ಸಿಜಿಕೆಯೆಂಬ ಮೂರಕ್ಷರದಲ್ಲಿದೆ ಮೋಡಿ: ಪಂಡಿತಾರಾಧ್ಯ ಶ್ರೀ
Team Udayavani, Jan 13, 2021, 5:58 PM IST
ಹೊಸದುರ್ಗ: ಸಿಜಿಕೆ ಎನ್ನುವ ಮೂರು ಅಕ್ಷರಗಳಲ್ಲಿ ಏನೋ ಮೋಡಿ ಇದೆ. ಈ ಕಾರಣಕ್ಕಾಗಿಯೇ ನಮ್ಮ ಅವರ ನಡುವೆ ಅವಿನಾಭಾವ ಸಂಬಂಧ ಇತ್ತು. ವ್ಯಕ್ತಿ ದೊಡ್ಡವನಾಗೋದು ಅವನಲ್ಲಿರೋ ಸಂಪತ್ತಿನಿಂದ ಅಲ್ಲ, ಒಳ್ಳೆ ಗುಣ, ನಡತೆಗಳಿಂದ ಎಂದು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೆಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ನಡೆದ “ಸಿಜಿಕೆ ನೆನಪು’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಸಿಜಿಕೆ ಯಾವುದೇ ಸ್ವಾಮಿಗಳನ್ನು ನಂಬುವವರಲ್ಲ. ಆದರೆ ನಮ್ಮನ್ನು ಅವರು ಸಂಪೂರ್ಣವಾಗಿ ನಂಬಿದ್ದರು. ಅಷ್ಟೇ ಅಲ್ಲ, ಅವರು ಇರುವವರೆಗೂ ಶಿವಸಂಚಾರದ ಹೊಣೆಗಾರಿಕೆಯನ್ನು ತಾವೇ ತೆಗೆದುಕೊಂಡು ನಿರ್ವಹಿಸುತ್ತಿದ್ದರು ಎಂದು ಸ್ಮರಿಸಿದರು.
ನಮ್ಮ ಮಠಕ್ಕೆ ಬಂದ ಹಲವರು ತಮ್ಮ ಬದುಕನ್ನು ಸನ್ಮಾರ್ಗದತ್ತ ತೆಗೆದುಕೊಂಡು ಹೋಗಿದ್ದಾರೆ. ಸಿಜಿಕೆ ತಾವು ಸನ್ಮಾರ್ಗದತ್ತ ನಡೆದಿದ್ದೇ ಅಲ್ಲದೆ ಸಾಣೇಹಳ್ಳಿಯ ರಂಗ ಪರಿಸರವನ್ನೇ ಎತ್ತರಕ್ಕೇರಿಸಿದರು. ಸಿಜಿಕೆ ಮತ್ತವರ ಅನೇಕ ಗೆಳೆಯರು ಸ್ವಾಮಿಗಳನ್ನು, ಮಠ ಪರಂಪರೆಯನ್ನು ವಿರೋ ಧಿಸುತ್ತಿದ್ದರು. ಆದರೆ ಅವರು ನಮ್ಮೊಟ್ಟಿಗೆ ಸಂಪರ್ಕ ಬೆಳೆಸಿದ ಮೇಲೆ ನಾವು ಇಷ್ಟು ದಿನ ಮಠಗಳಿಂದ ದೂರ ಇದ್ದು ತಪ್ಪು ಮಾಡಿದೆವು ಎನ್ನುತ್ತಿದ್ದರು ಎಂದರು.
ಇದನ್ನೂ ಓದಿ:ಬರೋಬ್ಬರಿ ಏಳು ಕೆಜಿ ತೂಕದ ಗೆಣಸು ಬೆಳೆದ ರೈತ
ಸಿಜಿಕೆ ಕುರಿತು “ನುಡಿ ನಮನ’ ಸಲ್ಲಿಸಿದ ಅಧ್ಯಾಪಕ ಎಚ್.ಎಸ್. ದಾಮೇಶ್ ಮಾತನಾಡಿ,ಅಂಗವೈಕಲ್ಯ ಸಿ.ಜಿ. ಕೃಷ್ಣಸ್ವಾಮಿಯವರ ದೇಹಕ್ಕಿತ್ತೇ ಹೊರತು ಮನಸ್ಸಿಗಲ್ಲ. ಅವರ ಕನಸಿಗೆ ಮಿತಿ ಇರಲಿಲ್ಲ. ಕಂಡ ಕನಸನ್ನು ನನಸು ಮಾಡುವ ತನಕ ವಿರಮಿಸುತ್ತಿರಲಿಲ್ಲ. ಇದಕ್ಕೆ ಉದಾಹರಣೆ ಸಾಣೇಹಳ್ಳಿಯಲ್ಲಿರುವ ಶ್ರೀ ಶಿವಕುಮಾರ ಬಯಲು ರಂಗಮಂದಿರ. ಇದರ ಶಂಕುಸ್ಥಾಪನೆಯ ಆಹ್ವಾನ ಪತ್ರಿಕೆಯಲ್ಲಿಯೇ ಅದರ ಉದ್ಘಾಟನಾ ದಿನವನ್ನೂ ನಮೂದಿಸಿದ್ದರು. ಅದರಂತೆ ಉದ್ಘಾಟನೆಯೂ ಆಯಿತು. ಪಂಡಿತಾರಾಧ್ಯ ಶ್ರೀಗಳಿಗೆ ರೆಪರ್ಟರಿಯೊಂದನ್ನು ಆರಂಭಿಸುವಂತೆ ಪ್ರೇರಣೆ ನೀಡಿ ಅದಕ್ಕೆ “ಶಿವಸಂಚಾರ’ ಎಂದು ಹೆಸರಿಟ್ಟವರೂ ಅವರೇ. ಇದುವರೆಗೂ ಅವರು ಇದ್ದಿದ್ದರೆ ಈಗಿರುವ ಸಾಣೇಹಳ್ಳಿಗಿಂತ ಹತ್ತು ಪಟ್ಟು ಹೆಚ್ಚು ಬೆಳೆಯುತ್ತಿತ್ತು ಎಂದು ಹೇಳಿದರು.
ಜಾನಪದ ಅಕಾಡೆಮಿಯ ಸದಸ್ಯೆ ಲಕ್ಷ್ಮೀದೇವಮ್ಮ ಉಪಸ್ಥಿತರಿದ್ದರು. ಸುಪ್ರಭೆ ಮತ್ತು ಮುಕ್ತ ವಚನಗೀತೆಗಳನ್ನು, ರಂಗಶಾಲೆಯ ಪ್ರಾಚಾರ್ಯ ಆರ್. ಜಗದೀಶ್ ಮತ್ತು ಸಂಗಡಿಗರು ರಂಗಗೀತೆಗಳನ್ನು ಹಾಡಿದರು. ಕಾರ್ಯಕ್ರಮದ ನಂತರ ವೈ.ಡಿ. ಬದಾಮಿ ನಿರ್ದೇಶನದ, ಶೃತಿ ಶರಣ್‌ಕುಮಾರ ಅಭಿನಯಿಸಿದ “ಬಣ್ಣ ಮಾಸಿದ ಮೇಲೆ’ ಏಕವ್ಯಕ್ತಿ ರಂಗಪ್ರದರ್ಶನ ನಡೆಯಿತು. ಅಧ್ಯಾಪಕ ಜಯಪ್ಪ ಕಾರ್ಯಕ್ರಮ ನಡೆಸಿಕೊಟ್ಟರು. ಸಿಜಿಕೆ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.