ಲಾಕ್‌ಡೌನ್‌ಗೆ ಜನರ ಡೋಂಟ್ ಕೇರ್
Team Udayavani, Jul 20, 2020, 1:25 PM IST
ಚಿತ್ರದುರ್ಗ: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ನಿಗದಿ ಮಾಡಿರುವ ಸಂಡೇ ಲಾಕ್‌ಡೌನ್‌ಗೆ ಆಷಾಢದ ಕೊನೆಯ ಭಾನುವಾರ ತುಸು ಅಡ್ಡಿಯಾಯಿತು.
ಸತತ 3ನೇ ವಾರದ ಲಾಕ್‌ಡೌನ್‌ಗೆ ಕೋಟೆನಾಡು ಚಿತ್ರದುರ್ಗದ ಜನತೆ ಕಳೆದ 2 ವಾರಗಳಿಗೆ ಸ್ಪಂದಿಸಿದಂತೆ ಈ ವಾರ ಸ್ಪಂದಿಸಲಿಲ್ಲ. ರಸ್ತೆಯಲ್ಲಿ ಜನರ ಸಂಚಾರ ಕಾಣಿಸುತ್ತಿತ್ತು. ವಾಹನಗಳಂತೂ ವಿಪರೀತ ಎನ್ನಿಸುವಷ್ಟರ ಮಟ್ಟಿಗೆ ಸಂಚರಿಸಿದವು. ಪೊಲೀಸರು ವಿವಿಧೆಡೆ ಚೆಕ್‌ಪೋಸ್ಟ್ ಮಾಡಿ ಕೊಂಡು ವಾಹನ ಸವಾರರನ್ನು ತಡೆದು ಬೈದು ಬುದ್ದಿ ಹೇಳುವ ದೃಶ್ಯ ಸಾಮಾನ್ಯವಾಗಿತ್ತು. ಮಾಸ್ಕ್ ಇಲ್ಲದೆ ಅನಗತ್ಯವಾಗಿ ಬೀದಿಗೆ ಬಂದವರಿಗೆ ದಂಡ ಹಾಕುವ ಪ್ರಕ್ರಿಯೆಯೂ ನಡೆಯಿತು.
ಮಾರುಕಟ್ಟೆ, ಬಸ್ ನಿಲ್ದಾಣ, ಅಂಗಡಿ, ಮಾರುಕಟ್ಟೆ ಮಳಿಗೆಗಳು ಬಂದ್ ಆಗಿದ್ದವು. ಮಾಂಸದ ಅಂಗಡಿ ಮುಂದೆ ಕ್ಯೂ: ಇನ್ನೊಂದು ದಿನದಲ್ಲಿ ಶ್ರಾವಣ ಮಾಸ ಬರುವುದರಿಂದ ಮಾಂಸ ಪ್ರಿಯರು ಭಾನುವಾರವೇ ಮಾಂಸದೂಟ ಮಾಡಲು ನಗರದ ವಿವಿಧಡೆ ಇರುವ ಮಾಂಸದ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಚಿಕನ್, ಮಟನ್, ಮೀನು ಖರೀದಿ ಭರಾಟೆ ಜೋರಾಗಿತ್ತು. ಕೆಲವು ಮಾಂಸದ ಅಂಗಡಿಗಳಲ್ಲಿ ಮಧ್ಯಾಹ್ನದ ವೇಳೆಗೆ ಮಾಂಸವೇ ಖಾಲಿಯಾಗಿತ್ತು. ಸೋಮವಾರ ಅಮವಾಸ್ಯೆ ಇದ್ದು, ಮಂಗಳವಾರದಿಂದ ಶ್ರಾವಣ ಮಾಸ ಆರಂಭವಾಗಲಿದೆ. ಸಂಪ್ರದಾಯ ಪಾಲಿಸುವ ಬಹುತೇಕ ಮಾಂಸಪ್ರಿಯರು ಈ ಮಾಸದಲ್ಲಿ ಮಾಂಸಾಹಾರ ಸೇವಿಸದ ಕಾರಣ ಒಂದು ತಿಂಗಳ ಕಾಲದ ಮಾಂಸದ ಉಪವಾಸಕ್ಕಾಗಿ ಭಾನುವಾರವೇ ಭರ್ಜರಿ ಬಾಡೂಟ ಮಾಡಿ ತಯಾರಾಗುತ್ತಿದ್ದ ದೃಶ್ಯಗಳು ಕಂಡು ಬಂದವು. ಈ ಕಾರಣಕ್ಕಾಗಿ ಭಾನುವಾರದ ಲಾಕ್‌ಡೌನ್ ಕೂಡ ಕಟ್ಟುನಿಟ್ಟಾಗಿ ಜಾರಿಯಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.