ತರಳಬಾಳು ಹುಣ್ಣಿಮೆಗಿಲ್ಲ ಜಾತಿ-ಮತದ ಬೇಲಿ
Team Udayavani, Feb 28, 2021, 3:48 PM IST
ಸಿರಿಗೆರೆ: ಭಾರತೀಯ ಕಾಲಮಾನಗಳ ಪ್ರಕಾರ ಭರತ ಹುಣ್ಣಿಮೆ ಎಂದು ಗುರುತಿಸಿಕೊಂಡಿರುವ ಮಾಘ ಶುದ್ಧ ಹುಣ್ಣಿಮೆಯನ್ನು ಮಠದ ಪರಂಪರೆಯಲ್ಲಿ ತರಳಬಾಳು ಹುಣ್ಣಿಮೆಯಾಗಿ ಆಚರಿಸಿಕೊಂಡು ಬರಲಾಗಿದೆ. ಇದು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಈ ವರ್ಷ ಕೊರೊನಾ ವೈರಾಣುವಿನ ಆತಂಕದಿಂದ ಸಿರಿಗೆರೆಯಲ್ಲಿ ಸರಳವಾಗಿ ಆಚರಿಸಲಾಗಿದೆ ಎಂದು ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಗುರುಶಾಂತೇಶ್ವರ ದಾಸೋಹ ಭವನದ ಮುಂಭಾಗದ ವೇದಿಕೆಯಲ್ಲಿ ಸದ್ಧರ್ಮ ಸಿಂಹಾಸನಾರೋಹಣ ಮಾಡಿ ಶ್ರೀಗಳು ಆಶೀರ್ವಚನ ನೀಡಿದರು. ಹಿಂದಿನ ತರಳಬಾಳು ಹುಣ್ಣಿಮೆಗಳಲ್ಲಿ ಭಾಗವಹಿಸಿದ್ದ ರಾಜ್ಯದ ಸಿಎಂ ಆಗಿದ್ದ ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರು ತಾವು ಮಂಡಿಸಿದ ದಾವಣಗೆರೆ, ಜಗಳೂರು, ಭರಮಸಾಗರ, ಬ್ಯಾಡಗಿ, ರಣಗಟ್ಟ ನೀರಾವರಿ ಯೋಜನೆಗಳಿಗೆ ಮಂಜೂ ರಾತಿ ನೀಡಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತೇವೆ ಎಂದರು.
ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಯಾವುದೇ ಜಾತಿ, ಜನಾಂಗ, ಮತ, ಪಂಥಗಳ ಎಲ್ಲೆ ಇಲ್ಲ. ಅದನ್ನು ಆ ರೀತಿಯಲ್ಲಿ ರೂಪಿಸಿದ ಕೀರ್ತಿ ಪೀಠದ ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಸಲ್ಲುತ್ತದೆ. ಅವರು ತರಳಬಾಳು ಪೀಠದ ಪುನರಾವರ್ತಕರು ಎಂದು ಸ್ಮರಿಸಿದರು.
ಕೊಟ್ಟೂರು ಪಟ್ಟಣದಲ್ಲಿ ಮುಂದಿನ ವರ್ಷ ತರಳಬಾಳು ಹುಣ್ಣಿಮೆ ನಡೆಯಲಿದೆ. ನಾಡಿನ ಎಲ್ಲೆಡೆಯಂತೆ ಆ ಭಾಗದ ರೈತರೂ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಆ ಭಾಗದಲ್ಲಿಯೂ ಹಲವು ಕೆರೆಗಳನ್ನು ತುಂಬಿಸಿ ಎಲ್ಲಾ ರೈತರಿಗೆ ನೆರವಾಗಬೇಕಾಗಿದೆ. ರಾಜ್ಯ ಮುಂಗಡ ಪತ್ರದಲ್ಲಿ ಕೊಟ್ಟೂರು ಭಾಗದ ನೀರಾವರಿ ಯೋಜನೆಗಳಿಗೆ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಹರಳಕಟ್ಟ ತರಳಬಾಳು ಶಾಖಾ ಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎಂ. ಚಂದ್ರಪ್ಪ, ಭರಮಸಾಗರ ಕೆರೆ ಹೋರಾಟ ಸಮಿತಿ ಅಧ್ಯಕ್ಷ ಚೌಲಿಹಳ್ಳಿ ಶಶಿ ಪಾಟೀಲ್, ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾ ಧಿಕಾರಿ ಎಸ್.ಬಿ. ರಂಗನಾಥ್, ಗ್ರಾಪಂ ಅಧ್ಯಕ್ಷ ಕೆ.ಬಿ. ಮೋಹನ್ ಇದ್ದರು. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ವಿಶೇಷಾ ಧಿಕಾರಿ ಡಾ| ಎಚ್. ವಿ. ವಾಮದೇವಪ್ಪ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.