ವಸತಿ ನಿರ್ಮಾಣ ಶೀಘ್ರ ಆರಂಭ
Team Udayavani, Jan 15, 2022, 9:55 PM IST
ಮೊಳಕಾಲ್ಮೂರು: ಪಟ್ಟಣದಲ್ಲಿ ಸ್ಲಂ ಬೋರ್ಡ್ ವತಿಯಿಂದ ವಸತಿ ರಹಿತರಿಗೆ 33 ಕೋಟಿ ರೂ. ಅನುದಾನದಲ್ಲಿ ವಸತಿ ನಿರ್ಮಾಣಕ್ಕೆ ತ್ವರಿತವಾಗಿ ಕಾರ್ಯಾರಂಭಿಸಲಾಗುವುದು ಎಂದು ಬಿ.ಕೆ. ಇನಾ#Åಟೆಕ್ ಕಂಪನಿಯ ಮಾಲೀಕ ಬಿ.ಕೆ. ಇಸ್ಮಾಯಿಲ್ ತಿಳಿಸಿದ್ದಾರೆ.
ಭಾಗ್ಯಜ್ಯೋತಿ ನಗರದ ಫಂಕ್ಷನ್ ಹಾಲ್ ಬಳಿಯ ಬಿ.ಕೆ.ಇನಾ#Åಟೆಕ್ ಕಂಪನಿ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಟಣದಲ್ಲಿನ ಸ್ಲಂ ವ್ಯಾಪ್ತಿಗೊಳಪಟ್ಟ ವಸತಿ ರಹಿತರಿಗಾಗಿ ವಸತಿ ನಿರ್ಮಾಣಕ್ಕಾಗಿ 500 ಮನೆ ಮಂಜೂರಾಗಿವೆ. ಒಂದು ಕುಟುಂಬದವರಿಗೆ ಒಂದು ಮನೆ ನಿರ್ಮಾಣಕ್ಕಾಗಿ ಸುಮಾರು 7.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು.
ಮುಂದಿನ ಕೆಲವೇ ದಿನಗಳಲ್ಲಿ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮು, ಪಪಂನ ಅಧ್ಯಕ್ಷ ಪಿ.ಲಕ್ಷ ¾ಣ ಉಪಾಧ್ಯಕ್ಷೆ ಶುಭ ಪೃಥ್ವಿರಾಜ್, ಸದಸ್ಯರು ಹಾಗೂ ಇನ್ನಿತರ ಜನಪ್ರತಿನಿ ಧಿ ಗಳೊಂದಿಗೆ ಕಾಮಗಾರಿಗೆ ಚಾಲನೆ ನೀಡಿದ ನಂತರ ಮನೆ ನಿರ್ಮಿಸಲಾಗುವುದು ಎಂದರು. ಪಟ್ಟಣದ 16 ವಾರ್ಡ್‌ಗಳ ಪೈಕಿ ಅಂಬೇಡ್ಕರ್ ಬಡಾವಣೆ, ಕೋಟೆ ನಾಯಕರ ಕೇರಿ, ಹುಲಿಮೇರತಿಪ್ಪೆ, ಭೋವಿ ಕಾಲೋನಿ, ಶ್ರೀನಿವಾಸ ಬಡಾವಣೆ ಒಟ್ಟು ಬಡಾವಣೆಗಳನ್ನು ಸ್ಲಂ ಪ್ರದೇಶಗಳೆಂದು ಗುರುತಿಸಲಾಗಿದ್ದು, ವಸತಿ ರಹಿತರಿಗೆ ಮನೆ ನಿರ್ಮಿಸಲಾಗುವುದು.
ಈಗಾಗಲೇ ವಸತಿ ರಹಿತರೆಂದು ಸಮೀಕ್ಷೆ ನಡೆಸಿ 500 ಜನರನ್ನು ಗುರುತಿಸಲಾಗಿದೆ. ಇವರಲ್ಲಿ ಸಮಗ್ರವಾಗಿ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುವುದು ಎಂದರು. ಪ.ಪಂ ಸದಸ್ಯ ಎಸ್.ಖಾದರ್, ಗ್ರಾಪಂನ ಸದಸ್ಯ ನಜೀರ್ ಅಹಮದ್, ಗುತ್ತಿಗೆದಾರರಾದ ಎಚ್.ಎ. ರಾಜು, ಗೋವಿಂದಪ್ಪ, ರಾಮು, ಗೋಪಾಲ್, ಮಾರಣ್ಣ, ಕಚೇರಿ ಸಿಬ್ಬಂದಿ ಖಲೀಲ್, ಜಿಲಾನ್, ಮುಖಂಡರಾದ ಆಶೀಫ್, ಸನಾವುಲ್ಲಾ, ಟಿ.ಎಸ್. ಮೂರ್ತಿ, ದಾದಾಪೀರ್, ಜಿಲ್ಲು, ಬಿಲಾಲ್ ಇತರರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಾಧ್ಯಕ್ಷರಾಗಿ ಬಿವೈವಿ ಅವಧಿ ವಿಸ್ತರಣೆ ಹೇಳಲು ಆಗಲ್ಲ: ಯದುವೀರ ಒಡೆಯರ್
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Chitradurga: ನಾವು ದರ್ಶನ್‌ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್