Chitradurga: ನಾವು ದರ್ಶನ್ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ
Team Udayavani, Jan 16, 2025, 12:16 PM IST
ಚಿತ್ರದುರ್ಗ: ನಟ ದರ್ಶನ್ (Actor Darshan) ಅವರಿಂದ ನಾವು ಹಣ ಪಡೆದಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬರೆಯುತ್ತಿದ್ದಾರೆ. ಇದರಿಂದ ನಮಗೆ ನೋವಾಗಿದೆ. ನಾವು ಯಾವುದೇ ಹಣ ಪಡೆದಿಲ್ಲ ಎಂದು ರೇಣುಕಾಸ್ವಾಮಿ ತಂದೆ ತಂದೆ ಶಿವನಗೌಡ್ರು ಹೇಳಿದರು.
ಚಿತ್ರದುರ್ಗ ನಗರದ ವಿಆರ್ಎಸ್ ಬಡಾವಣೆಯ ನಿವಾಸದಲ್ಲಿ ಗುರುವಾರ (ಜ.16) ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಹಲವು ದಿನಗಳಿಂದ ಫೇಸ್ಬುಕ್ನಲ್ಲಿ ಕೆಲವು ವಿಚಾರಗಳು ಬರುತ್ತಿವೆ. ನಾವು ದರ್ಶನ್ ಬಳಿ ಹೋಗಿದ್ದೇವೆ, ಅವರು ನಮ್ಮ ಬಳಿ ಬಂದಿದ್ದಾರೆ, ನಾವು ಅದ್ಯಾವುದೋ ಶೆಡ್ ಗೆ ಹೋಗಿದ್ದೆವು, ಅವ್ರೇನೋ ಹಣ ಕೊಟ್ಟಿದ್ದಾರೆ, ನಾವೇನೋ ಪಡೆದು ಬರುತ್ತೇವೆಂದು ಹೇಳುತ್ತಿದ್ದಾರೆ. ನಾವು ಅದರ ಬಗ್ಗೆ ಲಕ್ಷ ಕೊಡುತ್ತಿಲ್ಲ, ಬಿಟ್ಟುಬಿಟ್ಟಿದ್ದೇವೆ. ನಮಗೆ ಬಹಳಷ್ಟು ಜನ ಫೋನ್ ಮಾಡಿ ಕೇಳುತ್ತಿದ್ದಾರೆ. ನಾವು ಯಾರೂ ಅವರನ್ನು ಭೇಟಿ ಮಾಡಿಲ್ಲ, ಅವರು ಯಾರೂ ನಮ್ಮನ್ನು ಭೇಟಿ ಮಾಡಲು ಬಂದಿಲ್ಲ ಎಂದರು.
ನಾವು ಯಾರ ಹತ್ತಿರವೂ ಹತ್ತು ಪೈಸೆ ಹಣ ಇಸ್ಕೊಂಡಿಲ್ಲ. ಅದೇನು ಕಾರು ಬುಕ್ ಮಾಡಿದ್ದೇವೆ ಎಂದು ಹಾಕಿದ್ದಾರೆ. ನಮ್ಮ ಬಳಿ ಹಳೇ ಸ್ಕೂಟರ್ ರಿಪೇರಿ ಮಾಡಿಸಲು ಆಗಿಲ್ಲ. ಹೀಗೆ ಅದನ್ನು ಫೇಸ್ಬುಕ್ನಲ್ಲಿ ಹಾಕಿ ಅದು ನಿಜ ಎಂಬಂತಾಗಿದೆ. ಫೇಸ್ಬುಕ್ ಅವಾಂತರ ಸೃಷ್ಠಿಯಿಂದ ನೋವು ತಂದಿದೆ. ಕರ್ನಾಟಕದ ಜನತೆಗೆ ನಾವು ಈ ಮೂಲಕ ಸ್ಪಷ್ಟನೆ ನೀಡುತ್ತಿದ್ದೇವೆ ಎಂದರು.
ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದನ್ನು ನಾವು ಸ್ವಾಗತಿಸುತ್ತೇವೆ. ಸರ್ಕಾರಕ್ಕೆ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ. ಸೊಸೆಗೆ ಸರ್ಕಾರಿ ನೌಕರಿ ಕೇಳಿದ್ದೆವು. ಆದರೆ ಸರ್ಕಾರ ಅದನ್ನು ಕೊಡಲು ಆಗಲ್ಲ ಎಂದು ಹಿಂಬರಹ ಕೊಟ್ಟಿದೆ. ಸರ್ಕಾರ ನೀಡಿದ ಹಿಂಬರಹದಿಂದ ನಮಗೆ ದೊಡ್ಡ ಆಘಾತವಾಗಿದೆ. ಮುಂದೆ ನನ್ನ ಸೊಸೆ, ಮೊಮ್ಮಗು ಎಲ್ಲಿ ಬೀದಿ ಪಾಲಾಗುತ್ತಾನೆ ಎಂಬ ಆತಂಕವಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಎರಡು ದಿನದ ಮಗುವನ್ನು ಕಾಫಿ ತೋಟದಲ್ಲಿ ಬಿಟ್ಟುಹೋದ ತಾಯಿ
Bidar: ಎಟಿಎಂಗೆ ಹಣ ಜಮೆ ಮಾಡುತ್ತಿದ್ದವರ ಮೇಲೆ ಗುಂಡಿನ ದಾಳಿ ನಡಿಸಿ 93 ಲಕ್ಷ ರೂ ದರೋಡೆ
Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು
Congress: ಪಕ್ಷಕ್ಕೆ ಪೂರ್ಣ ಪ್ರಮಾಣ ಅಧ್ಯಕ್ಷರು ಬೇಕು: ಸಚಿವ ಸತೀಶ್ ಜಾರಕಿಹೊಳಿ
Proposal: ಮಹಾನಗರ ಪಾಲಿಕೆ ಆಗಿ ಉಡುಪಿ ನಗರಸಭೆ: ಪ್ರಸ್ತಾವನೆಗೆ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.