ದುರಸ್ತಿ ವೆಚ್ಚ ವೇತನದಲ್ಲಿ ಕಡಿತ: ಶ್ರೀರಂಗಯ್ಯ


Team Udayavani, Jul 20, 2017, 11:48 AM IST

20-CHI-3.gif

ಚಿತ್ರದುರ್ಗ: ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿ ಒಂದು ತಿಂಗಳೊಳಗೆ ಮತ್ತೆ ದುರಸ್ತಿಗೆ ಬಂದಿದೆ. ದುರಸ್ತಿಗೆ ಖರ್ಚು ಮಾಡಿರುವ 80 ಸಾವಿರ ರೂ. ಗಳನ್ನು ನಿಮ್ಮ ವೇತನದಲ್ಲಿ ಕಡಿತ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಪಂ ಪ್ರಭಾರಿ ಸಿಇಒ ಎಂ.ಕೆ. ಶ್ರೀರಂಗಯ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ, ಎಇಇಗಳನ್ನು ತರಾಟೆಗೆ 
ತೆಗೆದುಕೊಂಡರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಒಂದು ಶುದ್ಧೀಕರಣ ಘಟಕ ಕೆಟ್ಟು ಹೋದರೆ ದುರಸ್ತಿಗೆ 70-80 ಸಾವಿರ ರೂ. ಬೇಕಾ, ಅಷ್ಟು ದುಡ್ಡು ಕೊಟ್ಟು ದುರಸ್ತಿ ಮಾಡಿಸಿದರೂ ಒಂದೇ ತಿಂಗಳಲ್ಲಿ ಮತ್ತೆ ದುರಸ್ತಿಗೆ ಬಂದಿದೆ ಎಂದರೆ ಏನರ್ಥ ಎಂದು ಖಾರವಾಗಿ ಪ್ರಶ್ನಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಮಾತನಾಡಿ, ಯಾವ ಯೋಜನೆಯಲ್ಲಿ ಆರ್‌ಒ ಅಳವಡಿಸಲಾಗಿದೆ, ಅದರ ನಿಯಮಾವಳಿಗಳೇನು, 5 ವರ್ಷದ ತನಕ ಆರ್‌ಒ ಯಂತ್ರಗಳನ್ನು ನೀಡಿದ ಕಂಪನಿಗಲೇ ನಿರ್ವಹಣೆ ಮಾಡಬೇಕು, ವಿದ್ಯುತ್‌
ಬಿಲ್‌ ಅನ್ನು ಅದೇ ಕಂಪನಿ ಕಟ್ಟಬೇಕು. ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು. ಸಂಬಂಧಿಸಿದ ಕಂಪನಿ ಅಥವಾ ಗುತ್ತಿಗೆ ಏಜೆನ್ಸಿಯಿಂದ ಹಸ್ತಾಂತರ ಮಾಡಿಕೊಳ್ಳುವ ಮುನ್ನ ಸೇ.100ರಷ್ಟು ಆರ್‌ಒಗಳು ಸುಸ್ಥಿತಿಯಲ್ಲಿದ್ದರೆ ಮಾತ್ರ ಗ್ರಾಪಂಗಳಿಗೆ ಹಸ್ತಾಂತರಿಸಿಕೊಳ್ಳಿ ಎಂದು ತಿಳಿಸಿದರು. 

ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶಮೂರ್ತಿ ಮಾತನಾಡಿ, ರಾಮಜೋಗಿಹಳ್ಳಿಯಲ್ಲಿ ಅಳವಡಿಸಿರುವ ಆರ್‌ಒ ಕೆಟ್ಟು ಹೋಗಿ ಬಹಳ ದಿನಗಳಾಗಿದೆ. ಶೀಘ್ರ ದುರಸ್ತಿ ಮಾಡಿಸಿ ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್‌ ವತಿಯಿಂದ ಸಹಕಾರ ಸಂಘಗಳ ಮೂಲಕ ಆರ್‌ಒ ಘಟಕ ಅಳವಡಿಸಿ 2-3 ವರ್ಷಗಳಾಗಿದೆ. ಇನ್ನೂ ಅರ್ಧ ದುಡ್ಡು ನೀಡಿಲ್ಲ, ಏಕಿಷ್ಟು ವಿಳಂಬ ಮಾಡುತ್ತೀರಿ,
ಕೂಡಲೇ ಬಾಕಿ ಹಣವನ್ನು ನೀಡುವಂತೆ ತಾಕೀತು ಮಾಡಿದರು.

ಕಳೆದ ವರ್ಷ ಯಾವುದೇ ಟೆಂಡರ್‌ ಕರೆಯದೆ ಯಂತ್ರೋಪಕರಣಗಳ ಖರೀದಿ ಮಾಡಿ ತಪ್ಪು ಮಾಡಿದ್ದೀರಿ. ಪ್ರಸಕ್ತ ಸಾಲಿನಲ್ಲಿ ಟೆಂಡರ್‌ ಕರೆದು ಯಂತ್ರೋಪಕರಣಗಳ ಖರೀದಿ ಮಾಡಬೇಕು. ಒಂದು ದಿನಾಂಕ ನಿಗದಿ ಮಾಡಿ ರೈತರಿಗೆ ವಿತರಣೆ ಮಾಡುವಂತೆ
ಜಿಪಂ ಅಧ್ಯಕ್ಷರು ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು. 13ನೇ ಹಣಕಾಸು ಅನುದಾನದಲ್ಲಿ ನಿರ್ಮಾಣ ಮಾಡಲಾದ ಕಟ್ಟಡಗಳಿಗೆ ಇನ್ನೂ ಬಿಲ್‌ ಪಾವತಿ ಮಾಡಿಲ್ಲ, ಕಾಮಗಾರಿ ಪೂರ್ಣಗೊಂಡ ತಕ್ಷಣ ಬಿಲ್‌ ಪಾವತಿ ಮಾಡಬೇಕೆಂದರು.

ಯಾವುದೇ ಕಾಮಗಾರಿಗಳು ಪೂರ್ಣಗೊಂಡಿದ್ದರೆ ಬಿಲ್‌ ನೀಡಲು ನಿಮಗೇನು ತೊಂದರೆ ಎಂದ ಶ್ರೀರಂಗಯ್ಯ, ಕಾಮಗಾರಿ ಪೂರ್ಣಗೊಂಡ ನಂತರ ಗುಣಮಟ್ಟ ಖಾತ್ರಿ ಪಡಿಸಿಕೊಂಡು ತಕ್ಷಣ ಬಿಲ್‌ ಪಾವತಿ ಮಾಡವಂತೆ ಸೂಚಿಸಿದರು. ನರೇಗಾ ಯೋಜನೆ ಅಡಿ ಕಡ್ಡಾಯವಾಗಿ ಎಲ್ಲ ಗ್ರಾಪಂಗಳಲ್ಲಿ ಒಂದು ಸಮುದಾಯ ಕಾಮಗಾರಿ ನಡೆಯುತ್ತಿರಬೇಕು. ಕೂಲಿ ಸಿಗುತ್ತಿಲ್ಲ ಎನ್ನುವ ದೂರು
ಬರಬಾರದು ಎಂದು ತಾಪಂ ಇಒಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಸುಶೀಲಮ್ಮ, ಸಿಪಿಒ ಓಂಕಾರಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಡಿಸಿ ಪ್ರಶ್ನೆಗೆ ತಡವರಿಸಿದ ಅಧಿಕಾರಿಗಳು
ಕೆರೆ ಸಂಜೀವಿನಿ ಯೋಜನೆಯಲ್ಲಿ ಎಷ್ಟು ಅನುದಾನ ಬಂದಿದೆ, ಎಷ್ಟು ಖರ್ಚಾಗಿದೆ, ಎಷ್ಟು ಕೆರೆಗಳನ್ನು ಜೀರ್ಣೋದ್ಧಾರ
ಮಾಡಲಾಗಿದೆ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು. ಅಧಿಕಾರಿಗಳು ಉತ್ತರಿಸಲು ತಡವರಿಸಿದರು. ಸರಿಯಾದ
ಮಾಹಿತಿ ಇಲ್ಲದೆ ಸಭೆಗೆ ಆಗಮಿಸಿ ಕಥೆ ಹೇಳುತ್ತೀರಾ ಎಂದು ಜಿಲ್ಲಾಧಿಕಾರಿಯವರು ಬೇಸರ ವ್ಯಕ್ತಪಡಿಸಿದರು.

ಶೌಚಾಲಯ ಅನುದಾನ ಮಂಡ್ಯಕ್ಕೆ!
ನಮ್ಮ ಜಿಲ್ಲೆಗೆ ಬರಬೇಕಿದ್ದ 27 ಶೌಚಾಲಯಗಳ ಅನುದಾನ ಮಂಡ್ಯ ಜಿಪಂಗೆ ಹೋಗಿದೆ. ಇದೇ ರೀತಿ ಜಿಲ್ಲೆಯ ಚಳ್ಳಕೆರೆ ತಾಲೂಕು ಸೇರಿದಂತೆ ಮತ್ತಿತರ ತಾಲೂಕುಗಳಲ್ಲೂ ಇದೇ ರೀತಿ ಆಗಿದೆ. ಸಾಕಷ್ಟು ಸಲ ಮಂಡ್ಯ ಜಿಪಂನವರನ್ನು ಸಂಪರ್ಕಿಸಿ ಅನುದಾನ ವಾಪಸ್‌ ತರುವ ಕೆಲಸ ಮಾಡಲಾಗಿದೆ. ಇಂತಹ ಲೋಪ ಏಕೆ ಎಂದು ಪ್ರಶ್ನಿಸಿದ ಅಧ್ಯಕ್ಷೆ ಸೌಭಾಗ್ಯ, ಈ ರೀತಿಯ ಅವಾಂತರಗಳಿಗೆ ಅಧಿಕಾರಿಗಳು ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.

ಟಾಪ್ ನ್ಯೂಸ್

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BYV-yathnal

Talk Fight: ಬಿ.ಎಸ್‌.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ

BYV-1

Waqf Property: ಸಚಿವ ಜಮೀರ್‌ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ

ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ

ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

ಸಿದ್ದರಾಮಯ್ಯ

ByPolls; ಕಾಂಗ್ರೆಸ್‌ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.