ಜಾನುವಾರುಗಳೊಂದಿಗೆ ನಾಡಕಚೇರಿಗೆ ಮುತ್ತಿಗೆ
Team Udayavani, Aug 4, 2017, 2:32 PM IST
ನಾಯಕನಹಟ್ಟಿ: ಗೋಶಾಲೆಗೆ ಮೇವು ಪೂರೈಸುವಂತೆ ಒತ್ತಾಯಿಸಿ ರೈತರು ತಮ್ಮ ರಾಸುಗಳ ಸಮೇತ ತುರುವನೂರು ನಾಡಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರೈತ ಕೂನಬೇವು ಶಿವಣ್ಣ ಮಾತನಾಡಿ, ತುರುವನೂರು ಗೋಶಾಲೆಯಲ್ಲಿ ಕಳೆದ ಐದು ದಿನಗಳಿಂದ ಮೇವು ಪೂರೈಕೆಯಾಗಿಲ್ಲ. ಎಂಟು ತಿಂಗಳಿನಿಂದ ಗೋಶಾಲೆಯನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಆದರೆ ಮಳೆ ವಿಫಲವಾಗಿರುವ ಈ ಸಮಯದಲ್ಲಿ ಗೋಶಾಲೆಯನ್ನು ಮುಂದುವರಿಸಬೇಕು. ಕಂದಾಯ ಇಲಾಖೆ ಸಿಬ್ಬಂದಿ ಜು.25ರಂದು ಮೇವು ಪೂರೈಕೆ ಮಾಡಿದ್ದರು. ಮೂರು ದಿನಗಳ ನಂತರ ಜು. 29ರಂದು ಪೂರೈಕೆಯಾಗಿದೆ. ಇಲ್ಲಿಯವರೆಗೆ ಮೇವು ಪೂರೈಕೆಯಾಗಿಲ್ಲ. 12 ಸಾವಿರಕ್ಕೇರಿದ್ದ ಇಲ್ಲಿನ ರಾಸುಗಳು ಸಂಖ್ಯೆ ಇದೀಗ ಮೇವು ಪೂರೈಕೆ ಸಮಸ್ಯೆಯಿಂದ 4 ಸಾವಿರಕ್ಕೆ ಇಳಿದಿದೆ. ಆದರೆ ಇದೀಗ ಮೇವಿನ ಸಮಸ್ಯೆ ಉಂಟಾಗಿದೆ. ಒಂದೆಡೆ ರೈತರಲ್ಲಿ ಮೇವಿನ ದಾಸ್ತಾನು ಇಲ್ಲ. ಮತ್ತೂಂದೆಡೆ ಗೋಶಾಲೆಯಲ್ಲಿ ಮೇವಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ರೈತರು ರಾಸುಗಳನ್ನು ಕಟುಕರಿಗೆ ಮಾರಾಟ ಮಾಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ರೈತ ಮಹಿಳೆ ಸರೋಜಮ್ಮ ಮಾತನಾಡಿ, ಗೋಶಾಲೆ ಆರಂಭವಾದಾಗಿನಿಂದ ರಾಸುಗಳನ್ನು ಸಾಕಿಕೊಂಡು ಇಲ್ಲಿಯೇ ವಾಸವಾಗಿದ್ದೇವೆ. ಆದರೆ ಈಗ ಹೊಲ ಹಾಗೂ ಮನೆಗಳಲ್ಲಿ ಮೇವಿನ ದಾಸ್ತಾನು ಇಲ್ಲ. ಗೋಶಾಲೆ ಮುಚ್ಚಿದರೆ ರಾಸುಗಳನ್ನು ಸಾಕುವುದು ಕಷ್ಟವಾಗುತ್ತದೆ. ಆದ್ದರಿಂದ ತಕ್ಷಣ ಮೇವು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.
ಕಚೇರಿ ಪ್ರವೇಶಕ್ಕೆ ಅವಕಾಶ ನೀಡದ ಪ್ರತಿಭಟನಾಕಾರರು ಮೇವು ಪೂರೈಕೆ ಬಗ್ಗೆ ಸ್ಪಷ್ಟವಾಗಿ ತಿಳಿಸುವವರೆಗೆ ಸಿಬ್ಬಂದಿಗೆ ಕಚೇರಿ ಒಳಹೋಗುವುದಕ್ಕೆ ಪ್ರತಿಭಟನಾಕಾರರು ಅವಕಾಶ ನೀಡಲಿಲ್ಲ. ಇದರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಿಬ್ಬಂದಿ ರೈತರೊಂದಿಗೆ ಹೊರಗೆ ನಿಲ್ಲಬೇಕಾಯಿತು. ರೈತರು
ಗೋಶಾಲೆಯಲ್ಲಿದ್ದ ಎಮ್ಮೆ, ದನ ಕರುಗಳನ್ನು ನಾಡಕಚೇರಿ ಮುಂಭಾಗದಲ್ಲಿ ಜಮಾವಣೆ ಮಾಡಿದರು. ಚಿತ್ರದುರ್ಗ ತಹಶೀಲ್ದಾರ್ ಮಲ್ಲಿಕಾರ್ಜುನಪ್ಪ ಶೀಘ್ರದಲ್ಲಿ ಮೇವು ಸರಬರಾಜು ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Mangaluru: ವೆನ್ಲಾಕ್ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್
Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.