ಆದರ್ಶ ಬದುಕು ಚಿರಸ್ಥಾಯಿ


Team Udayavani, Aug 16, 2021, 3:07 PM IST

Udayavani Chithradurga Hosadurga News

ಹೊಸದುರ್ಗ: ಮಾನವ ಹುಟ್ಟಿದ ಮೇಲೆ ಸಾಯುವುದು ಖಚಿತ. ಸಾವಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆದರ್ಶ ಜೀವನದ ಮೂಲಕ ಸತ್ತ ಮೇಲೂ ಬದುಕಲು ಸಾಧ್ಯವಿದೆ. ಇದನ್ನು ಅರಿಯದ ಕೆಲವರು ತಮಗೆ ಸಾವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿಯ ತರಳಬಾಳು ಜಗದ್ಗುರು ಶಾಖಾ ಮಠದಿಂದ ಆಯೋಜಿಸಿರುವ “ಮತ್ತೆ ಕಲ್ಯಾಣ’ ಕಾರ್ಯಕ್ರಮದ 15ನೇ ದಿನದ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಸತ್ಯವನ್ನು ಸುಳ್ಳೆಂದು, ಸುಳ್ಳನ್ನು ಸತ್ಯವೆಂದು ಬಿಂಬಿಸುವ ಹರಸಾಹಸ ಮಾಡುವವರೂ ಇದ್ದಾರೆ. ಹೊನ್ನು, ಹೆಣ್ಣು, ಮಣ್ಣುಗಳನ್ನು ಬಯಸಿ ಏನೆಲ್ಲ ಅನಾಹುತ ಮಾಡಿಕೊಳ್ಳುತ್ತಾರೆ.

ಇಂಥವರನ್ನು ಕಂಡು ಉರಿಲಿಂಗ ಪೆದ್ದಿಗಳು “ಅಯ್ಯೋ ಅಯ್ಯೋ ಕೆಡದಿರಿ’ ಎಂದು ಎಚ್ಚರಿಸುವುದರ ಜೊತೆಗೆ ಕಾಯಕದಿಂದ ಬಂದ ಆದಾಯವನ್ನು ಗುರು-ಲಿಂಗ-ದಾಸೋಹಕ್ಕೆ ಅರ್ಪಣೆ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದಬ ಸಂದೇಶ ಸಾರಿದ್ದಾರೆ ಎಂದರು.

ಉರಿಲಿಂಗ ಪೆದ್ದಿ ಕಳ್ಳತನ ಮಾಡಿ, ಕಟ್ಟಿಗೆ ಕಡಿದು ಜೀವನ ನಡೆಸುತ್ತಿದ್ದ ಕೆಳ ವರ್ಗದ ವ್ಯಕ್ತಿ. ಪೆದ್ದಿ ಎಂದರೆ ಮೂರ್ಖ. ಪತ್ನಿ ಕಾಳವ್ವೆ. ಒಮ್ಮೆ ಶ್ರೀಮಂತನೊಬ್ಬನ ಮನೆಗೆ ಕಳ್ಳತನಕ್ಕೆ ಹೋದಾಗ ಅಲ್ಲಿ ಉರಿಲಿಂಗದೇವರು ಲಿಂಗದೀಕ್ಷೆ ನೀಡುತ್ತಿರುವುದನ್ನು ಕಾಣುತ್ತಾನೆ. ಇದನ್ನು ಕಂಡ ಪೆದ್ದಿಯ ಮನಃಪರಿವರ್ತನೆಯಾಗಿ ತನಗೂ ದೀಕ್ಷೆ ಕರುಣಿಸುವಂತೆ ಪ್ರಾರ್ಥಿಸುತ್ತಾನೆ.

ಅವನ ಕಾಟ ತಪ್ಪಿಸಿಕೊಳ್ಳಲು ಒಂದು ಕಲ್ಲನ್ನು ಎಸೆದು ತೆಗೆದುಕೊಂಡು ಹೋಗು ಎನ್ನುತ್ತಾರೆ. ಪೆದ್ದಿ ಅದನ್ನೇ ಲಿಂಗವೆಂದು ಭಾವಿಸಿ ನಿಷ್ಠೆಯಿಂದ ಪೂಜಿಸುತ್ತಾನೆ. ಇದನ್ನು ಗಮನಿಸಿದ ಉರಿಲಿಂಗದೇವರು ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡು ಸಂಸ್ಕೃತ, ವೇದಗಳನ್ನು ಕಲಿಸುವುದಲ್ಲದೆ ಕೊನೆಗೆ ತಮ್ಮ ನಂತರ ಮಠಕ್ಕೆ ಪೀಠಾಧಿ ಕಾರಿಗಳನ್ನಾಗಿ ನೇಮಿಸುತ್ತಾರೆ.

ತಳ ಸಮುದಾಯದ ಕಳ್ಳನೊಬ್ಬ ಸಂಸ್ಕಾರದಿಂದ ಬದಲಾಗಿ ಪೀಠಾ ಧಿಪತಿಯಾದುದು ಬೆರಗುಗೊಳಿಸುವ ಸಂಗತಿ ಎಂದು ತಿಳಿಸಿದರು. ಮಹದೇವ ಬಣಕಾರರು “ಉರಿಲಿಂಗ ಪೆದ್ದಿ’ ಎನ್ನುವ ನಾಟಕದಲ್ಲಿ ಉರಿಲಿಂಗ ಪೆದ್ದಿಯ ಬಗ್ಗೆ ಸಮಗ್ರವಾಗಿ ರೋಚಕವಾಗಿ ಚಿತ್ರಿಸಿದ್ದಾರೆ. ಈ ನಾಟಕವನ್ನು ಶಿವಕುಮಾರ ಕಲಾಸಂಘ, ಶಿವಸಂಚಾರ ನೂರಾರು ಯಶಸ್ವಿ ಪ್ರಯೋಗಗಳನ್ನು ಪ್ರದರ್ಶಿಸಿದೆ.

ಅಲ್ಲದೆ ಇದು ವಿಶ್ವವಿದ್ಯಾಲಯದ ಪಠ್ಯಪುಸ್ತಕವಾಗಿಯೂ ಇತ್ತು. ಇಂಥ ಶರಣನ ಬಗ್ಗೆ ಜನ ಹೆಚ್ಚು ಹೆಚ್ಚು ತಿಳಿದುಕೊಂಡು ಅವರ ತತ್ವ ಸಿದ್ಧಾಂತಗಳನ್ನು ಆಚರಣೆಗೆ ತರುವಂತಾಗಲಿ ಎಂದು ಆಶಿಸಿದರು. ಉಪನ್ಯಾಸ ಮಾಲಿಕೆಯಲ್ಲಿ “ಉರಿಲಿಂಗಪೆದ್ದಿ’ ವಿಷಯದ ಕುರಿತಂತೆ ಲೇಖಕಿ ಬೀರೂರಿನ ಗೌರಿ ಪ್ರಸನ್ನ ಮಾತನಾಡಿ, ಮಾನವ ಸಮಾಜ ವೈವಿಧ್ಯತೆಯಿಂದ ಕೂಡಿದೆ.

ಯಾವುದೇ ವ್ಯಕ್ತಿಯನ್ನು ಹುಟ್ಟಿನಿಂದ ಕನಿಷ್ಠ, ಶ್ರೇಷ್ಠ ಎಂದು ಹೇಳಲಾಗದು. ಒಬ್ಬ ಕಳ್ಳ ಮಹಾನ್‌ ಶಿವಶರಣನೂ ಆಗಬಹುದು ಎನ್ನುವುದಕ್ಕೆ ಉದಾಹರಣೆ 12ನೇ ಶತಮಾನದಲ್ಲಿ ಕಲ್ಯಾಣದಲ್ಲಿದ್ದ ಉರಿಲಿಂಗ ಪೆದ್ದಿಯ ಬದುಕು-ಬರಹಗಳೇ ಸಾಕ್ಷಿ ಎಂದರು.

ಉರಿಲಿಂಗ ಪೆದ್ದಿಯ ಮೂಲ ಹೆಸರು ಪೆದ್ದಣ್ಣ. ಆಂಧ್ರಪ್ರದೇಶದಿಂದ ಬಂದವ. ಕಳ್ಳತನವೇ ಇವನ ಕೆಲಸವಾಗಿತ್ತು. ಇವರ 363 ವಚನಗಳು ಲಭ್ಯವಿವೆ. ಒಬ್ಬ ಕಳ್ಳ ಶರಣನಾಗಿ, ಜ್ಞಾನಿಯಾಗಿ, ವಚನಕಾರನಾಗಿ, ಗುರುವಾದದ್ದು ಜಗತ್ತಿನಲ್ಲಿ ಎಂದೂ ಕೇಳರಿಯದ ಸಂಗತಿ ಎಂದು ಹೇಳಿದರು.

ಬೆಂಗಳೂರಿನ ಮೈಕೋ ಮಂಜು ಸ್ವಾಗತಿಸಿದರು. ಶಿವಸಂಚಾರದ ಕೆ. ಜ್ಯೋತಿ, ಕೆ ದಾûಾಯಣಿ, ಎಚ್‌.ಎಸ್‌. ನಾಗರಾಜ್‌ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ಹಾಗೂ ಸಾಣೇಹಳ್ಳಿಯ ಭರತನಾಟ್ಯ ಶಾಲೆಯ ಸುಪ್ರಭೆ ಡಿ.ಎಸ್‌ ಹಾಗೂ ಮುಕ್ತ ಡಿ.ಜೆ. ವಚನ ನೃತ್ಯ ಪ್ರದರ್ಶಿಸಿದರು.

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-chitradurga

Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್‌

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.