![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jul 14, 2020, 3:54 PM IST
ಮೊಳಕಾಲ್ಮೂರು: ಪಟ್ಟಣ ವ್ಯಾಪ್ತಿಯ ಗೋಮಾಳ ಜಮೀನಿನಲ್ಲಿನ ಸಾಕಿ ಬಂಡೆ ಮತ್ತು ಕೋಲುತಿಪ್ಪೆ ಗುಡ್ಡದಲ್ಲಿ ಕಲ್ಲು ಬ್ಲಾಸ್ಟಿಂಗ್ ಮತ್ತು ಜಲ್ಲಿ ಕ್ರಷರ್ ಅನುಮತಿ ರದ್ದುಪಡಿಸಿ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸ ಬೇಕು ಎಂದು ಒತ್ತಾಯಿಸಿ ಸೋಮವಾರ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ರೈತರು, ನಾಗರಿಕರು ಪ್ರತಿಭಟಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಬಿಜೆಪಿ ಯುವ ಮುಖಂಡ ಕೆ.ರಾಘವೇಂದ್ರ ಮಾತನಾಡಿ, ಪಟ್ಟಣ ವ್ಯಾಪ್ತಿಯ ಸ.ನಂ.78 ಮತ್ತು ಸ.ನಂ.25/1 ರಲ್ಲಿ ಬಹುತೇಕ ಹಿಂದುಳಿದ ವರ್ಗದ ಬಡ ರೈತರ ಜಮೀನುಗಳಿದ್ದು, ಈ ಯಾವ ರೈತರ ಜಮೀನುಗಳು ಮತ್ತು ಬೋರ್‌ವೆಲ್‌ಗಳ ಅಂತರ್ಜಲ ಹಾಳಾಗುವುದನ್ನು ಪರಿಗಣಿಸದೆ ಈ ಭಾಗದಲ್ಲಿ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿರುವುದು ಅನ್ಯಾಯವಾದಂತಾಗಿದೆ. ಕಲ್ಲುಗಣಿಗಾರಿಕೆಯಿಂದ ಜನತೆಯ ಕುಡಿಯುವ ನೀರಿನ ಬೋರ್‌ವೆಲ್ ಗಳು ಮತ್ತು ಹತ್ತಿರದ ರೈತರ ಜಮೀನುಗಳ ಬೋರ್ ವೆಲ್ ಅಂತರ್ಜಲ ಕುಸಿತವುಂಟಾಗಿ ಕುಡಿಯುವ ನೀರಿಗೆ ಸಂಕಷ್ಟ ಪಡುವಂತಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ನಿಯಮ ಗಾಳಿಗೆ ತೂರಿ ಸಂಬಂಧಪಟ್ಟ ಅಧಿಕಾರಿಗಳು ಕಲ್ಲುಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಿ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು. ರಾಮಾಂಜಿನೇಯ, ಬಿ.ವಿಜಯ್, ಶಾಂತರಾಂ ಬಸಾಪತಿ, ಬೋರನಾಯಕ, ಸಿದ್ದಣ್ಣ, ಡಿ.ತಿಪ್ಪಯ್ಯ, ಮಲ್ಲಿಕಾರ್ಜುನ ಇತರರು ಇದ್ದರು.
Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ
Chitradurga: ನಿಧಿಯ ಆಸೆಗೆ ಜ್ಯೋತಿಷಿ ಮಾತು ಕೇಳಿ ನರಬಲಿ: ಅಮಾಯಕನ ಕೊಲೆ!
Stampede: ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಾಸಾಧು ಮೃತ್ಯು!
BJP ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ ವೆಂಕಟೇಶ್
Chitradurga: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರ ಬಿಡಿಗಾಸು ಕೊಟ್ಟಿಲ್ಲ: ಸಿಎಂ
You seem to have an Ad Blocker on.
To continue reading, please turn it off or whitelist Udayavani.