸಿ ಜನಾಕರ್ಷಣೆಗೆ ಸರ್ಕಸ್‌ ಮಾಡಿದ್ದರೂ ಜನತೆಯಿಂದ ನೀರಸ ಪ್ರತಿಕ್ರಿಯೆ ಕಂಡು ಬಂದಿತು. ಪಿಯು ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮಯದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸುವ ಮೂಲಕ ಫಲಪುಷ್ಪಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಪಂ ಅಧ್ಯಕ್ಷರು ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳು ಉದ್ಘಾಟನೆಯತ್ತ  ಸುಳಿಯದಿದ್ದರಿಂದ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಭಾಗ್ಯವನ್ನೇ ಕಾಣಲಿಲ್ಲ. ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ, ಜಿಪಂ ಸಿಇಒ ಪಿ.ಎನ್‌.ರವೀಂದ್ರ ಸೇರಿದಂತೆ ಇಲಾಖೆ ಅಕಾರಿಗಳು ಮಾತ್ರ ಪಾಲ್ಗೊಂಡಿದ್ದರಿಂದ ಕಾರ್ಯಕ್ರಮವು ಉದ್ಘಾಟನೆಯಾಗಲಿಲ್ಲ.

ಜೋಡೆತ್ತುಗಳ ಬಂಡಿ: ಡಾ| ರಾಜ್‌ಕುಮಾರ್‌ ಜೋಡೆತ್ತುಗಳ ಬಂಡಿ ಹೊಡೆಯುತ್ತಿರುವುದು ಪ್ರಮುಖ ಆಕರ್ಷಣೆ. ಎತ್ತುಗಳು ಹಾಗೂ ಗಾಡಿಯು ವಿವಿಧ ಹೂ ಗಳಿಂದ ಅಲಂಕೃತಗೊಳಿಸಿದ್ದು, ರೈತರ ಹಿರಿಮೆ ತಿಳಿಸುವ ಚಿತ್ರಣ ರೂಪಗೊಂಡಿದೆ. ವಿವಿಧ ರೀತಿಯ ಹಣ್ಣು ಮತ್ತು ತರಕಾರಿ ಬಳಸಿ ಕನ್ನಡ ಬಂಡಿ ಅಲಂಕರಿಸಲಾಗಿದೆ.

ರೇಸಿಂಗ್‌ ಕಾರ್ಸ್‌: ರೈತರು ಬೆಳೆದಂತಹ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡ ರೇಸಿಂಗ್‌ ಕಾರ್, ಮಾವು ಮತ್ತು ಕಿತ್ತಲೆ ಹಣ್ಣಿನ ಫೋಟೋ ಫ್ರೇಮ್‌ ಗಳು, ಹಣ್ಣು ಮತ್ತು ತರಕಾರಿಗಳಿಂದ ಜಿಂಕೆ ಮತ್ತು ಹುಲಿ ಹಾಗೂ ಮುಖ್ಯ ಆರ್ಕಷಣೆಯಾಗಿ ಊಟಿ ಪುಷ್ಪಗಳಿಂದ ಇಕ್ಕೆಬಾನ ಜೋಡಣೆ ಮಾಡಲಾಗಿದೆ. 

ಅಣಬೆ: ಆಹಾರ ಭದ್ರತೆ ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಅಣಬೆ ಒಂದು ಪೌಷ್ಟಿಕ ಸಸ್ಯ ಆಹಾರವಾಗಿದೆ. ಸಾರ್ವಜನಿಕರಿಗೆ ಇದರ ಮಹತ್ವ ತಿಳಿಸಲು ಅಣಬೆ ಬೆಳೆಯ ಬೆಳೆಯುವ ವಿಧಾನವನ್ನು ಸ್ತಬ್ದಚಿತ್ರಗಳ ಮುಖಾಂತರ ಅನಾವರಣಗೊಳಿಸಲಾಗಿದೆ.

ಪುಷ್ಪಗಳ ಕಾರುಬಾರು: ವಿವಿಧ ಪುಷ್ಪ ಜೋಡಣೆಗಳಿಗೆ ಹಲವು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ 50ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಆರ್ಕಿಡ್ಸ್‌, ಕಾರ್ನೆಶನ್‌, ಕಾಕ್ಸ್‌ ಕೂಂಬ್‌, ಸೆಲೋಶಿಯಾ, ಪ್ಲಾಕ್ಸ್‌, ಗಾಕ್ಸೀನಿಯ, ಕಲಂಚಾ, ಲಿಲ್ಲಿಸ್‌, ಇಂಪೇಷನ್ಸ್‌(ಮಿಕ್ಸ್‌ಡ್‌), ಡೇಲಿಯಾ(ಡ್ವಾರ್ಫ್‌), ಸಾಲ್ವಿಯಾ(ಕೆಂಪು, ನೀಲಿ ಕೇಸರಿ, ಬಿಳಿ) ಚೆಂಡು ಹೂ, ಚಿಂತಾಮಣಿ ಚೆಂಡು ಹೂ ಜಿನಿಯಾ, ಪೆಟೂನಿಯಾ, ಕಾಸ್‌ ಮಾಸ್‌, ಬಾಲ್ಸಂ, ಜಿರೇನಿಯಂ, ಹಾಲಿಹಾಕ್‌, ಆಂಟಿರಿನಮ್‌, ಡಯಾಂತಸ್‌, ಕ್ಯಾಲೊಂಡೋಲಾ, ಸೇವಂತಿಗೆ, ಪೆಂಟಾಸ್‌, ಫ್ಯಾನ್ಸಿ, ಇಪೋರ್ಬಿಯಮಿಲ್ಲಿ ಫ್ಯಾಂಸಿಟಿಯಾ ಇತ್ಯಾದಿ ಸುಮಾರು ಹತ್ತು ಸಾವಿರ ವಿವಿಧ ಪುಷ್ಪ ಸಸಿಗಳು, ನೂರಕ್ಕೂ ಹೆಚ್ಚು ಬಗೆಯ ತಳಿಗಳು, ಒಂದು ಲಕ್ಷಕ್ಕೂ ಹೆಚ್ಚು ಪುಷ್ಪ ಸಸಿಗಳನ್ನು
ಪ್ರದರ್ಶಿಸುವುದರೊಂದಿಗೆ ಪುಷ್ಪ ರಸಿಕರಿಗೆ ಪ್ರದರ್ಶನ ಮುದ ನೀಡುತ್ತಿದೆ.

ಪ್ರದರ್ಶನ: ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಇತರೆ ರೈತರು ಬೆಳೆದ ಹೂ, ತರಕಾರಿ, ಹಣ್ಣು ಹಾಗೂ ಇತರೆ ವಿಶೇಷವಾದ ತೋಟಗಾರಿಕೆ ಉತ್ಪನ್ನಗಳನ್ನು ಫಲ-ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದೆ.

ತಾರಸಿ ತೋಟ: ಹಣ್ಣು ಮತ್ತು ತರಕಾರಿಗಳು ಖನಿಜಾಂಶ, ಜೀವಸತ್ವಗಳು, ನಾರಿನಾಂಶ ಮತ್ತು ಸೂಕ್ಷ್ಮ ಪೋಷಕಾಂಶ ಹೊಂದಿದ್ದು, ಜೀವರಕ್ಷಕಗಳಾಗಿ ಕೆಲಸ ಮಾಡುತ್ತಿವೆ.ಯತೇಚ ಬಳಸಿದಲ್ಲಿ ವಿವಿಧ ಮಾರಕ ರೋಗ ಬರದಂತೆ ತಡೆಗಟ್ಟಬಹುದಾಗಿದೆ ಎಂದು ಡಬ್ಲ್ಯುಎಚ್‌ಒ ಮತ್ತು ಎಫ್‌ಎಒ ಸಂಸ್ಥೆಗಳಿಂದ ದೃಢಪಡಿಸಿವೆ. ಆಧುನಿಕ ಜೀವನ ಶೈಲಿಯಿಂದ ಹಣ್ಣು ಮತ್ತು ತರಕಾರಿಗಳ ಸೇವನೆ ಕಡಿಮೆಯಾಗುತ್ತಿದ್ದು, ಸಮತೋಲನ ಆಹಾರ ಕೊರತೆಯಿಂದ ಬಹಳಷ್ಟು ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಕೈತೋಟ ಮತ್ತು ತಾರಸಿ ತೋಟಗಳನ್ನು ಮಿತವಾಗಿ ನೀರನ್ನು ಬಳಸಿ ಅಭಿವೃದ್ಧಿಗೊಳಿಸಲು ಉತ್ತೇಜನ ನೀಡುವ ಸಲುವಾಗಿ ಕೈತೋಟಗಳ ಮತ್ತು ತಾರಸಿ ತೋಟಗಳ ಪ್ರಾತ್ಯಕ್ಷತೆ ಹಮ್ಮಿಕೊಳ್ಳಲಾಗಿದೆ. 

ಕೆತ್ತನೆ: ದೇಶಕ್ಕಾಗಿ ಪ್ರಾಣ ಮುಡಿಪಾಗಿಟ್ಟ ವೀರ ಸೈನಿಕರು, ಕನ್ನಡ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನು ಹಣ್ಣು ಮತ್ತು ತರಕಾರಿ ಬಳಸಿ ಸುಂದರವಾಗಿ ಪ್ರತಿಬಿಂಬಿಸಲಾಗಿದೆ.
 
ಲ್ಯಾಂಡ್‌ ಸ್ಕೇಪಿಂಗ್‌: ವಿವಿಧ ಜಾತಿ ಹೂವುಗಳಿಂದ ಸೂರ್ಯನಿಂದ ಹೊರಹೊಮ್ಮುವ ಕಿರಣಗಳನ್ನು ಬಿಂಬಿಸುವ ಉದ್ಯಾನವನ ತಯಾರಿಸಲಾಗಿದೆ. ಈ ಮೂಲಕ ವಿವಿಧ ಜಾತಿಯ ಹೂವುಗಳ ಪರಿಚಯವಾಗುತ್ತಿದೆ.
 
ಹೊಂಡ: ಗುಡ್ಡದ ಮೇಲಿನಿಂದ ನೀರು ಹರಿದು ಬಂದು ಹೊಂಡದಲ್ಲಿ ನಿಲ್ಲುವ ಪ್ರಕೃತಿ ಬಿಂಬಿಸುವ ಪ್ರದರ್ಶನವಿದೆ. ಹೊಂಡದಲ್ಲಿ ಜೀವಂತ ಬಾತುಕೋಳಿ, ಗುಡ್ಡದಲ್ಲಿ ಜೀವಂತ ಮೊಲ ಬಿಟ್ಟು ಮಕ್ಕಳಿಗೆ ಸಂತೋಷ ನೀಡುವುದರ ಜೊತೆಗೆ ಜಲಪಾತದ ಮನಮೋಹಕ ದೃಶ್ಯ ಮನಸೂರೆಗೊಳ್ಳುತ್ತಿದೆ.

ಕಾರಂಜಿ: ಚಿಕ್ಕ ಮತ್ತು ಚೊಕ್ಕದಾದ ನೀರಿನ ಕಾರಂಜಿ ಈ ಬಾರಿಯ ಫಲ-ಪುಷ್ಪ ಪ್ರದರ್ಶನದಲ್ಲಿ ಅನಾವರಣಗೊಂಡಿದೆ. 

ಹರಿಯಬ್ಬೆ ಹೆಂಜಾರಪ್ಪ

ಟಾಪ್ ನ್ಯೂಸ್

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ

Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ

KJ-Goerge

ತೋಟದ ಮನೆಗಳಿಗೆ ಹಗಲು ತ್ರಿಫೇಸ್‌, ರಾತ್ರಿ ಸಿಂಗಲ್‌ ಫೇಸ್‌ ವಿದ್ಯುತ್‌: ಸಚಿವ ಜಾರ್ಜ್‌

K-J-George

ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ

6-chitradurga

Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್‌

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.