ಗೊಂದಲದ ಗೂಡಾದ ಪೂರ್ವಭಾವಿ ಸಭೆ
Team Udayavani, Jan 5, 2019, 11:53 AM IST
ಚಿತ್ರದುರ್ಗ: ಬೆಂಗಳೂರಿನಲ್ಲಿ ಜ.17ರಂದು ನಡೆಯಲಿರುವ ಆದಿ ಜಾಂಬವ ಅಭಿವೃದ್ಧಿ ನಿಗಮ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ನಗರದ ಕ್ರೀಡಾ ಭವನದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆ ಗೊಂದಲದ ಗೂಡಾಯಿತು. ಸಭೆಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜಿ.ಎಸ್. ಮಂಜುನಾಥ್ ಅವರ ಬೆಂಬಲಿಗರ ತಳ್ಳಾಟ-ನೂಕಾಟವೂ ನಡೆಯಿತು.
ಪೂರ್ವಭಾವಿ ಸಭೆಯ ಆರಂಭದಲ್ಲಿ ಎಚ್. ಆಂಜನೇಯ ಮಾತನಾಡಿದರು. ನಂತರನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಯಣ್ಣ ಮುಂಚಿತವಾಗಿ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಲು ಅವಕಾಶ ನೀಡುತ್ತಿದ್ದಂತೆ ಎಚ್.ಆಂಜನೇಯ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಜಿ.ಎಸ್.ಮಂಜುನಾಥ್ ಬೆಂಬಲಿಗರು ಮಂಜುನಾಥ್ ಪರ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ನೋಡು ನೋಡುತ್ತಿದ್ದಂತೆ ಆಂಜನೇಯ ಮತ್ತು ಮಂಜುನಾಥ್ ಬೆಂಬಲಿಗರು ವೇದಿಕೆ ಮೇಲೆ ಧಾವಿಸಿ
ತಳ್ಳಾಟ-ನೂಕಾಟ ನಡೆಸಿದರು. ಪೊಲೀಸರು ಇಬ್ಬರ ಬೆಂಬಲಿಗರನ್ನು ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರೂ, ಒಮ್ಮೆ ಮಂಜುನಾಥ್ ಬೆಂಬಲಿಗರು ಕೂಗಿದರೆ, ಮತ್ತೂಮ್ಮೆ ಆಂಜನೇಯ ಬೆಂಬಲಿಗರು ಕೂಗುತ್ತಿದ್ದರು. ಈ ವೇಳೆ ಎಚ್.ಆಂಜನೇಯ ವೇದಿಕೆ ಮೇಲೆ ಮೂಕ ಪ್ರೇಕ್ಷಕರಂತೆ ಕುಳಿತಿದ್ದರು. ಹೀಗೆ ಸುಮಾರು 45 ನಿಮಿಷ ಗದ್ದಲ-ಗಲಾಟೆ ನಡುವೆ ಸಭೆ ಗೊಂದಲದ
ಗೂಡಾಗಿತ್ತು. ಪೊಲೀಸರು ಇಬ್ಬರ ಬೆಂಬಲಿಗರನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು.
ಕೊನೆಗೆ ಎಚ್.ಆಂಜನೇಯ, ಜಿ.ಎಸ್. ಮಂಜುನಾಥ್ ಅವರ ಪಕ್ಕದಲ್ಲಿ ನಿಂತು ಬೆಂಗಳೂರಿನಲ್ಲಿ ಜ.17ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಜಿ.ಎಸ್. ಮಂಜುನಾಥ್ ಸೇರಿ ಎಲ್ಲರೂ ಬರುತ್ತಾರೆ ಎಂದು ಹೇಳಿ ವೇದಿಕೆಯಿಂದ ನಿರ್ಗಮಿಸಲು ತೆರಳಲು ಪ್ರಯತ್ನಿಸಿದರು. ಇದಕ್ಕೆ ಜಿ.ಎಸ್. ಮಂಜುನಾಥ್, ಆಂಜನೇಯ ಅವರು ಹೇಳಿಕೆಗೆ ನನ್ನ ವಿರೋಧ ಇದೆ ಎಂದರು. ಈ ವೇಳೆ ಎಚ್.ಆಂಜನೇಯ ವೇದಿಕೆಗೆ ವಾಪಸ್ ಆಗಮಿಸಿದರು. ಜಿ.ಎಸ್.ಮಂಜುನಾಥ್ ತನ್ನ ಬೆಂಬಲಿಗರೊಂದಿಗೆ ಸಭೆಯಿಂದ ಹೊರ ನಡೆದರು. ಒಟ್ಟಾರೆ ಬೆಂಗಳೂರಿನಲ್ಲಿ ಜ.17ರಂದು ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ರೂಪರೇಷೆ ಕುರಿತು ಚರ್ಚಿಸಬೇಕಾಗಿದ್ದ ಪೂರ್ವಭಾವಿ ಸಭೆ ಯಾವುದೇ ವಿಷಯ ಚರ್ಚೆ ನಡೆಸದೆ ಗದ್ದಲದಲ್ಲಿಯೇ ಮುಕ್ತಾಯವಾಯಿತು.
ಬೆಂಗಳೂರಿನಲ್ಲಿ ಜ.17ರಂದು ನಡೆಯಲಿರುವ ಮಾದಿಗರ ಕಾರ್ಯಕ್ರಮ ಕುರಿತು ಇಂದು ಮಾಜಿ ಸಚಿವ ಎಚ್.ಆಂಜನೇಯ ಪೂರ್ವಭಾವಿ ಸಭೆ ಕರೆದಿದ್ದರು. ಆದರೆ ಸಭೆಯಲ್ಲಿ ಅವರೊಬ್ಬರೇ ಮಾತನಾಡುವುದು ಬಿಟ್ಟರೆ ಬೇರೆಯವರಿಗೆ ಅವಕಾಶ ನೀಡಲಿಲ್ಲ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜಿ.ಎಸ್.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು. ಪೂರ್ವಭಾವಿ ಸಭೆಯಿಂದ ಹೊರ ಬಂದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಗೆ ಮಾಜಿ ಸಚಿವ ಎಚ್.ಆಂಜನೇಯ ಅವರ ಕೊಡುಗೆ ಶೂನ್ಯ. ಆಂಜನೇಯ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಸಚಿವರಾದ ಅವಧಿಯಲ್ಲಿ ಮಾದಿಗರಿಗೆ ಯಾವ ಸೌಲಭ್ಯಗಳನ್ನು ಕೊಟ್ಟಿಲ್ಲ. ಐದು ವರ್ಷದ ಅವಧಿಯ ಕೊನೆ ವರ್ಷದಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ 5 ಸಾವಿರ ಬೋರ್, 3000 ಕಾರು ನೀಡಿ ಇತರೆ ಸಮುದಾಯದವರ ಮುಂದೆ ಹಾಡಿಕೊಳ್ಳುವಂತಹ ಹೀನಾಯ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಅವರನ್ನು ಜಿಲ್ಲೆಯಿಂದ ಹೊರ ಹಾಕದಿದ್ದರೆ ಜಿಲ್ಲೆಯ ಮಾದಿಗರಿಗೆ ಉಳಿಗಾಲವಿಲ್ಲ ಎಂದು ಕಿಡಿಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.