ಯಾರಾಗಲಿದಾರೆ ಕೋಟೆನಾಡಿನ ಜಿಪಂ ಅಧಿಪತಿ ?
Team Udayavani, Mar 22, 2019, 8:39 AM IST
ಚಿತ್ರದುರ್ಗ: ಪದಚ್ಯುತಿಯಿಂದ ತೆರವಾಗಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಗಾದಿಗೆ ಯಾರನ್ನು ಕೂರಿಸಬೇಕು ಎನ್ನುವುದೀಗ ಕಾಂಗ್ರೆಸ್ ವರಿಷ್ಠರಿಗೆ ಕಂಗಟ್ಟಾಗಿದೆ. ವಿಶಾಲಾಕ್ಷಿ ನಟರಾಜ್, ಶಶಿಕಲಾ ಸುರೇಶ್ ಬಾಬು, ಕೌಶಲ್ಯ ತಿಪ್ಪೇಸ್ವಾಮಿ ಈ ಮೂವರ ಆಕಾಂಕ್ಷಿಗಳ ಜತೆಗೆ ಸದಸ್ಯೆ ಚಂದ್ರಿಕಾ ಶ್ರೀನಿವಾಸ್ ದಿಢೀರ್ ಆಗಮಿಸಿ ಅಧ್ಯಕ್ಷ ಸ್ಥಾನ ಬೇಕೆಂದು ಪಟ್ಟು ಹಿಡಿದಿದ್ದು ಕಾಂಗ್ರೆಸ್ ವರಿಷ್ಠರಿಗೆ
ನುಂಗಲಾರದ ತುತ್ತಾಗಿದೆ.
ಜಿಪಂ ವಿಶೇಷ ಸಾಮಾನ್ಯ ಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಅಂಗೀಕಾರಗೊಂಡು ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಪದಚ್ಯುತಗೊಳಿಸಿದ ನಂತರ ತೆರವಾಗಿದ್ದ ಜಿಪಂ ಅಧ್ಯಕ್ಷ ಗಾದಿಗೆ ಮಾ. 23 ರಂದು ಚುನಾವಣೆ ನಡೆಯಲಿದ್ದು ಎಲ್ಲರ ಚಿತ್ತ ಜಿಪಂನತ್ತ ನೆಟ್ಟಿದೆ. ಜಿಪಂ ಒಟ್ಟು 37 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ 23 ಸ್ಥಾನ(ಉಚ್ಚಾಟಿತ ಸೌಭಾಗ್ಯ ಹೊರತು ಪಡಿಸಿದರೆ 22 ಸ್ಥಾನ) ಬಿಜೆಪಿ 10, ಜೆಡಿಎಸ್ 2, ಪಕ್ಷೇತರರು 2 ಸ್ಥಾನ ಬಲಾಬಲ ಹೊಂದಿವೆ. 2016ರ ಮೇ 4ರಂದು ಜಿಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಸೌಭಾಗ್ಯ ಬಸವರಾಜನ್ ಅಧ್ಯಕ್ಷೆಯಾಗಿ ಆಯ್ಕೆಯಾದರು.
ಒಡಂಬಡಿಕೆ ಪ್ರಕಾರ ಐದು ವರ್ಷದ ಆಡಳಿತಾವಧಿಯಲ್ಲಿ ಪಕ್ಷದ ನಾಲ್ಕು ಜನ ಮಹಿಳೆಯರಿಗೆ ತಲಾ 15 ತಿಂಗಳಂತೆ ಅಧಿಕಾರ ಹಂಚಿಕೆ ಸೂತ್ರ ಹಣೆದಿದ್ದರು. ಇದರಂತೆ ಸೌಭಾಗ್ಯ ಬಸವರಾಜನ್ ಆವರು 2017, ಸೆಪ್ಟಂಬರ್ ತಿಂಗಳಲ್ಲಿ ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಆದರೆ, ಬದಲಾದ ರಾಜಕೀಯದಲ್ಲಿ ಸೌಭಾಗ್ಯ ಬಸವರಾಜನ್ 15 ತಿಂಗಳ ಆಡಳಿತ ಪೂರ್ವಣಗೊಳಿಸಿದಲ್ಲದೆ ಹೆಚ್ಚುವರಿ 17 ತಿಂಗಳ ಕಾಲ ಆಡಳಿತ ನಡೆಸಿ ಅವಿಶ್ವಾಸಗೊತ್ತುವಳಿಯಲ್ಲಿ ಅಧಿಕಾರ ಕಳೆದುಕೊಂಡರು.
2ನೇ ಅವಧಿಗೆ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಉಪ್ಪಾರ ಸಮುದಾಯ ವಿಶಾಲಾಕ್ಷಿ ನಟರಾಜ್, 3ನೇ 15 ತಿಂಗಳ ಅವ ಗೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಶಿಕಲಾ ಸುರೇಶ್ ಬಾಬು, 4ನೇ ಮತ್ತು ಕೊನೆಯ 15 ತಿಂಗಳ ಅವಧಿಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಶಾಸಕ ಟಿ.ರಘುಮೂರ್ತಿ ಅವರ ಸೊಸೆ ಕೌಶಲ್ಯ ತಿಪ್ಪೇಸ್ವಾಮಿಗೆ ಅಧ್ಯಕ್ಷ ಸ್ಥಾನ ನೀಡಲು ಒಡಂಬಡಿಕೆ ಏರ್ಪಟ್ಟಿತ್ತು.
ಉಳಿದ 27 ತಿಂಗಳ ಆಡಳಿತಾವಧಿಯಲ್ಲಿ ನಾಲ್ಕು ಜನ ಜಿಪಂ ಸದಸ್ಯರಿಗೂ ತಲಾ ಆರು ತಿಂಗಳಂತೆ ಹಂಚಿಕೆ ಮಾಡುವ ತೀರ್ಮಾನವನ್ನು ವರಿಷ್ಠರು ಮುಂದಿಡುತ್ತಿದ್ದಾರೆ.
ಈಗ ಒಡಂಬಡಿಕೆಯಂತೆ 2ನೇಯವರಾಗಿ ಅಧಿಕಾರ ಹಿಡಿಯಬೇಕಿರುವ ಉಪ್ಪಾರ ಸಮುದಾಯದ ವಿಶಾಲಾಕ್ಷಿ ನಟರಾಜ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು. ಆದರೆ, ತೆರೆಮರೆಯ ಆಟದಲ್ಲಿ ಮಾಜಿ ಶಾಸಕರಿಬ್ಬರು ಬೇರೆ ರೀತಿಯಲ್ಲೇ ಆಟಕಟ್ಟಿದ್ದು, ಹಿರಿಯೂರು ಕ್ಷೇತ್ರದ ಶಶಿಕಲಾ ಸುರೇಶ್ ಬಾಬು ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದು ಉಪ್ಪಾರ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇಡೀ ಸಮುದಾಯ ಕಾಂಗ್ರೆಸ್
ವಿರುದ್ಧ ತಿರುಗಿ ಬೀಳುವ ಸಾಧ್ಯತೆ ತಂದೊಡ್ಡಿದೆ.
ಹೊಸ ಬೆಳವಣಿಗೆ ಚಳ್ಳಕೆರೆ ತಾಲೂಕಿನ ಜಾಜೂರು ಜಿಪಂ ಕ್ಷೇತ್ರದ ಚಂದ್ರಿಕಾ ಶ್ರೀನಿವಾಸ್ ಅವರು ಕಾಂಗ್ರೆಸ್, ಜೆಡಿಎಸ್
ಮತ್ತು ಬಿಜೆಪಿ ಸದಸ್ಯರೊಂದಿಗೆ ರೆಸಾರ್ಟ್ ಪ್ರವಾಸ ಕೈಗೊಂಡಾಗ ಇಡೀ ಖರ್ಚು ವೆಚ್ಚ ಭರಿಸಿದ್ದರು ಎನ್ನಲಾಗಿದ್ದು ನನಗೇ ಅಧ್ಯಕ್ಷ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದು ಉಳಿದ ಮೂವರು ಆಕಾಂಕ್ಷಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ವಿಷಯ ಮುಂದಿಟ್ಟು ಚಂದ್ರಿಕಾ ಶ್ರೀನಿವಾಸ್ ಅವರು ಬಂಡಾಯ ಎದ್ದರೂ ಅಚ್ಚರಿ ಪಡಬೇಕಿಲ್ಲ.
ವಿರೋಧಿ ಗುಂಪು ಬಿಜೆಪಿ ಮತ್ತು ಸೌಭಾಗ್ಯ ಬಸವರಾಜನ್ ಅವರ ಗುಂಪಿನಲ್ಲಿ 10 ರಿಂದ 12 ಜಿಪಂ ಸದಸ್ಯರಿದ್ದಾರೆ.
ಯಾರೇ ಅಧ್ಯಕ್ಷರಾರಬೇಕೆನ್ನುವ ಆಕಾಂಕ್ಷಿಗಳು ಅವರೊಂದಿಗೆ 8 ಜನ ಜಿಪಂ ಸದಸ್ಯರನ್ನು ಕರೆತಂದರೆ ಒಮ್ಮತದಿಂದ ಅವರನ್ನ ನಾವು ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎನ್ನುವ ವಿಚಾರ ಎಲ್ಲ ಕಡೆ ಹರಿದಾಡುತ್ತಿದ್ದು ಈ ವಿಷಯ ಕಾಂಗ್ರೆಸ್‌ಗೆ ಮುಟ್ಟಿದೆ.
ಒಂದು ವೇಳೆ ಈ ರೀತಿಯಾದರೆ ಕಾಂಗ್ರೆಸ್ ಸದಸ್ಯರು ಛಿದ್ರವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಒಟ್ಟಾರೆ ಇಡೀ ಬೆಳವಣಿಗೆ ತೆರೆ ಮರೆಯಲ್ಲಿ ನಡೆಯುತ್ತಿದ್ದು, ಯಾವುದೇ ತಿರುವು ಪಡೆಯುವ ಸಾಧ್ಯತೆಯಿದೆ.
ಹರಿಯಬ್ಬೆ ಹೆಂಜಾರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.