ಎರಡು ಸಾವಿರ ರೂ. ನೋಟು ಮುದ್ರಣ: ಸೆರೆ
Team Udayavani, Oct 12, 2017, 7:25 AM IST
ಚಿತ್ರದುರ್ಗ: ಎರಡು ಸಾವಿರ ರೂ. ಮುಖಬೆಲೆಯ ನಕಲಿ ನೋಟು ಮುದ್ರಿಸುತ್ತಿದ್ದ ಜಾಲವನ್ನು ಇಲ್ಲಿನ ಕೋಟೆ ಠಾಣೆ ಪೊಲೀಸರು ಬುಧವಾರ ಬೇಧಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ನಗರದ “ತಾಜ್ ಮೊಬೈಲ್ ಸೆಂಟರ್‌ನಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗುತ್ತಿದೆ’ ಎಂಬ ಮಾಹಿತಿ ಮೇರೆಗೆ ಎಎಸ್‌ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಕೋಟೆ ಠಾಣೆ ಸಿಪಿಐ ಫೈಜುಲ್ಲಾ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಹೊಳಲ್ಕೆರೆಯ ಟಿಪ್ಪು ನಗರದ ಸೈಯ್ಯದ್ ತೌಸಿಫ್ (26), ಚಿತ್ರದುರ್ಗ ವೆಂಕಟೇಶ್ವರ ನಗರದ ಮೊಹಮ್ಮದ್ ಜುಬೇರ್ (20), ಮೊಹಮ್ಮದ್ ಅಫ್ತಾಬ್ (20), ಹೊಳಲ್ಕೆರೆಯ ಮನ್ಸೂರ್ ಅಲಿ (20) ಬಂ ಧಿತ ಆರೋಪಿಗಳು. ಅವರಿಂದ 2 ಸಾವಿರ ರೂ. ಮುಖಬೆಲೆಯ 64 ನೋಟುಗಳು ಹಾಗೂ ನೋಟು ಮುದ್ರಣ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕಲಿ ನೋಟು ಮುದ್ರಿಸುವ ಜಾಲದ ದಾವಣಗೆರೆ ಮೂಲದ ಮಹಮ್ಮದ್ ಯೂಸೂಫ್, ಬೆಂಗಳೂರು ಮೂಲದ ಪ್ರಕಾಶ್ ಮತ್ತು ಮಹೇಶ್ ತಲೆಮರೆಸಿಕೊಂಡಿದ್ದಾರೆ.