ಜಿಲ್ಲೆಯಲ್ಲಿ ದಾಖಲೆಯ ಶೇ.95.59 ಮತದಾನ
Team Udayavani, Jun 9, 2018, 2:45 PM IST
ಚಿತ್ರದುರ್ಗ: ವಿಧಾನಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇ. 95.59 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.
ಮೊಳಕಾಲ್ಮೂರು ತಾಲೂಕಿನಲ್ಲಿ 204 ಪುರುಷರು, 33 ಮಹಿಳೆಯರು ಸೇರಿ 237 ಜನರು ಮತ ಚಲಾಯಿಸಿದ್ದು ಶೇ. 96.73 ರಷ್ಟು ಮತದಾನವಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ 574 ಪುರುಷರು, 131 ಮಹಿಳೆಯರು ಸೇರಿ 705 ಜನರು ಮತ ಚಲಾಯಿಸಿದ್ದು ಶೇ. 95.79 ರಷ್ಟು ಮತದಾನವಾಗಿದೆ. ಚಿತ್ರದುರ್ಗದಲ್ಲಿ 471 ಪುರುಷರು, 206 ಮಹಿಳೆಯರು ಸೇರಿ ಒಟ್ಟು 677 ಜನರು ಮತ ಚಲಾಯಿಸಿದ್ದು ಶೇ. 96.44 ರಷ್ಟು ಮತದಾನವಾಗಿದೆ. ಚಿತ್ರದುರ್ಗದ ಇನ್ನೊಂದು ಕೇಂದ್ರದಲ್ಲಿ 330 ಪುರುಷರು, 165 ಮಹಿಳೆಯರು ಸೇರಿ ಒಟ್ಟು 495 ಜನರು ಮತ ಚಲಾಯಿಸಿದ್ದು ಶೇ. 93.05 ರಷ್ಟು ಮತದಾನವಾಗಿದೆ.
ಹೊಳಲ್ಕೆರೆ ತಾಲೂಕಿನಲ್ಲಿ 333 ಪುರುಷರು, 71 ಮಹಿಳೆಯರು ಸೇರಿ 404 ಜನರು ಮತ ಚಲಾಯಿಸಿದ್ದು ಶೇ. 94.39 ರಷ್ಟು ಮತದಾನವಾಗಿದೆ. ಹಿರಿಯೂರು ತಾಲೂಕಿನಲ್ಲಿ 451 ಪುರುಷರು, 139 ಮಹಿಳೆಯರು ಸೇರಿ 590 ಜನರು ಮತ ಚಲಾಯಿಸಿದ್ದು ಶೇ. 96.25 ರಷ್ಟು ಮತದಾನವಾಗಿದೆ ಹಾಗೂ ಹೊಸದುರ್ಗ ತಾಲೂಕಿನಲ್ಲಿ 455 ಪುರುಷರು, 98 ಮಹಿಳೆಯರು ಸೇರಿ 553 ಜನರು ಮತ ಚಲಾಯಿಸಿದ್ದು ಶೇ. 96.34 ರಷ್ಟು ಮತ ಚಲಾವಣೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2944 ಪುರುಷರು, 886 ಮಹಿಳೆಯರು ಸೇರಿ ಒಟ್ಟು 3830 ಮತದಾರರಿದ್ದಾರೆ. ಆ ಪೈಕಿ 2818 ಪುರುಷರು ಹಾಗೂ 843 ಮಹಿಳೆಯರು ಸೇರಿ 3661 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.