ಸೌದಿಯಿಂದ ಪತ್ನಿ ಕರೆಸಲು ಪರದಾಟ!
Team Udayavani, Dec 18, 2018, 6:00 AM IST
ಚಿತ್ರದುರ್ಗ: ಮಧ್ಯವರ್ತಿಯ ಮಾತು ನಂಬಿ ಸೌದಿ ಅರೇಬಿಯಾಗೆ ಹೋಗಿರುವ ತಮ್ಮ ಪತ್ನಿಯನ್ನು ಭಾರತಕ್ಕೆ ವಾಪಸ್ ಕರೆಸಲು ಸಹಾಯ ಮಾಡುವಂತೆ ವ್ಯಕ್ತಿಯೋರ್ವ ಈಗ ಪೊಲೀಸರ ಮೊರೆ ಹೋಗಿದ್ದಾನೆ. ಈತನ ದೂರಿಗೆ ಸ್ಪಂದಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ರಾಜ್ಯ ಗುಪ್ತವಾರ್ತೆಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಚಿತ್ರದುರ್ಗ ನಗರ ಹೊರವಲಯದ ಚೇಳುಗುಡ್ಡದ ಈಶ್ವರ ದೇವಸ್ಥಾನದ ಸಮೀಪದ ನಿವಾಸಿ ಅಸ್ಲಂ ಭಾಷಾ, ಪತ್ನಿ ರೇಷ್ಮಾ ಭಾನು ಅವರನ್ನು ವಾಪಸ್ ಕರೆಸುವಂತೆ ಕೋಟೆ ಪೊಲೀಸ್ ಠಾಣೆಗೆ ಡಿ.12ರಂದು ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಪತ್ರ ವ್ಯವಹಾರ ಮಾಡಿದ್ದಾರೆ.
ಸೋಮವಾರ ಈ ಕುರಿತು ಮಾಹಿತಿ ನೀಡಿದ ಎಸ್ಪಿ ಡಾ.ಕೆ. ಅರುಣ್, ರಾಜ್ಯ ಗುಪ್ತವಾರ್ತೆಯ ಪೊಲೀಸ್ ಮಹಾನಿರ್ದೇ
ಶಕರಿಗೆ ಪತ್ರ ಬರೆಯಲಾಗಿದೆ. ಮುಂದಿನ ಕ್ರಮಕ್ಕಾಗಿ ಅವರಿಂದ ನವದೆಹಲಿಯ ಗೃಹ ಸಚಿವಾಲಯ ಹಾಗೂ ವಿದೇಶಾಂಗ ಇಲಾಖೆಗೆ ಪತ್ರ ಹೋಗಿರುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಏನಿದು ಘಟನೆ?: ಚೇಳುಗುಡ್ಡದ ಅಸ್ಲಂ ಭಾಷಾ, 17 ವರ್ಷಗಳ ಹಿಂದೆ ದಾವಣಗೆರೆ ತಾಲೂಕಿನ ತುರಚಘಟ್ಟ ಗ್ರಾಮದಮರ್ಜಾಸಾಬ್ ಎನ್ನುವವರ ಪುತ್ರಿ ರೇಷ್ಮಾಭಾನು ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹತ್ತು ವರ್ಷಗಳ ಹಿಂದೆ ನರ ದೌರ್ಬಲ್ಯಕ್ಕೆ ಒಳಗಾದ ಅಸ್ಲಂ ಭಾಷಾ, ವ್ಹೀಲ್‌ಚೇರ್‌ನಲ್ಲಿ ಓಡಾಡುತ್ತಿದ್ದಾರೆ. ನಗರದ ಫಾತಿಮಾ ಮಸೀದಿ ಸಮೀಪದ ಅಬ್ದುಲ್ ಕರೀಂ ಎನ್ನುವ ಮಧ್ಯವರ್ತಿ ನನ್ನ ಪರಿಸ್ಥಿತಿಯನ್ನು ನೋಡಿ ಅನುಕಂಪ ವ್ಯಕ್ತಪಡಿಸುವಂತೆ ನಟಿಸಿದ. “ನಿನ್ನ ಪತ್ನಿಯನ್ನು ಸೌದಿಗೆ
ಕಳುಹಿಸಿಕೊಡು, ಅಲ್ಲಿ ಒಳ್ಳೆಯ ಕೆಲಸ ಕೊಡಿಸುತ್ತೇನೆ, ಸಾಕಷ್ಟು ಸಂಬಳವನ್ನೂ ಕೊಡುತ್ತಾರೆ. ಇದರಿಂದ ನಿನ್ನ ಔಷಧೋಪಚಾರಕ್ಕೆ
ಅನುಕೂಲವಾಗುತ್ತದೆ. ಇದರಿಂದ ನೆಮ್ಮದಿಯ ಜೀವನ ನಡೆಸಬಹುದೆಂದು ಆಮಿಷ ಒಡ್ಡಿದ್ದ ಎಂದು ಅಸ್ಲಂ ಭಾಷಾ ದೂರಿನಲ್ಲಿ ತಿಳಿಸಿದ್ದಾರೆ.
ಇಷ್ಟವೇ ಇರಲಿಲ್ಲ: ಸೌದಿ ಅರೇಬಿಯಾಗೆ ಪತ್ನಿಯನ್ನು ಕಳುಹಿಸುವುದು ನನಗೆ ಇಷ್ಟವೇ ಇರಲಿಲ್ಲ. ಕಳೆದ 13 ತಿಂಗಳ ಹಿಂದೆ ನಾನು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಆಗಮಿಸಿದ್ದ ಮಧ್ಯವರ್ತಿ ಅಬ್ದುಲ್ ಕರೀಂ, ನನ್ನ ಪತ್ನಿಗೆ ಇಲ್ಲಸಲ್ಲದ್ದನ್ನು ಹೇಳಿ ಆಸೆ ಹುಟ್ಟಿಸಿ ಮರಳು ಮಾಡಿದ್ದ. ನಂತರ ನಮಗ್ಯಾರಿಗೂ ಮಾಹಿತಿ ನೀಡದೆ ಹೈದರಾಬಾದ್ ಮೂಲಕ ಸೌದಿ ಅರೇಬಿಯಾಕ್ಕೆ ಕಳುಹಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಆ ದೇಶದವರಿಂದ 3.50 ಲಕ್ಷ ರೂ. ಪಡೆದಿದ್ದಾನೆ. ಇದರಿಂದ ನಮಗೆ ಯಾವ ಅನುಕೂಲವೂ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ದೂರವಾಣಿ ಕರೆ ಮಾಡಿದ್ದ ನನ್ನ ಪತ್ನಿ, ನನಗೆ ಇಲ್ಲಿನ ಕೆಲಸ ಇಷ್ಟ ಆಗುತ್ತಿಲ್ಲ, ವಾಪಸ್ ಭಾರತಕ್ಕೆ ಹೋಗುತ್ತೇನೆ, ಕಳುಹಿಸಿ ಕೊಡಿ ಎಂದು ಕೋರಿಕೊಂಡರೂ ಯಾರೂ ಸಹಾಯ ಮಾಡಿಲ್ಲ. ಹೇಗಾದರೂ ಮಾಡಿ ನನ್ನನ್ನು ವಾಪಸ್ ಕರೆಸಿಕೊಳ್ಳಿ ಎಂದು ಬೇಡಿಕೊಂಡಿದ್ದಾಳೆ. ಆದ್ದರಿಂದ ನನ್ನ ಪತ್ನಿ ರೇಷ್ಮಾಭಾನು ಅವರನ್ನು ಭಾರತಕ್ಕೆ ಕರೆಸಬೇಕು. ಆಮಿಷವೊಡ್ಡಿ ಸೌದಿ ಅರೇಬಿಯಾಕ್ಕೆ ಕಳುಹಿಸಿದ ಮಧ್ಯವರ್ತಿ ಅಬ್ದುಲ್ ಕರೀಂ ವಿರುದಟಛಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಸ್ಲಂ ಭಾಷಾ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
Sushasana Day: ಕಾಂಗ್ರೆಸ್ ಆಡಳಿತದಲ್ಲಿ ಜಂಗಲ್ ರಾಜ್ ಸೃಷ್ಟಿ: ಬಿ.ಎಲ್.ಸಂತೋಷ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.