ಬೇರು ಕೊಳೆ ರೋಗ ಬಾರದಂತೆ ಜಾಗ್ರತೆ ವಹಿಸಿ
Team Udayavani, Nov 6, 2021, 3:46 PM IST
ಕೊಂಡ್ಲಹಳ್ಳಿ: ಯಾವ ಭೂಮಿ ಫಲವತ್ತತೆಯಿಲ್ಲವೋ ಅಲ್ಲಿನ ರೇಷ್ಮೆ ಬೆಳೆಯಲ್ಲಿ ಬೇರು ಕೊಳೆ ರೋಗ ಬರುತ್ತದೆ ಎಂದು ಮೈಸೂರು ಕೇಂದ್ರ ರೇಷ್ಮೆ ಮಂಡಳಿಯ ರೇಷ್ಮೆ ವಿಜ್ಞಾನಿ ಡಾ| ಅರುಣ್‌ಕುಮಾರ್ ತಿಳಿಸಿದರು.
ಬಿಳಿನೀರು ಚಿಲುಮೆ ದೇವಸ್ಥಾನದ ಸಮೀಪದ ಬಿ.ಟಿ. ಹನುಮಾರೆಡ್ಡಿ ತೋಟದಲ್ಲಿ ರೇಷ್ಮೆ ಇಲಾಖೆ ತಾಂತ್ರಿಕ ಸೇವಾ ಕೇಂದ್ರ ಮೊಳಕಾಲ್ಮೂರು ಹಾಗೂ ಕೃಷಿ ಇಲಾಖೆಯ ಆತ್ಮ ಯೋಜನೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭೂಮಿಯಲ್ಲಿ ಸೂಕ್ಷ್ಮಾಣುಜೀವಿಗಳಿದ್ದಾಗ ಫಲವ ತ್ತಾಗಿರುತ್ತದೆ .ಆಗ ಬೆಳೆಯು ಉತ್ತಮವಾಗಿರುತ್ತದೆ. ಮಣ್ಣಿನ ಫಲವತ್ತತೆ ಬಗ್ಗೆ ರೇಷ್ಮೆ ಬೆಳೆಗಾರರು ಹೆಚ್ಚು ನಿಗಾ ವಹಿಸಬೇಕು. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಮಣ್ಣಿಗೆ ಲಘು ಪೋಷಕಾಂಶಗಳು ಅತಿ ಮುಖ್ಯ ಪಾತ್ರ ವಹಿಸುತ್ತವೆ. ಫಲವತ್ತತೆ ಹೆಚ್ಚಿಸಿದಲ್ಲಿ ಶೇ.70-80 ರಷ್ಟು ಇಳುವರಿ ಪಡೆಯಬಹುದು. ಕೌಶಲ್ಯದೊಂದಿಗೆ ಮುಂಜಾಗ್ರತೆಯ ಕ್ರಮಗಳನ್ನು ರೇಷ್ಮೆ ಬೆಳೆಯಲ್ಲಿ ರೈತರು ತಪ್ಪದೇ ಪಾಲಿಸಬೇಕು ಎಂದರು.
ತೋಳಹುಣಸೆ ರೇಷ್ಮೆ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಹರಿಕೃಷ್ಣ ಅವರು ಎಲೆ ತುಕ್ರ ರೋಗದ ಬಗ್ಗೆ ಮಾಹಿತಿ ನೀಡಿದರು. ರೇಷ್ಮೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಬಿ.ಎಲ್. ಕೃಷ್ಣಪ್ಪ, ಸಹಾಯಕ ನಿರ್ದೇಶಕ ಕೆಂಜೋಜಿ ರಾವ್, ಚಿತ್ರದುರ್ಗದ ವಿಜ್ಞಾನಿ ವೈ. ಶ್ರೀನಿವಾಸುಲು, ಗ್ರಾಪಂ ಸದಸ್ಯ ಎಸ್. ಕೆ. ನಿಂಗರಾಜ್, ಮೊಳಕಾಲ್ಮೂರು ತಾಲೂಕು ರೇಷ್ಮೆ ಸಹಾಯಕ ನಿರ್ದೇಶಕ ಎಸ್.ಕೆ. ಪರಮೇಶ್, ಇಲಾಖೆ ಸಿಬ್ಬಂದಿ ಮಹೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.