ಉತ್ತಮ ಕೆಲಸ ಮಾಡಲು ಎಚ್ಚರಿಕೆ ಗಂಟೆ
Team Udayavani, May 1, 2021, 6:07 PM IST
ಚಿತ್ರದುರ್ಗ: ಕೋವಿಡ್ ಜಗತ್ತಿನಾದ್ಯಂತ ಸಂಕೀರ್ಣ ಸ್ಥಿತಿ ಸೃಷ್ಟಿಸಿದ್ದು, ಇದು ಸಂದಿ ಗ್ಧ ಕಾಲವಾಗಿದ್ದು, ಅಪಾರ ಜೀವಹಾನಿಯ ಜತೆಗೆ ನಮ್ಮ ಅಕ್ಕಪಕ್ಕದವರನ್ನು ಕಳೆದುಕೊಳ್ಳುತ್ತಿದ್ದೇವೆ. ಈ ದಿಸೆಯಲ್ಲಿ ನಾವೆಲ್ಲಾ ಉತ್ತಮ ಕೆಲಸ ಮಾಡಲು ಇದೊಂದು ಎಚ್ಚರಿಕೆಯ ಗಂಟೆಯಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ರಂಜಾನ್ ಹಬ್ಬದ ಅಂಗವಾಗಿ ಯುಎಇ ಕನ್ನಡಿಗರು, ದುಬೈ ಸಂಯುಕ್ತ ಅರಬ್ ಸಂಸ್ಥಾನದಿಂದ ನಡೆದ ಸರ್ವ ಧರ್ಮ ರಂಜಾನ್ ಸ್ನೇಹಮಿಲನ ಮತ್ತು ಕೋವಿಡ್‌ಮುಕ್ತ ವಿಶ್ವಕ್ಕಾಗಿ ಪ್ರಾರ್ಥನಾ ಸಭೆಯ ದಿವ್ಯಸಾನ್ನಿಧ್ಯ ವಹಿಸಿ ಆನ್‌ಲೈನ್ ಮೂಲಕ ಶ್ರೀಗಳು ಮಾತನಾಡಿದರು. ಸುಖ ಸಂಪತ್ತಿನ ಜತೆ ಹೋಗುವವರು ಮನೆಯಲ್ಲಿ ಉಳಿಯುತ್ತಾರೆ. ಸಂತರು ಪ್ರವಾದಿಗಳು ಸಂಕಷ್ಟ ಬಂದಾಗ ಬೀದಿಗೆ ಬರುತ್ತಾರೆ. ಅವರು ಅನ್ನ ಆಹಾರ ಹಂಚುತ್ತಾರೆ. ಭಾರತೀಯರಿಗೆ ಶ್ರಾವಣ ಮೊದಲಾದವು ಪವಿತ್ರವಾದರೆ ಮುಸ್ಲಿಂ ಬಾಂಧವರಿಗೆ ಉಪವಾಸ ಮಾಡುತ್ತ ರಂಜಾನ್ ಆಚರಿಸುವುದು ಪವಿತ್ರವಾಗಿದೆ. ಈ ತಿಂಗಳ ಪ್ರಾಮುಖ್ಯತೆಯೇ ಸಹಭೋಜನ. ತನ್ನ ವಿರೋಗಳನ್ನೂ ಸಹ ಆಮಂತ್ರಿಸುವುದು ವಿಶೇಷ. ಬಸವಣ್ಣ ಕೂಡಾ ಇದನ್ನೇ ಹೇಳಿದ್ದಾರೆ. ಸೇವಿಸುವ ಆಹಾರಕ್ಕೆ ಕೆಲವರು ಅನ್ನ, ಕೂಳು ಮೊದಲಾಗಿ ಹೇಳುತ್ತಾರೆ. ಬಸವಣ್ಣನವರ ಪ್ರಕಾರ ಶರಣ ಸಂಸ್ಕೃತಿಯಲ್ಲಿ ಪ್ರಸಾದ. ಇಸ್ಲಾಂನಲ್ಲಿ ಜಕಾತ್ ಎನ್ನುತ್ತಾರೆ ಎಂದು ವಿವರಿಸಿದರು. ಎಲ್ಲ ಧರ್ಮಗಳಲ್ಲೂ ಕ್ಷಮಾಪಣೆ ಇದೆ. ಅದರಂತೆ ನಾವು ಬೇರೆಯರಿಗೆ ಮಾಡಿದ ಉಪಕಾರ ಹಾಗೂ ನಮಗೆ ಬೇರೆಯವರು ಮಾಡಿದ ಅಪಕಾರಗಳನ್ನು ಮರೆಯಬೇಕು. ಆಗ ಮಾತ್ರ ಸಹಜೀವನ, ಸಹಚಿಂತನ ಸಾಧ್ಯ ಎಂದರು.
ಸದ್ಯದ ಪರಿಸ್ಥಿತಿಯು ಅಂತಃಪ್ರಜ್ಞೆ ಪ್ರೇರೇಪಿಸುವ ಮತ್ತು ಅನುಸಂಧಾನದ ಕಾಲ. ಕರೆದುಕೊಂಡು ಉಣ್ಣುವ ಕಾಲ. ಮಾತ್ರ ಎಚ್ಚರಿಕೆಯ ಕಾಲವೂ ಹೌದು. ಅಸಹಾಯಕರಿಗೆ ನೆರವು ನೀಡುವುದು ಮುಖ್ಯವಾಗಿದೆ. ಶರಣರು ಸಂತರು ಸೂಫಿಗಳು ಕಷ್ಟಜೀವಿಗಳಿಗೆ ಸಹಾಯ ಹಸ್ತ ನೀಡುತ್ತಾರೆ. ಮಸೀದಿ, ಮಂದಿರ, ಚರ್ಚ್, ಇಗರ್ಜಿಗಳಿಗೆ ಒಂದು ಜವಾಬ್ದಾರಿ ಇರುತ್ತದೆ. ನಮ್ಮ ಕಾಯಕ ಪೂಜೆಯಾಗಬೇಕು. ನಮಗೆ ದುಡಿದು ಉಣ್ಣುವವರು ಬೇಕು. ಪ್ರತಿಯೊಬ್ಬ ಮುಸ್ಲಿಂ ಬಾಂಧವರು ದುಡಿದು ಉಣ್ಣುತ್ತಾರೆ. ಧರ್ಮ ಎನ್ನುವುದು ಪರಮ ಪರಿಜ್ಞಾನ ಉಂಟು ಮಾಡುತ್ತದೆ. ನಾವೆಲ್ಲ ದೈನಂದಿನ ಜೀವನದಲ್ಲಿ ಶಾಂತಿ, ಸಹನೆ, ಸಾಮರಸ್ಯದಿಂದ ಜೀವಿಸೋಣ ಎಂದರು.
ಪದ್ಮಶ್ರೀ ಇಬ್ರಾಹಿಂ ಸುತಾರ, ಮಂಗಳೂರಿನ ಮೌಲಾನ ಸುಫಿಯಾನ್ ಸಖಾಫಿ, ಮೌಲಾನಾ ಅನೀಸ್ ಕೌಸರಿ, ಮಹಮ್ಮದ್ ಕುಂಞ, ಹಾಸನದ ಫಾದರ್ ಅಂತೋಣಿ, ಕೆಎನ್‌ಆರ್‌ಐನ ಡಾ. ಆರತಿ ಕೃಷ್ಣ, ದುಬೈನ ಖಲೀಲ್ ಕಾಸರಗೋಡು, ಮಹಮ್ಮದ್ ಮುಸ್ತಾಫ ಮತ್ತು ರಫೀಕ್ ಅಲಿ ಮೊದಲಾದವರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಮುಸ್ತಾಫ ನಾಡಗೀತೆ ಹಾಡುವಾಗ ಎಲ್ಲರು ಎದ್ದು ನಿಂತು ಗೌರವ ಸಲ್ಲಿಸಿದರು. ಪಲ್ಲವಿ ಸ್ವಾಗತಿಸಿದರು. ಮೊಹಮ್ಮದ್ ಅಸ^ರ್ ಸೋಂಪಾಡಿ ಕುರಾನ್ ಪಠಣ ಮಾಡಿದರು. ಸೈಯದ್ ಅಸYರ್ ಅಲಿ ಪ್ರಾರ್ಥಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.