ರಸ್ತೆ ಅಗಲೀಕರಣ ಕಾರ್ಯ ಶೀಘ್ರ ಆರಂಭ
•ಲೋಕೋಪಯೋಗಿ ಇಲಾಖೆಯಿಂದ ಸ್ಥಳ ಪರಿಶೀಲನೆ ನಡೆಯಲಿ: ತಹಶೀಲ್ದಾರ್ ಮಲ್ಲಿಕಾರ್ಜುನ
Team Udayavani, Jul 23, 2019, 11:33 AM IST
ನಾಯಕನಹಟ್ಟಿ: ಪಟ್ಟಣ ಪಂಚಾಯತ್ ಪ್ರಭಾರಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ನಾಯಕನಹಟ್ಟಿ: ರಾಜ್ಯ ಹೆದ್ದಾರಿ, ತೇರುಬೀದಿ ಹಾಗೂ ಪಾದಗಟ್ಟೆ ಅಗಲೀಕರಣಕ್ಕೆ ಶೀಘ್ರದಲ್ಲೇ ಗುರುತು ಹಾಕುವ ಕಾರ್ಯ ಆರಂಭಿಸಲಾಗುವುದು ಎಂದು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತ್ ಪ್ರಭಾರಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಹೇಳಿದರು.
ಸೋಮವಾರ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಲೋಕೋಪಯೋಗಿ ಇಲಾಖೆ ವತಿಯಿಂದ ರಾಜ್ಯ ಹೆದ್ದಾರಿ 45, ತೇರುಬೀದಿ ಹಾಗೂ ಪಾದಗಟ್ಟೆ ರಸ್ತೆಗಳನ್ನು ಅಗಲೀಕರಣ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಅನುದಾನ ಒದಗಿಸಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು. ತಕ್ಷಣ ಪಪಂ ಸಿಬ್ಬಂದಿ ಹಾಗೂ ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ ನಿಗದಿಪಡಿಸಿರುವ ಅಳತೆಯ ಗುರುತು ಮಾಡಬೇಕು ಎಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆಯ ಸೆಕ್ಷನ್ ಇಂಜಿನಿಯರ್ ಹಕೀಂ ಮಾತನಾಡಿ, ಈಗಿರುವ ತೇರುಬೀದಿಯನ್ನು 8 ಮೀಟರ್‌ನಿಂದ 13 ಮೀಟರ್‌ಗೆ ವಿಸ್ತರಿಸಲಾಗುವುದು. ನಂತರ ಎರಡು ಬದಿಗಳಲ್ಲಿ ಒಂದು ಮೀಟರ್ ಚರಂಡಿ ಹಾಗೂ 1.5 ಮೀಟರ್ ಫುಟ್ಪಾತ್ ನಿರ್ಮಿಸಲಾಗುವುದು. ಆಗ ತೇರುಬೀದಿ 18 ಮೀಟರ್‌ಗೆ ಹೆಚ್ಚಲಿದೆ. 8 ಮೀಟರ್ ಇರುವ ಪಾದಗಟ್ಟೆ ರಸ್ತೆಯನ್ನು ರಸ್ತೆ, ಚರಂಡಿ ಸೇರಿ 19 ಮೀಟರ್‌ಗೆ ವಿಸ್ತರಿಸಲಾಗುವುದು. 8 ಮೀಟರ್ ರಾಜ್ಯ ಹೆದ್ದಾರಿ 45ನ್ನು 14 ಮೀಟರ್‌ವರೆಗೆ ಅಗಲೀಕರಣಗೊಳಿಸಲಾಗುವುದು ಎಂದರು.
ಪಪಂ ಸದಸ್ಯರಾದ ಜೆ.ಆರ್. ರವಿಕುಮಾರ್, ಎಸ್. ಉಮಾಪತಿ, ಮನ್ಸೂರ್ ಮಾತನಾಡಿ, ಈಗಿರುವ ತೇರುಬೀದಿ ಅಳತೆಯನ್ನು 18 ಮೀಟರ್ ಬದಲು 17 ಮೀಟರ್‌ಗೆ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು. ಪಪಂ ಸದಸ್ಯರಾದ ಯುಸೂಫ್, ಮನ್ಸೂರ್ ಮಾತನಾಡಿ, ಈಗಿರುವ ರಸ್ತೆ ಹಾಗೂ ಲೋಕೋಪಯೋಗಿ ಇಲಾಖೆ ಕೇಳಿರುವ ಅಳತೆಯನ್ನು ಮೊದಲು ಗುರುತು ಮಾಡಬೇಕು. ಕೆಂಪುಬಣ್ಣದಿಂದ ಅಗತ್ಯವಿರುವ ಪ್ರದೇಶವನ್ನು ಗುರುತಿಸಬೇಕು. ನಂತರ ಸಾರ್ವಜನಿಕರ ಆಸ್ತಿ ನಷ್ಟದ ಬಗ್ಗೆ ಹಾಗೂ ಕಡಿಮೆಗೊಳಿಸಬೇಕಾದ ಪ್ರಮಾಣವನ್ನು ನಿರ್ಧರಿಸಿ ಎಂದು ಸಲಹೆ ನೀಡಿದರು.
ಪಟ್ಟಣದಲ್ಲಿ ಶಾಖಾ ಗ್ರಂಥಾಲಯ ನಿರ್ಮಾಣಕ್ಕೆ ಗ್ರಂಥಾಲಯ ಇಲಾಖೆಯಿಂದ ಜಾಗವನ್ನು ನಿಗದಿಗೊಳಿಸಲು ಪ್ರಸ್ತಾವನೆಯನ್ನು ಪಪಂಗೆ ಸಲ್ಲಿಸಲಾಗಿದೆ. 60×40 ಉದ್ದಳತೆಯ ಜಾಗವನ್ನು ಕುಷ್ಠ ರೋಗ ಆಸ್ಪತ್ರೆ ಬಳಿ ನಿಗದಿಗೊಳಿಸಲು ಸಭೆ ತೀರ್ಮಾನಿಸಿತು.
ಪಟ್ಟಣ ಪಂಚಾಯತ್ ಸದಸ್ಯರಿಗೆ ನೀಡಿದ್ದ ಜಮಾ ಖರ್ಚಿನ ವಿವರ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು. ಸದಸ್ಯ ಜಿ.ಆರ್. ರವಿಕುಮಾರ್ ಮಾತನಾಡಿ, ಒಂದೊಂದು ಬಿಲ್ಗಳನ್ನು ಎರಡು ಕಡೆ ನಮೂದಿಸಲಾಗಿದೆ. ನೀರಿನ ಟ್ಯಾಂಕರ್‌ಗೆ ಆರು ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೂ.ಗಳನ್ನು ಖರ್ಚು ಮಾಡಲಾಗಿದೆ. ಪೌರ ಕಾರ್ಮಿಕರಿಂದ ಸ್ವಚ್ಛತೆ ಕಾರ್ಯ ಮಾಡಿಸಿ ಬೇರೊಬ್ಬರಿಂದ ಸ್ವಚ್ಛತಾ ಕಾರ್ಯಕ್ಕೆ ಬಿಲ್ ನೀಡಲಾಗಿದೆ. ಡಿ.ಜಿ. ಗೋವಿಂದಪ್ಪನವರಿಗೆ ಜಾತ್ರೆ ಪ್ರಯುಕ್ತ ಸ್ವಚ್ಛತೆ 50 ಸಾವಿರಕ್ಕೂ ಹೆಚ್ಚು ಹಣ ನೀಡಲಾಗಿದೆ. ದಾಸ್ತಾನು ಖರೀದಿ ರಿಜಿಸ್ಟರ್ ಖರೀದಿಗೆ ಒಂದು ಬಾರಿ 57,620 ರೂ. ಮತ್ತೂಂದು ಬಾರಿ 58,870 ರೂ.ಗಳನ್ನು ನೀಡಲಾಗಿದೆ. ಲೆಕ್ಕಪತ್ರಗಳಲ್ಲಿ ಭಾರೀ ಪ್ರಮಾಣದ ಲೋಪದೋಷಗಳಿವೆ ಎಂದು ಆರೋಪಿಸಿದರು.
ಪ್ರತಿ ಲೆಕ್ಕಕ್ಕೆ ದಾಖಲೆ ನಿರ್ವಹಿಸಬೇಕು. ಇದಕ್ಕೆ ಸಂಬಂಧಿಸಿದಂತೆ ದಾಖಲೆ, ಬಿಲ್, ವೋಚರ್‌ಗಳನ್ನು ಒದಗಿಸುವಂತೆ ಒತ್ತಾಯಿಸಿದರು. ಆದರೆ ಸಿಬ್ಬಂದಿ ಸೂಕ್ತವಾದ ದಾಖಲೆ ಹಾಗೂ ಬಿಲ್ಗಳನ್ನು ಒದಗಿಸಲು ತಡಕಾಡಿದರು. ಅಂತಿಮವಾಗಿ ತಹಶೀಲ್ದಾರ್ ಮಲ್ಲಿಕಾರ್ಜುನ, ಮುಂದಿನ ಸಭೆಯಲ್ಲಿ ಎಲ್ಲ ದಾಖಲೆ ಹಾಗೂ ವೋಚರ್‌ಗಳನ್ನು ಸಭೆಗೆ ನೀಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಪಪಂ ಸದಸ್ಯರಾದ ನಾಗರಾಜ್, ಬಸಣ್ಣ, ಷನುಪ್ತ, ಬೋರಮ್ಮ, ವೈ.ಗಿರಿಜಮ್ಮ, ಕೃಷ್ಣಮೂರ್ತಿ, ಮಂಜುಳಾ ಶ್ರೀಕಾಂತ್, ಮನ್ಸೂರ್, ಬಸಣ್ಣ, ಜೆ.ಟಿ.ಎಸ್. ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.