ಸಚಿವ ಆಂಜನೇಯಗೆ ಬಹಿರಂಗ ಸವಾಲು ಹಾಕಿದ ವಿದ್ಯಾರ್ಥಿನಿ!
Team Udayavani, Sep 22, 2017, 3:33 PM IST
ಚಿತ್ರದುರ್ಗ:ಜನಪ್ರತಿನಿಧಿಗಳ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲಿ. ಮೊದಲು ಸೌಲಭ್ಯ ಕೊಡಿ, ಆಮೇಲೆ ಮಾತನಾಡಿ. ಸೌಲಭ್ಯ ಕೊಟ್ಟರೆ ಸರ್ಕಾರಿ ಶಾಲೆಯಲ್ಲೇ ಓದುತ್ತೇವೆ ಇದು ಖಾಸಗಿ ಶಾಲೆಯ ವಿದ್ಯಾರ್ಥಿನಿ ಸಚಿವ ಆಂಜನೇಯಗೆ ಬಹಿರಂಗವಾಗಿ ಸವಾಲು ಹಾಕಿದ ಪರಿ ಇದು!
ಶುಕ್ರವಾರ ಚಿತ್ರದುರ್ಗದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಾಜ ಕಲ್ಯಾಣ ಸಚಿವ ಆಂಜನೇಯ ಸರ್ಕಾರಿ ಶಾಲೆಯಲ್ಲೇ ಮಕ್ಕಳು ಓದಬೇಕು ಎಂಬ ಬಗ್ಗೆ ಭಾಷಣ ಬಿಗಿದಿದ್ದರು. ಬಳಿಕ ಭಾಷಣ ಮುಗಿಸಿ ಸಚಿವರು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆಯೇ ಖಾಸಗಿ ಶಾಲೆಯ ವಿದ್ಯಾರ್ಥಿನಿ ನಯನ ಎಂಬಾಕೆ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಳು.
ಸರ್ ಸರ್ಕಾರಿ ಶಾಲೆಗೆ ಸೇರಿ ಅಂತ ಹೇಳುತ್ತೀರಿ. ಆದರೆ ಸರ್ಕಾರಿ ಶಾಲೆಯಲ್ಲಿ ಸೌಲಭ್ಯಗಳೇ ಇಲ್ಲ. ಆಯ್ತು ಸೌಲಭ್ಯ ಕೊಡುತ್ತೇವೆ ಓದಿ ಎಂದು ಸಚಿವ ಆಂಜನೇಯ ಅವರು ಹೇಳಿದಾಗ, ಬರೀ ಭರವಸೆ ಕೊಡಬೇಡಿ, ಮೊದಲು ಸೌಲಭ್ಯ ಕೊಡಿ ಆಮೇಲೆ ಮಾತನಾಡಿ. ಸೌಲಭ್ಯ ಕೊಡ್ತೀರಾ… ನಾನು ಹಾಗೂ 30 ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಸೇರುವುದಾಗಿ ನಯನಾ ಹೇಳಿದಳು.
ವಿದ್ಯಾರ್ಥಿನಿ ನಯನ ಪ್ರಶ್ನೆಯನ್ನು ನಗುತ್ತಲೇ ಕೇಳಿಸಿಕೊಂಡ ಸಚಿವ ಆಂಜನೇಯ,ಈ ಬಗ್ಗೆ ಶಿಕ್ಷಣ ಸಚಿವರ ಜತೆ ಚರ್ಚಿಸಿ ಕಾನೂನನ್ನು ಜಾರಿಗೆ ತರಲು ಶ್ರಮಿಸುತ್ತೇವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.