ಸ್ಮಶಾನ ಜಾಗ ಅಧಿಕೃತ ಖಾತೆಗೆ ಒತ್ತಾಯ
Team Udayavani, May 25, 2018, 4:25 PM IST
ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆ ಕನಕವೃತ್ತದ ಸಮೀಪವಿರುವ ಮೂರು ಎಕರೆ ಇಪ್ಪತ್ತು ಗುಂಟೆ ಸ್ಮಶಾನದ ಜಾಗವನ್ನು ಅಧಿಕೃತವಾಗಿ ಖಾತೆ ಮಾಡಿಕೊಡುವಂತೆ ಚಿರಶಾಂತಿ ಧಾಮದ ಟ್ರಸ್ಟ್ ಮತ್ತು ಬುರುಜನಹಟ್ಟಿಯ ನಿವಾಸಿಗಳು ಗುರುವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬುರುಜನಹಟ್ಟಿ, ನೆಹರು ನಗರ, ಚೇಳುಗುಡ್ಡ, ಜೆ.ಸಿ.ಆರ್. ಬಡಾವಣೆ, ಕುಂಬಾರಬೀದಿ, ಸಾವಂತರಹಟ್ಟಿ, ಸೊಪ್ಪಿನವರಹಟ್ಟಿ, ಕೋಣನಹಟ್ಟಿ, ಕೆಂಚನಕಟ್ಟೆ, ಮಾಳಪ್ಪನಹಟ್ಟಿ ಹಾಗೂ ಸಿಹಿನೀರು ಹೊಂಡದ ವಾಸಿಗಳು ಪೂರ್ವಜರು ಮರಣ ಹೊಂದಿದಾಗ ಅನಾದಿ ಕಾಲದಿಂದಲೂ ಇಲ್ಲಿ ಶವಸಂಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ. ಶವಸಂಸ್ಕಾರದ ನಂತರ ಸಮಾಕಟ್ಟಿ ಹಬ್ಬ ಹರಿದಿನಗಳಲ್ಲಿ ಈಗಲೂ ಹಿರಿಯರ ಪೂಜೆ ಮಾಡಲಾಗುತ್ತದೆ. ಸ್ಮಶಾನದ ಜಾಗವನ್ನು ಅಧಿಕೃತವಾಗಿ ಖಾತೆಗೆ ದಾಖಲಿಸಿ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಚಿರಶಾಂತಿಧಾಮ ಅಭಿವೃದ್ದಿ ಟ್ರಸ್ಟ್ ರಚಿಸಿ ಸ್ವತ್ಛತೆ ಮತ್ತು ನೀರಿನ ವ್ಯವಸ್ಥೆ ಮಾಡಿ ಶವಸಂಸ್ಕಾರಕ್ಕೆ ಬರುವವರಿಗೆ ಅನುಕೂಲ ಮಾಡಲಾಗಿದೆ. ನಗರಸಭೆ ಮತ್ತು ತಾಲೂಕು ಕಚೇರಿಯಲ್ಲಿ ಸ್ಮಶಾನದ ಜಾಗದ ಬಗ್ಗೆ ಪರಿಶೀಲಿಸಿದಾಗ ಯಾವುದೇ ಅಧಿಕೃತ ದಾಖಲೆಗಳು ಇಲ್ಲವೆಂಬುದು ತಿಳಿದು ಬಂದಿದೆ. ಹಾಗಾಗಿ ಸ್ಮಶಾನದ ಜಾಗ ಅಳತೆ ಮಾಡಲು ತಹಶೀಲ್ದಾರ್‌ಗೆ ಟ್ರಸ್ಟಿನಿಂದ ಮನವಿ ನೀಡಿದಾಗ ಸರ್ವೇಯರ್ ಅಳೆತೆ ಮಾಡಿದಾಗ ಮೂರು ಎಕರೆ ಇಪ್ಪತ್ತು ಗುಂಟೆ ಸ್ಮಶಾನದ ಜಾಗ ಎಂದು ಸ್ಕೆಚ್ ನೀಡಿರುತ್ತಾರೆ. ಆದ್ದರಿಂದ ಖಾತೆ ಮಾಡಲು ನಗರಸಭೆಗೂ ಅರ್ಜಿ ನೀಡಲಾಗಿದೆ. ಇದನ್ನು ಪರಿಗಣಿಸಿ ಸ್ಮಶಾನದ ಜಾಗವು ನಗರಸಭೆಗೆ ಸೇರಿದ್ದೆಂದು ದೃಢೀಕರಣ ಪತ್ರ ನೀಡಿರುತ್ತಾರೆ. ಆದ್ದರಿಂದ ಈ ಜಾಗವನ್ನು ಅಧೀಕೃತವಾಗಿ ಖಾತೆ ಮಾಡಿಕೊಡಲು ನಗರಸಭೆಗೆ ಸೂಚನೆ ನೀಡುವಂತೆ ಅಪರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಎಂ.ವಿ.ಮಾಲತೇಶ್, ಎನ್. ಲಕ್ಷ್ಮೀಶ್, ಎಸ್.ಪ್ರಕಾಶ್, ನಗರಸಭೆ ಮಾಜಿ ಸದಸ್ಯ ಎಲ್. ತಿಪ್ಪೇಸ್ವಾಮಿ, ಕೆ.ಆರ್. ಕೃಷ್ಣಮೂರ್ತಿ, ಎಸ್.ಪುಟ್ಟಸ್ವಾಮಿ, ಆಯ್ತಾರಪ್ಪ, ಎಸ್.ಬಿ. ರವಿಕುಮಾರ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.