ಅಧ್ಯಾತ್ಮ ಇರುವಲ್ಲಿ ಆದರ್ಶದ ದರ್ಶನ
Team Udayavani, Jul 22, 2020, 12:55 PM IST
ಚಿತ್ರದುರ್ಗ: ಅಧ್ಯಾತ್ಮ ಪರಮಜ್ಞಾನ. ಇದು ತತ್ವಜ್ಞಾನವನ್ನು ಬಿಟ್ಟಿರಲು ಸಾಧ್ಯವಿಲ್ಲ. ತತ್ವಜ್ಞಾನದ ಮೂಲ ಅಧ್ಯಾತ್ಮ. ಅಧ್ಯಾತ್ಮ ಇರುವಲ್ಲಿ ಆದರ್ಶ ಇರುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರಾವಣ ಮಾಸದ ಅಂಗವಾಗಿ ಮುರುಘಾ ಮಠದಲ್ಲಿ ಮಂಗಳವಾರದಿಂದ ಆರಂಭವಾದ ನೀವಿದ್ದಲ್ಲಿಯೇ ಶ್ರಾವಣ ದರ್ಶನ, ಬೌದ್ಧಿಕಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರ್ಜೀವ ಜಗತ್ತಿನಲ್ಲಿ ಘರ್ಷಣೆ ಉಂಟಾಗುತ್ತದೆ. ಮಾನವ ಲೋಕದಲ್ಲಿ ಸಂಘರ್ಷವಾಗುತ್ತದೆ. ಮರ ಮರ ಮಥನದಿಂದ ಅಗ್ನಿ ಹುಟ್ಟಿ ಆ ಮರನೆಲ್ಲವ ಸುಡದಿಪ್ಪುದೆ. ಕೆಲವರು ಕಾಡಿಗೆ ಬೆಂಕಿ ಹಚ್ಚಿ ವಿಘ್ನ ಸಂತೋಷ ಕಾಣುತ್ತಾರೆ. ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟುತ್ತದೆ ಎಂದು ಬಸವಣ್ಣ ಹೇಳುತ್ತಾರೆ ಎಂದರು.
ಅಧ್ಯಾತ್ಮದಲ್ಲಿ ಪರಮಾರ್ಥ ಪ್ರಕಾಶ ಇದೆ. ಅದು ನಮ್ಮ ಬದುಕಿನಲ್ಲಿ ಪ್ರವೇಶ ಆಗಬೇಕು. ವಿವೇಕದ ಪ್ರವೇಶ ಆಗಬೇಕು. ವಿವೇಕ, ಸುಜ್ಞಾನ ಎನ್ನುವ ಸೂರ್ಯ ಚಂದಿರರ ಉದಯವಾಗಬೇಕು ಎಂದರು. ಸಂಕುಚಿತ ಮನೋಭಾವಕ್ಕೆ ಭವಿಷ್ಯವಿಲ್ಲ. ಅದು ಕ್ಷಣಿಕ. ಗ್ರಂಥಾಧ್ಯಯನ ಮಾಡಿಕೊಂಡ ನಾವು ವಿಶಾಲ ಬುದ್ಧಿಯವರಾಗಬೇಕು. ಅನುಭವಮುಖೀ, ಅಧ್ಯಯನ ಮುಖೀಯಾಗಬೇಕು. ಈ ಗುಣಗಳು ಬದುಕನ್ನು ಪಳಗಿಸುತ್ತವೆ ಎಂದು ಶರಣರು ತಿಳಿಸಿದರು.
ಇನ್ನೂ ದುರ್ಬುದ್ಧಿಯನ್ನು ಬದುಕಿನಿಂದ ಉಚ್ಛಾಟನೆ ಮಾಡಬೇಕು. ಇದು ಬದುಕನ್ನು ನಾಶ ಮಾಡುತ್ತದೆ. ಮಹಾವೀರ, ಬುದ್ಧ, ತೀರ್ಥಂಕರರು, ಪೈಗಂಬರ್, ಏಸು, ಗಾಂ ಧೀಜಿ, ಪರಮಹಂಸ ಇವರು ದಾರ್ಶನಿಕರು. ಇವರಲ್ಲಿ ದುರ್ಬುದ್ಧಿ ಇರಲಿಲ್ಲ. ಶರಣರ, ಗುರುಗಳ ಸಂಪತ್ತು ಸುಜ್ಞಾನ. ಇದು ಇರುವಲ್ಲಿ ಸ್ವಾತಂತ್ರ್ಯ ಇರುತ್ತದೆ. ಪರಿವರ್ತಕರು, ದಾರ್ಶನಿಕರು, ಸಂತರು, ಸುಜ್ಞಾನಿಗಳು, ಸ್ವಾತಂತ್ರ್ಯ ಇರುವ ಹತ್ತಿರ ಸಾಮ್ರಾಜ್ಯ ನಿರ್ಮಾಣವಾಗುತ್ತದೆ. ಅವರವರ ಶರೀರಕ್ಕೆ ಅವರವರೇ ಅಧಿಪತಿಗಳು ಎಂದರು.
ಶುದ್ಧೀಕರಣ ಇರುವಲ್ಲಿ ಉನ್ನತೀಕರಣ ಇರುತ್ತದೆ. ಶರೀರ, ಇಂದ್ರೀಯಗಳ ಮೇಲೆ ಬುದ್ಧಿಯ ಮೇಲೆ ನಿಯಂತ್ರಣ ಸಾಧಿಸಬೇಕು. ಅಥಣಿಯ ಶಿವಬಸವ ಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಬಸವಕಿರಣ ಸ್ವಾಮಿಗಳು, ಸಾಧಕರು, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಆರ್.ಲಿಂಗರಾಜು ಮತ್ತಿತರರಿದ್ದರು. ರವಿ ಯಡಹಳ್ಳಿ ಸ್ವಾಗತಿಸಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
ByPolls; ಕಾಂಗ್ರೆಸ್ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.