ವಿದ್ಯಾಗಮ ಕಾರ್ಯಕ್ರಮ ಪುನಾರಂಭ
ಮಕ್ಕಳು ತರಗತಿಗೆ ಬರುವುದು ಕಡ್ಡಾಯ ಅಲ್ಲ: ಜಿಲ್ಲಾಧಿಕಾರಿ ಕವಿತಾ
Team Udayavani, Jan 1, 2021, 8:13 PM IST
ಚಿತ್ರದುರ್ಗ: ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಜನವರಿ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳು ಪುನರಾಂಭ ಹಾಗೂ 6 ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.
ಜಿಲ್ಲಾ ಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಶಾಲಾ ಪ್ರಾರಂಭೋತ್ಸವದ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸರ್ಕಾರಿ, ಸಮಾಜಕಲ್ಯಾಣ, ಅಲ್ಪಸಂಖ್ಯಾತರ ಇಲಾಖೆ, ಅನುದಾನಿತ, ಅನುದಾನ ರಹಿತ ಹಾಗೂ ಕೇಂದ್ರ ಸರ್ಕಾರದ ಶಾಲೆಗಳು ಸೇರಿದಂತೆ ಜಿಲ್ಲೆಯಲ್ಲಿ 10 ನೇ ತರಗತಿಯ ಒಟ್ಟು 486 ಪ್ರೌಢಶಾಲೆಗಳನ್ನು ಮಾತ್ರ ತೆರೆಯಲಾಗುತ್ತಿದೆ. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಶನಿವಾರದವರೆಗೆ ಪ್ರತಿ ದಿನ ಬೆಳಿಗ್ಗೆ 11.00 ರಿಂದ 12.30 ರವರೆಗೆ ಶಾಲೆ ನಡೆಯಲಿದೆ. 6ನೇ ತರಗತಿಯಿಂದ 9ನೇ ತರಗತಿವರೆಗೂ ವಿದ್ಯಾಗಮ ಕಾರ್ಯಕ್ರಮ ಆರಂಭಿಸಲಾಗುತ್ತಿದೆ. ನಿತ್ಯ ತರಗತಿ ಇರುವುದಿಲ್ಲ. ದಿನ ಬಿಟ್ಟು ದಿನ ತರಗತಿಗಳು ಮಾತ್ರ ನಡೆಯಲಿದೆ ಎಂದರು.
6ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರ, ಬುಧವಾರ, ಶುಕ್ರವಾರದಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12:30 ರವರೆಗೆ ತರಗತಿಗಳು ನಡೆಯಲಿವೆ. 7ನೇ ತರಗತಿ ವಿದ್ಯಾರ್ಥಿಗಳಿಗೆ ಮಂಗಳವಾರ, ಗುರುವಾರ, ಶನಿವಾರ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.30 ರವರೆಗೆ ತರಗತಿಗಳು ನಡೆಯಲಿವೆ. 8ನೇ ತರಗತಿ ವಿದ್ಯಾರ್ಥಿಗಳಿಗೆ ಮಂಗಳವಾರ, ಗುರುವಾರ ಮಧ್ಯಾಹ್ನ 2.00 ರಿಂದ ಸಂಜೆ 4.30 ರವರೆಗೆ, 9ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರ, ಗುರುವಾರ ಮಧ್ಯಾಹ್ನ 2 ರಿಂದ ಸಂಜೆ 4:30 ರವರೆಗೆ ತರಗತಿಗಳು ನಡೆಯಲಿವೆ ಎಂದರು.
ಶಾಲೆಗಳಿಗೆ ಮಕ್ಕಳು ಬರುವುದು ಕಡ್ಡಾಯವಲ್ಲ. ಆದರೆ ಕಲಿಕೆಯಲ್ಲಿ ಆನ್‌ಲೈನ್ ಅಥವಾ ಆಫ್‌ಲೆ„ನ್ ಕಲಿಕೆಯಲ್ಲಿ ಮಕ್ಕಳು ಭಾಗವಹಿಸುವುದನ್ನು ಶಿಕ್ಷಕರು ಮತ್ತು ಪೋಷಕರು ಖಚಿತಪಡಿಸಿಕೊಳ್ಳಬೇಕು. 10ನೇ ತರಗತಿ ಹಾಗೂ ವಿದ್ಯಾಗಮ ಕಾರ್ಯಕ್ರಮಕ್ಕೆಹಾಜರಾಗುವ ಮಕ್ಕಳು ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ನೀಡುವುದುಶಾಲೆಗೆ ಹಾಜರಾಗದ ಮಕ್ಕಳಿಗೆ ಆನ್‌ಲೈನ್ ತರಗತಿಗಳ ಮೂಲಕ ಬೋಧನಾ ಕಾರ್ಯ ಮುಂದುವರೆಯುತ್ತದೆ ಎಂದು ಹೇಳಿದರು.
ಪ್ರತಿ ಶಾಲೆಯಲ್ಲಿ ಮಕ್ಕಳು ಶಾಲೆಗೆ ಬರುವಾಗ ಮತ್ತು ಹೋಗುವಾಗಸ್ಯಾನಿಟೈಸರ್, ಹ್ಯಾಂಡ್‌ವಾಷ್, ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಶಾಲೆಗೆ ಹಾಜರಾಗುವ ಪ್ರತಿ ಮಕ್ಕಳಿಗೆ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಮಕ್ಕಳು ಗುಂಪು ಸೇರದೆ ಒಂದು ತಂಡದಲ್ಲಿ 15 ರಿಂದ 20 ಮಕ್ಕಳ ಬೋಧನಾ ಕಲಿಕಾಚಟುವಟಿಕೆಗೆ ವಿಂಗಡಿಸಿ ಸಾಮಾಜಿಕಅಂತರ ಕಾಪಾಡುವಂತೆ ಮಾರ್ಗದರ್ಶನ ನೀಡಲಾಗಿದೆ ಎಂದರು.
ಮಕ್ಕಳಿಗೆ ಕುಡಿಯಲು ಬಿಸಿನೀರನ್ನು ಮನೆಯಿಂದಲೇ ತರುವುದು ಕಡ್ಡಾಯವಾಗಿದೆ. ಒಂದು ವೇಳೆ ಮಕ್ಕಳು ಮನೆಯಿಂದ ತರದಿದ್ದಲ್ಲಿ ಶಾಲೆಯಲ್ಲಿ ಕುಡಿಯಲು ಬಿಸಿನೀರನ್ನು ಅಡುಗೆ ಸಹಾಯಕರು ಒದಗಿಸಲಾಗುತ್ತದೆ. ಶಿಕ್ಷಕರು ಬೋಧನಾ ಅವ ಯಲ್ಲಿ ಮಾಸ್ಕ್ ಹಾಗೂ ಫೇಸ್‌ಶೀಲ್ಡ್‌ನ್ನು ಧರಿಸುವಂತೆ ಎಲ್ಲಾ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಶಾಲೆಗೆ ಹಾಜರಾಗುವ ಮಕ್ಕಳಿಗೆ ಕೆಮ್ಮು, ಶೀತ ಮತ್ತು ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಶಾಲಾ ಹಂತದಲ್ಲಿ ಐಸೋಲೇಷನ್ ಮಾಡಿ ಪೋಷಕರ ಗಮನಕ್ಕೆ ತಂದು ಆರೋಗ್ಯ ಇಲಾಖೆಯಿಂದ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಡಾ.ಕೆ.ನಂದಿನಿದೇವಿ, ಡಿಎಚ್‌ಒ ಡಾ.ಫಾಲಾಕ್ಷ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.