ಆಟೋ ಚಾಲಕನ ಕೊಂದಿದ್ದವಗೆ ಜೀವಾವಧಿ ಶಿಕ್ಷೆ
Team Udayavani, Oct 18, 2021, 3:43 PM IST
ಚಿತ್ರದುರ್ಗ: ಆಟೊ ಚಾಲಕನನ್ನು ಕೊಲೆ ಮಾಡಿ ರೈಲ್ವೆ ಹಳಿಯ ಮೇಲೆ ಬಿಸಾಡಿದ ಪರಶುರಾಮಎಂಬಾತನಿಗೆ ಒಂದನೇಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವ ಧಿ ಶಿಕ್ಷೆ ವಿಧಿ ಸಿ ತೀರ್ಪು ನೀಡಿದೆ.
2018ರ ಜೂನ್ 24 ರಂದು ಹೊಳಲ್ಕೆರೆ ಹಾಗೂ ರಾಮಗಿರಿ ರೈಲ್ವೆ ನಿಲ್ದಾಣದ ನಡುವೆ ಆಟೋ ಚಾಲಕ ಶಿವರಾಜ ಎಂಬಾತನಕೊಲೆ ನಡೆದಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬನ್ನಿಕಟ್ಟಿ ಆರ್. ಹನುಮಂತಪ್ಪ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು.
ಶಿವರಾಜ ಆಟೋದಲ್ಲಿ ಪರಶುರಾಮಪ್ರಯಾಣ ಮಾಡುತ್ತಿದ್ದ. ಇಬ್ಬರೂ ಮಾತನಾಡುತ್ತಿರುವಾಗ ಪರಶುರಾಮನ ಪತ್ನಿಯ ಬಗ್ಗೆಶಿವರಾಜ ಅಶ್ಲೀಲವಾಗಿ ಮಾತನಾಡಿದ್ದ. ಇದರಿಂದ ಕುಪಿತಗೊಂಡಪರಶುರಾಮ ಕೊಲೆಗೆ ಸಂಚು ರೂಪಿಸಿ ಆಟೋವನ್ನು ನಿರ್ಜನಪ್ರದೇಶದತ್ತ ಕರೆದೊಯ್ದು ಮೂತ್ರ ವಿಸರ್ಜನೆಯ ನೆಪದಲ್ಲಿ ಆಟೋವನ್ನು ನಿಲ್ಲಿಸಿದ್ದಾನೆ. ಕಬ್ಬಿಣದ ರಾಡಿನಿಮದ ಆಟೋಚಾಲಕನ ತಲೆಗೆ ಹೊಡೆದು ಕೊಲೆ ಮಾಡಿದ್ದ. ಆಟೋ ಚಾಲಕ ರೈಲಿಗೆ ಸಿಲುಕಿ ಮೃತಪಟ್ಟಿರುವಂತೆ ಬಿಂಬಿಸಲು ಹಳಿಮೇಲೆ ಹಾಕಿದ್ದಾನೆ. ಕೊಲೆಗೆ ಬಳಸಿದ ಕಬ್ಬಿಣದ ರಾಡನ್ನು ಪೊದೆಯೊಂದರಲ್ಲಿ ಬಿಸಾಡಿ ಪರಾರಿಯಾಗಿದ್ದ.
ಅಪರಿಚಿತ ಮೃತದೇಹ ಪತ್ತೆಯಾದ ಪ್ರಕರಣ ದಾಖಲಿಸಿಕೊಂಡ ದಾವಣಗೆರೆರೈಲ್ವೆ ಪೊಲೀಸರು ತನಿಖೆ ನಡೆಸಿದಾಗ ಕೊಲೆಯ ಸಂಗತಿ ಬೆಳಕಿಗೆಬಂದಿತ್ತು. ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎನ್.ಎಸ್. ಮಲ್ಲಯ್ಯ ಸರ್ಕಾರದ ಪರ ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.