ಸಿದ್ದೇಶ್ವರನದುರ್ಗ ದೇವಾಲಯಕ್ಕೆ ಕಾಯಕಲ್ಪ


Team Udayavani, May 18, 2018, 3:56 PM IST

shiv.jpg

ಪರಶುರಾಂಪುರ: ಎಂಟನೇ ಶತಮಾನದ ನೊಳಂಬರ ಕಾಲದ್ದು ಎಂದು ಹೇಳಲಾಗಿರುವ ಗಡಿ ಗ್ರಾಮ ಸಿದ್ದೇಶ್ವರನದುರ್ಗದ ಸಿದ್ದೇಶ್ವರ ದೇವಾಲಯಕ್ಕೆ ಕಾಯಕಲ್ಪ ನೀಡಲಾಗಿದೆ. ಗ್ರಾಮದ ಸಿದ್ದೇಶ್ವರಸ್ವಾಮಿ ಭಕ್ತರ ಕ್ಷೇಮಾಭಿವೃದ್ಧಿ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಹಯೋಗದಲ್ಲಿ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿದೆ.

ತುಂಬಾ ಹಳೆಯದಾದ ದೇಗುಲದ ಗೋಡೆ, ಕಲ್ಲುಗಳು ಶಿಥಿಲಗೊಂಡು ಬಿದ್ದು ಹೋಗುತ್ತಿದ್ದವು. ಗ್ರಾಮಸ್ಥರು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿದ್ದರು. ಗೋಪುರವೂ ಬಿರುಕು ಬಿಡಲಾರಂಭಿಸಿದಾಗ ದೇವಾಲಯದ ಜೀರ್ಣೋದ್ಧಾರಕ್ಕೆ ದೃಢಸಂಕಲ್ಪ ಮಾಡಿದರು. ಈ ಕಾರ್ಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನೆರವು ನೀಡಿದರು. ಧಾರ್ಮಿಕ ಮತ್ತು ದತ್ತಿ ಇಲಾಖೆಯೂ ಸಹಕಾರ ನೀಡಿತು.

ನೊಳಂಬರ ಕಾಲದ ದೇವಾಲಯ: ಸಿದ್ದೇಶ್ವರಸ್ವಾಮಿ ದೇವಾಲಯ 1200 ವರ್ಷಗಳಿಗಿಂತಲೂ ಹಳೆಯದು. ಇತಿಹಾಸದ ಪ್ರಕಾರ ಈ ದೇವಸ್ಥಾನವನ್ನು ನೊಳಂಬ ವಂಶದ ರಾಜರು ನಿರ್ಮಿಸಿರಬಹುದು ಎಂದು ಹೇಳಲಾಗುತ್ತಿದೆ. ಈ ದೇವಾಲಯದ ಕಲೆ ಮತ್ತು ವಾಸ್ತುಶಿಲ್ಪ ನೊಳಂಬರ ಇತಿಹಾಸಕ್ಕೆ ಪ್ರಮುಖ ಆಧಾರ. ಇದೊಂದು ಗುಹಾಂತರ ದೇವಾಲಯ ಮಾದರಿಯ ವಾಸ್ತುಶಿಲ್ಪ ಹೊಂದಿದೆ ಎನ್ನುತ್ತಾರೆ ದೇವಸ್ಥಾನ ಸಮಿತಿಯ ನಿರ್ದೇಶಕ ಹಾಗೂ ಭೂ
ವಿಜ್ಞಾನಿ ಡಾ| ಗಂಗಾಧರಮೂರ್ತಿ.

ಸಿದ್ದೇಶ್ವರನದುರ್ಗದ ಬೆಟ್ಟ ಕೃಷ್ಣ ಶಿಲಾ ಸ್ತೋಮದ ಬೃಹತ್‌ ಗುಂಡು-ಬಂಡೆಗಳಿಂದ ಕೂಡಿದೆ. ಸಂಶೋಧಕರ ಪ್ರಕಾರ, ಭೂಮಿ ಉದ್ಬವಿಸಿದಾಗ ಪ್ರಥಮವಾಗಿ ನಿರ್ಮಾಣವಾಗುವ ಅತ್ಯಂತ ಗಡುಸು/ಕಠಿಣವಾದ ಬೆಸಾಲ್ಟ್ ಶಿಲಾ ಕುಟುಂಬಕ್ಕೆ ಸೇರಿದ ಡಾಲರೈಟ್‌ ಶಿಲೆ ಇಲ್ಲಿದೆ ಎಂದು ತಿಳಿಸಿದರು.

ದೇವಾಲಯಗಳ ಬೀಡು: ಸಿದ್ದೇಶ್ವರನದುರ್ಗದ ಸುತ್ತ ಹಲವು ದೇಗುಲಗಳಿವೆ. ಗ್ರಾಮದ ಈಶಾನ್ಯ ದಿಕ್ಕಿಗೆ ಎಸ್‌. ಮರಡಿಹಟ್ಟಿಯಲ್ಲಿರುವ ಆಂಜನೇಯಸ್ವಾಮಿ ದೇವಾಲಯವಿದೆ. ಇಲ್ಲಿ ಹನುಮನ ವಿಗ್ರಹ ಉತ್ತರಾಭಿಮುಖವಾಗಿ ನೆಲೆಸಿರುವುದು ವಿಶೇಷ. ಪೂರ್ವಕ್ಕೆ ಒಂದು ಎಕರೆ ವಿಸ್ತೀರ್ಣದ ಪೌಳಿಯಲ್ಲಿ ಹೊಂಗೆ, ಹುಣಸೆ, ಬೇವು. ಮಾವಿನ ತೋಪಿನ ನಡುವೆ ಕಂಗೊಳಿಸುತ್ತಿರುವ ಕಂಚಿವರದಸ್ವಾಮಿ ದೇವಾಲಯವಿದೆ.

ಆಗ್ನೇಯ ದಿಕ್ಕಿಗೆ ಯಾದವ ಕುಲದೇವರುಗಳ ಪಂಚ ದೇಗುಲಗಳಿವೆ. ದಕ್ಷಿಣದ ಬೆಟ್ಟದ ಮೇಲೆ ಮಾರಿಕಾಂಬಾ, ನೈರುತ್ಯಕ್ಕೆ ದುರುಗಮ್ಮದೇವಿ, ಪಶ್ಚಿಮಕ್ಕೆ ವೀರಭದ್ರಸ್ವಾಮಿ ದೇಗುಲಗಳಿವೆ. ವಾಯುವ್ಯಕ್ಕೆ ಆಳೆತ್ತರದ ತೋಟದ
ಆಂಜನೇಯಸ್ವಾಮಿ ದೇವಾಲಯವಿದೆ. 

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ

Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ

Chi-narabalui

Chitradurga: ನಿಧಿಯ ಆಸೆಗೆ ಜ್ಯೋತಿಷಿ ಮಾತು ಕೇಳಿ ನರಬಲಿ: ಅಮಾಯಕನ ಕೊಲೆ!

CTD-Nagasadhu-Died

Stampede: ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಾಸಾಧು ಮೃತ್ಯು!

ಬಿಜೆಪಿ ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ

BJP ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ ವೆಂಕಟೇಶ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.