ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ಅತ್ಯಗತ್ಯ: ಚಕ್ರವರ್ತಿ ಸೂಲಿಬೆಲೆ
ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕೆಲ ರಾಜಕಾರಣಿಗಳಿಂದ ಗೊಂದಲದ ಹೇಳಿಕೆ
Team Udayavani, May 30, 2022, 12:52 PM IST
ಚಿತ್ರದುರ್ಗ: ಅಧಿಕಾರ ದಾಹಕ್ಕಾಗಿ ಜನರನ್ನು ಒಡೆದು ಆಳುವ ಕೆಲವು ರಾಜಕಾರಣಿಗಳು ದ್ರಾವಿಡರು ಭಾರತದ ಮೂಲ ನಿವಾಸಿಗಳು, ಆರ್ಯರು ಹೊರಗಿನಿಂದ ಬಂದವರು ಎನ್ನುತ್ತಾ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ವೀರಮದಕರಿ ಸೇವಾ ಟ್ರಸ್ಟ್ ಆಯೋಜಿಸಿದ್ದ ‘ಸಮರ್ಪಣ’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ವೇದ, ಉಪನಿಷತ್ತು ಹಿಂದೂಗಳದ್ದಲ್ಲ ಎಂದು ಹೇಳುತ್ತಿದ್ದಾರೆ. ಇಂತಹ ರಾಜಕಾರಣಿಗಳಿಗೆ ಓದಿಸಲು ಪಠ್ಯಕ್ರಮ ಬೇಕಿದೆ. ಈ ನಿಟ್ಟಿನಲ್ಲಿ ಪಠ್ಯ ಬದಲಾವಣೆ ಆಗಬೇಕು. ಆರ್ಯರು ಭಾರತೀಯರು ಎಂದು ಅನೇಕ ಸಂಶೋಧನೆಗಳು ಸಾಬೀತು ಮಾಡಿವೆ. ಆದರೂ ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ ಎಂದು ಕಿಡಿ ಕಾರಿದರು.
ಈ ಹಿಂದೆ ಅರಬ್ಬರ ದಾಳಿಯಲ್ಲಿ ಕಳೆದುಕೊಂಡ ಅನೇಕ ದೇವಾಲಯಗಳನ್ನು ಇಂದು ಮರಳಿ ಪಡೆಯಲಾಗುತ್ತಿದೆ. ಇದರಿಂದಾಗಿ ಶೃಂಗಾರ ಗೌರಿ ಸಿಕ್ಕಿದ್ದಾಳೆ. ಮುಂದಿನ ದಿನಗಳಲ್ಲಿ ಕಾಶ್ಮೀರದ ಶಾರದೆಯೂ ಭಾರತಕ್ಕೆ ಬಂದು ಸೇರಲಿದ್ದಾಳೆ. ಕಾಶಿ ವಿಶ್ವನಾಥ, ಮಥುರಾ ಶ್ರೀಕೃಷ್ಣ ದೇಗುಲ ಮಾತ್ರವಲ್ಲ. ಪಾಕಿಸ್ತಾನದ ಮುಲ್ತಾನ್‌ನಲ್ಲಿರುವ (ಮೂಲಸ್ಥಾನ) ಸೂರ್ಯ ದೇವಾಲಯವನ್ನು ಪಡೆಯಬೇಕಿದೆ ಎಂದರು.
ಮಥುರಾ, ಕಾಶಿ ದೇಗುಲಗಳನ್ನು ಬಿಟ್ಟುಕೊಡುವಂತೆ ಮನವಿ ಮಾಡಿದರೂ ಕೇಳಲಿಲ್ಲ. ಹಾಗಾಗಿ ಹೋರಾಟದ ಮೂಲಕ ಪಡೆಯಬೇಕಾಯಿತು. ರಾಮನ ದೇಗುಲದ ಸ್ಥಳದಲ್ಲಿದ್ದ ಮಸೀದಿಯನ್ನು ಕೆಡವಿ ಈಗ ಭವ್ಯ ಮಂದಿರ ಕಟ್ಟಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಜಗತ್ತಿನ ಪ್ರಖ್ಯಾತ ಸ್ಥಳಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಕಳೆದುಕೊಂಡ ಹಿಂದೂ ಸಮಾಜದ ದೇವಾಲಯಗಳನ್ನು ಮರಳಿ ಪಡೆಯುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು.
ಮಸೀದಿಯ ಜಾಗದಲ್ಲಿ ಶಿವಲಿಂಗ ಪತ್ತೆಯಾದಾಗ ಅದನ್ನು ನೀರಿನ ಕಾರಂಜಿ ಎಂದರು, ಮುಂಜಿ ಮಾಡಿದ ರೀತಿಯಲ್ಲಿದೆ ಎಂದು ಛೇಡಿಸಿದರು. ಆದರೂ ಹಿಂದೂಗಳು ತಾಳ್ಮೆಯಿಂದ ತಮ್ಮ ಸಮಾಜದ ಸ್ವತ್ತನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಮಹಿಳೆಯೊಬ್ಬರು ಕುರಾನ್‌ನಲ್ಲಿನ ಎರಡು ಸಂಗತಿಗಳನ್ನು ಹೇಳಿದ್ದಕ್ಕೆ ಆಕೆಯ ತಲೆ ಕಡಿಯಬೇಕೆಂದು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ, ಇಂತಹ ಮನೋಭಾವ ಹೊಂದಿರುವ ಅನ್ಯ ಧರ್ಮೀಯರು ಹಿಂದೂ ದೇವತೆಗಳನ್ನು ಅಳೆಯುವುದು ಸರಿಯೇ ಎಂದು ಪ್ರಶ್ನಿಸಿದರು.
ಕೋವಿಡ್ ಲಸಿಕೆ ಹೊತ್ತ ವಿಮಾನ ಬ್ರೆಜಿಲ್‌ಗೆ ಹಾರಿದಾಗ ಬ್ರೆಜಿಲ್ ಪ್ರಧಾನಿ, ಆಂಜನೇಯ ಸಂಜೀವಿನಿ ಬೆಟ್ಟ ಹೊತ್ತು ಬರುವಂತೆ ಭಾಸವಾಗುತ್ತಿದೆ ಎಂದು ಟ್ವೀಟ್ ಮಾಡಿದರು. ಆದರೆ ವಿರೋಧ ಪಕ್ಷದವರು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಇಂದು ಶ್ರೀಲಂಕಾ, ಪಾಕಿಸ್ತಾನ, ಚೀನಾ ದೇಶಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಇವುಗಳ ನಡುವೆ ಭಾರತ ಪ್ರಜ್ವಲಿಸುತ್ತಿದೆ. ಇಡೀ ಜಗತ್ತು ಆಸೆಗಣ್ಣಿನಿಂದ ಭಾರತದತ್ತ ನೋಡುತ್ತಿದೆ ಎಂದು ಬಣ್ಣಿಸಿದರು.
ಸೇನೆ ಸೇರೋದು ಹೊಟ್ಟೆ ಪಾಡಿಗಲ್ಲ
ಒಂದು ಕಾಲದಲ್ಲಿ ಭಾರತದ ಸೈನಿಕರು ಸಾಯಲಿಕ್ಕೆಂದೇ ಸೈನ್ಯ ಸೇರುತ್ತಾರೆ ಎಂಬ ಮನೋಭಾವವಿತ್ತು. ಈಗ ಆ ಕಾಲ ಬಲಾಗಿದ್ದು, ಈಗ ಭಾರತೀಯರು ಸೇನೆ ಸೇರುತ್ತಿರುವುದು ಶತ್ರುಗಳನ್ನು ಕೊಲ್ಲುವುದಕ್ಕೆ ಎಂಬ ಕಾಲ ಬಂದಿದೆ. ಹೊಟ್ಟೆಪಾಡಿಗಾಗಿ ಯಾರೂ ಸೇನೆಗೆ ಸೇರುವುದಿಲ್ಲ. ದೇಶದ ಮೇಲಿನ ಅಭಿಮಾನ ಹಾಗೂ ದೇಶದ ರಕ್ಷಣೆಗೆ ಸೇನೆ ಸೇರುತ್ತಿದ್ದಾರೆ. ಇದಕ್ಕೆ ಇತ್ತೀಚಿನ ದಿನಗಳಲ್ಲಿ ಭಾರತದ ಗಡಿಯಲ್ಲಿ ನಡೆದ ಅನೇಕ ಘಟನೆಗಳೇ ಸಾಕ್ಷಿ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.