ಬತ್ತಿದ ಕೊಳವೆ ಬಾವಿಗಳಲ್ಲಿ ನೀರು!
Team Udayavani, Jul 27, 2020, 11:10 AM IST
ಚಳ್ಳಕೆರೆ: ತಾಲೂಕಿನ ತಿಮ್ಮನಹಳ್ಳಿ ಗ್ರಾಮದ ನಿಷ್ಕ್ರಿಯ ಕೊಳವೆಬಾವಿಯಲ್ಲಿ ನೀರು ಹರಿಯುತ್ತಿರುವುದು.
ಚಳ್ಳಕೆರೆ: ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬತ್ತಿ ಹೋಗಿದ್ದ ಕೊಳವೆಬಾವಿಗಳಿಗೆ ಜೀವ ಕಳೆ ಬಂದಿದೆ. ತಳಕು ಹೋಬಳಿಯ ತಿಮ್ಮನಹಳ್ಳಿ, ಗೌರಸಮುದ್ರ, ಹನುಮಂತನಹಳ್ಳಿ ಮೊದಲಾದ ಕಡೆಗಳಲ್ಲಿ ಕೊಳವೆಬಾವಿಗಳನ್ನು ಕೊರೆಸಿದರೂ ನೀರು ಸಿಗದೆ ಜನರು ಕಂಗಾಲಾಗಿದ್ದರು. ಈಗ ಉತ್ತಮ ಮಳೆಯ ಹಿನ್ನೆಲೆಯಲ್ಲಿ ನೀರು ಕಾಣದಂತಹ ಕೊಳವೆಬಾವಿಗಳಲ್ಲಿ ಸಹ ನೀರು ಕೇಸಿಂಗ್ ಪೈಪ್ ಮೂಲಕ ಉಕ್ಕಿ ಬರುತ್ತಿದೆ. ತಾಪಂ ಸದಸ್ಯ ಈ. ರಾಮರೆಡ್ಡಿ ಈ ಬಗ್ಗೆ ಮಾಹಿತಿ ನೀಡಿ, ಮಳೆ ಹಿನ್ನೆಲೆಯಲ್ಲಿ ಈ ಭಾಗದ ಬಹುತೇಕ ಕೊಳವೆಬಾವಿಗಳು ರೀಚಾರ್ಜ್ ಆಗಿವೆ. ಬಹಳ ವರ್ಷಗಳ ನಂತರ ಗ್ರಾಮೀಣ
ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ದೊರೆತಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಾಧ್ಯಕ್ಷರಾಗಿ ಬಿವೈವಿ ಅವಧಿ ವಿಸ್ತರಣೆ ಹೇಳಲು ಆಗಲ್ಲ: ಯದುವೀರ ಒಡೆಯರ್
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Chitradurga: ನಾವು ದರ್ಶನ್‌ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್