![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Sep 7, 2021, 4:11 PM IST
ಚಿತ್ರದುರ್ಗ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಸುಮಾರು 19 ಯೋಜನೆಗಳನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇನ್ನು ಎರಡು ವಾರಗಳಲ್ಲಿ ಅನುಮೋದನೆ ಸಿಗಬಹುದು ಎಂದು ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ತಿಳಿಸಿದರು.
ನಗರದ ವೀರಶೈವ ಸಮಾಜದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,250ಕೋಟಿರೂ.ಮೊತ್ತದಯೋಜನೆಗಳನ್ನು ರೂಪಿಸಿದ್ದು, ಇದಕ್ಕೆ ಆರ್ಥಿಕ ಇಲಾಖೆಯ ಅನುಮೋದನೆ ನೀಡಬೇಕಿದೆ ಎಂದರು.
ನಿಗಮಕ್ಕೆಬಜೆಟ್‌ನಲ್ಲಿ500ಕೋಟಿರೂ.ಘೋಷಣೆ ಮಾಡಲಾಗಿದ್ದು, ಈಗಾಗಲೇ 100 ಕೋಟಿ ರೂ. ಬಿಡುಗಡೆಯಾಗಿದೆ. ನಮ್ಮ ಎಲ್ಲಾ ಯೋಜನೆಗಳಿಗೆ ಅನುಮೋದನೆ ದೊರೆತರೆ ಇನ್ನೂ 150 ಕೋಟಿ ರೂ. ಬಿಡುಗಡೆ ಆಗಬೇಕು. ವೀರಶೈವ ಲಿಂಗಾಯತ ಅಭಿವೈದ್ಧಿ ನಿಗಮ ಆರಂಭವಾಗಿ ಹತ್ತು ತಿಂಗಳಾಗಿದೆ. ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವಲ್ಲೇ 6 ತಿಂಗಳು ಕಳೆಯಿತು. ಕಚೇರಿ ಪಡೆಯಲು ಮೂರು ತಿಂಗಳು ಓಡಾಟ ಮಾಡಿದ್ದೇವೆ. ಈಗ ಬೆಂಗಳೂರಿನ ವಿಶ್ವೇಶ್ವರಯ್ಯ ಮಿನಿ ಟವರ್‌ನಲ್ಲಿ ನಿಗಮದ ಕಚೇರಿ ಸಿದ್ಧವಾಗುತ್ತಿದ್ದು, ಮುಂದಿನ 20 ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕರೆಸಿ ಉದ್ಘಾಟಿಸುವ ಯೋಜನೆ ಇದೆ ಎಂದರು.
ಬದುಕು, ಬೆಳಕು, ವಿದೇಶ ವಿದ್ಯಾಭ್ಯಾಸ, ಪರಿಪೂರ್ಣದೆಡೆಗೆ, ವಿಭೂತಿ ನಿರ್ಮಾಣ ಘಟಕ, ಹಡಪದ ಕುಟೀರ, ಗಂಗಾ ಕಲ್ಯಾಣ ಯೋಜನೆ ಮಾದರಿಯಲ್ಲಿ ಜೀವಜಲ ಯೋಜನೆ ರೂಪಿಸಲಾಗಿದ.ಎ ಇದರಲ್ಲಿ ತೆರೆದ ಬಾವಿ ತೋಡಲು ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉತ್ತಮ ಕೇಂದ್ರಕ್ಕೆ ಕಳಿಸುವುದು, ಸೇನೆ, ಪೊಲೀಸ್ ಕೆಲಸಕ್ಕೆ ಸೇರುವವರನ್ನು ಪ್ರೋತ್ಸಾಹಿಸಲು, ವಿದ್ಯಾರ್ಥಿನಿಲಯಗಳಿಗಾಗಿ ಶರಣ ಸೇನೆ ಹಾಗೂ ಅರಿವಿನ ದಾಸೋಹ ಯೋಜನೆಗಳಿವೆ. ಎಲ್ಲ ಹಿಂದೂಗಳು ಬಳಕೆ ಮಾಡುವ ವಿಭೂತಿ ತಯಾರಿಸುವ ಉದ್ದೇಶದಿಂದ ವಿಭೂತಿ ತಯಾರಿ ಘಟಕಕ್ಕೆ ಅವಕಾಶವಿದೆ. ಇದರಲ್ಲಿಕೆಲ ಯೋಜನೆಗಳಿಗೆ ಸಾಲ, ಕೆಲವಕ್ಕೆ ಸಬ್ಸಿàಡಿ ದೊರೆಯಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನಕುಮಾರ್, ವೀರಶೈವ ಸಮಾಜದ ಅಧ್ಯಕ್ಷ ಎಲ್.ಬಿ. ರಾಜಶೇಖರಪ್ಪ, ವೀರಶೈವ ಸಮಾಜದ ಮುಖಂಡರಾದ ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ಕೆ.ಎನ್. ವಿಶ್ವನಾಥಯ್ಯ, ಶರಣಯ್ಯ, ಮಹಡಿ ಶಿವಮೂರ್ತಿ, ನ್ಯಾಯವಾದಿ ಉಮೇಶ್, ಮೋûಾ ರುದ್ರಸ್ವಾಮಿ, ಜಿತೇಂದ್ರ ಹುಲಿಕುಂಟೆ, ಮರುಳಾರಾಧ್ಯ ಮತ್ತಿತರರು ಇದ್ದರು.
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ
Chitradurga: ನಿಧಿಯ ಆಸೆಗೆ ಜ್ಯೋತಿಷಿ ಮಾತು ಕೇಳಿ ನರಬಲಿ: ಅಮಾಯಕನ ಕೊಲೆ!
Stampede: ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಾಸಾಧು ಮೃತ್ಯು!
BJP ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ ವೆಂಕಟೇಶ್
You seem to have an Ad Blocker on.
To continue reading, please turn it off or whitelist Udayavani.