ಸ್ವಾಮಿ ಹುಂಡಿಗೆ ಚಿನ್ನ -ಬೆಳ್ಳಿ, ಬೇಡಿಕೆ ಪತ್ರ

ತಿಪ್ಪೇರುದ್ರಸ್ವಾಮಿ ಹುಂಡಿ ಎಣಿಕೆ ಕಾರ್ಯ! ­ನಾಲ್ಕು ತಿಂಗಳಲ್ಲಿ 28.43 ಲಕ್ಷ ರೂ. ಸಂಗ್ರಹ

Team Udayavani, Mar 10, 2021, 7:33 PM IST

tipperudraswami

ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಮಂಗಳವಾರ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 28.43 ಲಕ್ಷ ರೂ. ಸಂಗ್ರಹವಾಗಿದೆ. ಒಳಮಠದ ಹುಂಡಿಯಲ್ಲಿ 23,88,363 ರೂ., ಹೊರಮಠದ ಹುಂಡಿಗಳಲ್ಲಿ 4,55,480 ರೂ. ಸೇರಿ ಒಟ್ಟು 28,43,843 ರೂ. ಸಂಗ್ರಹವಾಗಿದೆ.

ಈ ಹಿಂದೆ 3.11.2020ರಂದು ಹುಂಡಿ ಹಣವನ್ನು ಎಣಿಕೆ ಮಾಡಲಾಗಿತ್ತು. ಆಗ ಎರಡೂ ದೇವಾಲಯಗಳಿಂದ ಒಟ್ಟಾರೆ 26,10,880 ರೂ. ಸಂಗ್ರಹವಾಗಿತ್ತು. ಈ ಬಾರಿ ಎಣಿಕಾ ಕಾರ್ಯದಲ್ಲಿ 2.32 ಲಕ್ಷ ರೂ. ಹೆಚ್ಚಿನ ಪ್ರಮಾಣದ ಹಣ ಸಂಗ್ರಹವಾಗಿದೆ. ನಾಲ್ಕು ತಿಂಗಳು 6 ದಿನಗಳಲ್ಲಿ ಸಂಗ್ರಹವಾಗಿರುವ ಹುಂಡಿ ಹಣ ಇದಾಗಿದೆ. ಎರಡೂ ದೇವಾಲಯಗಳಲ್ಲಿ ಭಾರೀ ಪ್ರಮಾಣದ ಚಿಲ್ಲರೆ ಸಂಗ್ರಹವಾಗಿತ್ತು. ಹೊರಮಠದಲ್ಲಿ 23,240 ರೂ., ಒಳಮಠದಲ್ಲಿ 89,035 ರೂ. ಸೇರಿದಂತೆ ಒಟ್ಟಾರೆ 1,12,275 ರೂ.ಗಳಷ್ಟು ಚಿಲ್ಲರೆ ನಾಣ್ಯಗಳು ಸಂಗ್ರಹವಾಗಿದ್ದವು.

ಭಕ್ತರು ಹಣದ ಜತೆಗೆ ಬೆಳ್ಳಿ ಹಾಗೂ ಬಂಗಾರದ ವಸ್ತುಗಳನ್ನು ಹುಂಡಿಗೆ ಹಾಕುವ ರೂಢಿಯಿದೆ. ಒಳಮಠದ ಹುಂಡಿಯಲ್ಲಿ ಚೈನ್‌, ಉಂಗುರ, ಪಾದುಕೆ, ಛತ್ರಿ, ಕರಡಿಗೆ, ತೊಟ್ಟಿಲು, ಕಣ್ಣು, ವಿನಾಯಕ ಮೂರ್ತಿ  ಸೇರಿದಂತೆ ವಿಧ ರೀತಿಯ ಬೆಳ್ಳಿ ಹಾಗೂ ಬಂಗಾರದ ವಸ್ತುಗಳು ಕಂಡುಬಂದವು.

ಹರಕೆ ಫಲಿಸಿದ ಭಕ್ತರು ಬೆಳ್ಳಿ ಅಥವ ಬಂಗಾರದ ವಸ್ತುಗಳನ್ನು ಹುಂಡಿಗೆ ಹಾಕುತ್ತಾರೆ. ಮಕ್ಕಳ ಫಲ, ಪದನ್ನೋತಿ, ವಿದ್ಯೆ, ವ್ಯಾಪಾರದಲ್ಲಿ ಲಾಭ ಸೇರಿದಂತೆ ವಿವಿಧ ಹರಕೆಗಳಿಂದ ಭಕ್ತರು ಚಿನ್ನದ ವಸ್ತುಗಳನ್ನು ದೇವರಿಗೆ ಸಮರ್ಪಿಸಿದ್ದಾರೆ. ಚಿನ್ನದ ಕಿವಿ ಓಲೆ, 1911ರ ಕಾಲದ ಚಿನ್ನದ ನಾಣ್ಯ ವಿಶೇಷವಾಗಿ ಗಮನ  ಸೆಳೆದವು. ಬೆಳ್ಳಿ, ಬಂಗಾರದ ವಸ್ತುಗಳನ್ನು ಸಂಗ್ರಹಿಸಿ, ಅಕ್ಕಸಾಲಿಗರಿಂದ ಪರೀಕ್ಷಿಸಿ ದೇವಾಲಯದ ಖಜಾನೆಗೆ ಸಲ್ಲಿಸಲಾಯಿತು.

ಎರಡು ತಿಂಗಳ ಹಿಂದೆ ಗ್ರಾಪಂ ಚುನಾವಣೆ ನಡೆದ ಈ ಹಿನ್ನೆಲೆಯಲ್ಲಿ ಹಲವಾರು ಭಕ್ತಾದಿಗಳು ದೇವಾಲಯದ ಹುಂಡಿಗೆ ಹಣದ ಜತೆಗೆ ಹರಕೆ ರೂಪದಲ್ಲಿ ಅರ್ಜಿ ಹಾಕಿದ್ದರು. ಭರಮಸಾಗರ, ಮಲ್ಲೇಬೋರನಹಟ್ಟಿ, ಚಿಕ್ಕಮ್ಮನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಪಂ ಅಭ್ಯರ್ಥಿಗಳು ಚುನಾವಣೆ ಕರಪತ್ರ ಹುಂಡಿಗೆ ಹಾಕಿ ಗೆಲ್ಲಿಸುವಂತೆ ದೇವರಲ್ಲಿ ವಿನಂತಿಸಿದ್ದಾರೆ.

ಆಂಧ್ರ ಮೂಲದ ವ್ಯಕ್ತಿಯೊಬ್ಬರು ತಮ್ಮ ಮಗ ಸಾಗರ್‌ ತಿಪ್ಪೇಶನ ದಯೆಯಿಂದ ಎಸ್ಸೆಸ್ಸೆಲ್ಸಿ ಪಾಸಾಗಿದ್ದಾನೆ. ಆದ್ದರಿಂದ 5001 ರೂ.ಗಳನ್ನು ದೇವರಿಗೆ ಅರ್ಪಿಸುತ್ತಿದ್ದೇನೆ. ಮುಂದೆ ಅವನ ವಿದ್ಯಾಭ್ಯಾಸ ಉತ್ತಮವಾಗಿರಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ.

ಪತ್ರಗಳು, ಕರಪತ್ರಗಳೂ ಬೇಡಿಕೆಗಳು ಹುಂಡಿಯಲ್ಲಿದ್ದವು. ವರ್ಷದಲ್ಲಿ ನಾಲ್ಕು ಬಾರಿ ಹುಂಡಿ ಹಣ ಎಣಿಸಲಾಗುತ್ತಿದೆ. ತಳಕು, ನಾಯಕನಹಟ್ಟಿ, ಚಳ್ಳಕೆರೆ ಸೇರಿದಂತೆ 80ಕ್ಕೂ ಹೆಚ್ಚು ಕಂದಾಯ ಇಲಾಖೆ ಸಿಬ್ಬಂದಿ, ಕೆನರಾ ಬ್ಯಾಂಕ್‌ ಸಿಬ್ಬಂದಿ ಎಣಿಕಾ ಕಾರ್ಯದಲ್ಲಿ ಪಾಲೊಂಡಿದ್ದರು. ತಹಶೀಲ್ದಾರ್‌ ಎಂ.ಮಲ್ಲಿಕಾರ್ಜುನ, ದೇವಾಲಯದ ಇಒ ಮಂಜುನಾಥ ಬಿ. ವಾಲಿ, ಉಪ ತಹಶೀಲ್ದಾರ್‌ ಟಿ.ಜಗದೀಶ್‌, ಕೆನರಾ ಬ್ಯಾಂಕ್‌ ಮ್ಯಾನೇಜರ್‌ ಸೂರ್ಯದೇವ ನಾಯಕ್‌, ರಾಜಸ್ವ ನಿರೀಕ್ಷಕ ಚೇತನ್‌, ಗ್ರಾಮ ಲೆಕ್ಕಿಗ ಉಮಾ, ದೇವಾಲಯದ ಸಿಬ್ಬಂದಿ ಸತೀಶ್‌, ವಿರೂಪಾಕ್ಷಪ್ಪ ಮತ್ತಿತರರಿದ್ದರು. !

ಟಾಪ್ ನ್ಯೂಸ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMW ಕಾರು, 4BHK ಫ್ಲಾಟ್ ಗಿಫ್ಟ್

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi: Kannadigas’ tax money wasted to please fake Gandhis: Jagadish Shettar

Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್

7

Manipal: ಅಪಘಾತ ತಡೆಯಲು ಹೀಗೆ ಮಾಡಿ!

6

ಒಲವಿನ ಊಟಕ್ಕೆ ಅಕ್ಕಂದಿರು ಸಿದ್ಧ!

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.