![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 11, 2022, 6:22 PM IST
ಚಿತ್ರದುರ್ಗ: ಅಕ್ಷರ ಸಂಸ್ಕೃತಿ ನಾಶವಾಗುವುದಿಲ್ಲ. ಅಕ್ಷರ ಕಲಿತ ಸಾಕ್ಷರ ಸಮಾಜ ರಾಕ್ಷಸ ಸಮಾಜ ಆಗಬಾರದು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ನಡೆದ “ನಿತ್ಯ ಕಲ್ಯಾಣ; ಮನೆ ಮನೆಗೆ ಚಿಂತನ’ ಕಾರ್ಯಕ್ರಮದಲ್ಲಿ ಚಿಂತನೆ ನೀಡಿದ ಅವರು, ಕೇರಳ ಹೊರತುಪಡಿಸಿ ಎಲ್ಲ ರಾಜ್ಯಗಳ ಸರ್ಕಾರಗಳು ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಅವಿರತ ಶ್ರಮಿಸುತ್ತಿವೆ. ಅಕ್ಷರ ಸಮಾಜದ ನಿರ್ಮಾಣವಾಗಬೇಕು.
ಜಗತ್ತಿನ ಯಾವ ಮೂಲೆಯಲ್ಲಿಯೂ ಅಂಧಕಾರ ಇರಬಾರದು. ಮಾನವ ವಿಜ್ಞಾನ ತಂತ್ರಜ್ಞಾನದ ಮೂಲಕ ವಿದ್ಯುತ್ ದ್ದೀಪವನ್ನು ಕಂಡುಹಿಡಿದಿದ್ದಾನೆ. ಮಾನವನ ಆಂತರ್ಯದಲ್ಲಿ ಮತ್ತೂಂದು ಅಂಧಕಾರ ಅಜ್ಞಾನ ಮತ್ತು ಮೂರ್ಖತನ ಇದೆ. ಇದನ್ನು ನಿವಾರಿಸಲು ಜಗತ್ತಿನ ಎಲ್ಲ ದಾರ್ಶನಿಕರು ಪ್ರಯತ್ನ ಮಾಡಿದ್ದಾರೆ ಎಂದರು.
ಸರ್ಕಾರ 12ನೇ ತಾರೀಖು ನುಲಿಯ ಚಂದಯ್ಯನವರ ಜಯಂತಿ ಮಾಡುತ್ತಿರುವುದು ಸಂತಸದ ಸಂಗತಿ. ಎಲ್ಲರೂ ಸಾಕ್ಷರರಾಗಬೇಕು. ಆಧುನಿಕ ಮಾನವ ಗಳಿಕೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾನೆ. ಗಳಿಕೆ ಒಂದು ದಿನ ಕಳೆದುಕೊಳ್ಳುತ್ತೇವೆ. ಸಾಕ್ಷರರು ಅಂಧಕಾರದ ವಿರುದ್ಧ ಹೋರಾಡಬೇಕು. ನಯವಂಚಕ ಸಮಾಜ ನಿರ್ಮಾಣವಾಗಬಾರದು. ವಿದ್ಯಾವಂತ ಬುದ್ಧಿವಂತನಾಗಬೇಕು. ಬುದ್ಧಿವಂತ ಹೃದಯವಂತನಾಗಬೇಕು ಎಂದು ಆಶಿಸಿದರು.
ಹಾವೇರಿ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು ಮಾತನಾಡಿ, ಅಲ್ಲಮಪ್ರಭುಗಳು ಜ್ಞಾನವೇ ರತ್ನ ಎಂದಿದ್ದಾರೆ. ಬಸವಣ್ಣ ಎನ್ನುವುದು ಸಾಕ್ಷರ
ಪ್ರಜ್ಞೆ. ಬಸವಾದಿ ಶರಣರು ಸಾಕ್ಷರದ ಜತೆಗೆ ಸಂಸ್ಕಾರ ಮೂಡಿಸುವ ಕೆಲಸ ಮಾಡಿದರು. ಅಕ್ಷರವಂತರಿಗಿಂತ ಅನುಭಾವವಂತರನ್ನಾಗಿ ಮಾಡಿದರು. ಸಾಕ್ಷರತೆ ಜೊತೆ ಸಂಸ್ಕಾರವೂ ಬೇಕಿದೆ. ಮಾನವೀಯ ಮೌಲ್ಯಗಳು ಇರುವವರು ಸಾಕ್ಷರ ಪ್ರಜ್ಞೆ ಕಲಿಸಿಕೊಡುತ್ತಾರೆ ಎಂದು ತಿಳಿಸಿದರು.
ವಿಮರ್ಶಕಿ, ಪ್ರಾಧ್ಯಾಪಕಿ ಪ್ರೊ| ತಾರಿಣಿ ಶುಭದಾಯಿನಿ ಮಾತನಾಡಿ, ಓದುವ ಬರೆಯುವ ಸಾಮರ್ಥ್ಯಕ್ಕೆ ಸಾಕ್ಷರ ಎನ್ನುತ್ತೇವೆ. ಜ್ಞಾನ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಕೆಲಸ ಮಾಡಬೇಕು. ಸಾಕ್ಷರತೆ ಪರಿಕಲ್ಪನೆ ನೋಡಿದರೆ ಕಾಲದಿಂದ ಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತ ಬಂದಿದೆ. ಸಮಾಜದಿಂದ ವ್ಯಕ್ತಿ, ವ್ಯಕ್ತಿಯಿಂದ ಸಾಕ್ಷರತೆ ವಿಶಾಲವಾಗುತ್ತ ಸಾಗುತ್ತದೆ. ಔಪಚಾರಿಕ ಶಿಕ್ಷಣವನ್ನು ಸ್ವಾನುಭಾವದ ಮೂಲಕ ವಿಸ್ತರಿಸಬಹುದು.
ಕೆಲವು ಸಮುದಾಯಗಳು ಕೌಶಲ ಮತ್ತು ಬುದ್ಧಿಯನ್ನು ಕಲ್ಪಿಸಿಕೊಂಡಿರುತ್ತಾರೆ. ಭಾರತೀಯ ಸಮಾಜ ರೈತಾಪಿ ಸಮಾಜ. ಆ ಸಮಾಜ ಮಳೆ, ಬೆಳೆ, ಕಟಾವು ಇಂತಹ ಲೋಕದ ಮೂಲಕ ಬರುವ ಅರಿವನ್ನು ಮೂಡಿಸಿಕೊಂಡಿರುತ್ತಾರೆ. ಗುರುಕುಲಗಳ ಸಾಂಸ್ಥಿಕರಣ ಆದಂತೆ ಜ್ಞಾನ ಕಡಿಮೆ ಆಗುತ್ತಿದೆಯೇನೊ ಎನ್ನುವ ಭಾವನೆಯಿದೆ. ಸಾಕ್ಷರತೆ ಮೂಲಕ ಅಕಾರ. ಅದರ ಮೂಲಕ ಬೇರೊಬ್ಬರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಯಾವ ಸಾಕ್ಷರತೆ ನಮ್ಮ ಸಮಾಜ ಸರಿಪಡಿಸಬೇಕಿತ್ತೋ ಅದು ಒಡೆತನದ ವಸ್ತುವಾಯಿತು.
ಇದನ್ನು ಹೋಗಲಾಡಿಸಲು ಅಂಬೇಡ್ಕರ್ ಬರಬೇಕಾಯಿತು. ಅಂಬೇಡ್ಕರರು ಸ್ತ್ರೀಯರ ಶಿಕ್ಷಣದ ಬಗ್ಗೆ ಬರೆದರು. ಇಂದು ವಿದ್ಯಾರ್ಥಿಗಳಲ್ಲಿ ವಿವೇಕ ಕಡಿಮೆಯಾಗಿದೆ. ವಿದ್ಯಾರ್ಥಿಗಳಲ್ಲಿ ಸ್ಪಂದನೆ ಬರಬೇಕೆಂದರೆ ಸಾಕ್ಷರತೆ ಪ್ರಜ್ಞೆ ರೂಢಿಸಿಕೊಳ್ಳಬೇಕು. ಅರಿವನ್ನು ಜಾಗ್ರತಗೊಳಿಸುವುದೇ ಸಾಕ್ಷರತೆ ಎಂದರು.
ನಿವೃತ್ತ ತಹಶೀಲ್ದಾರ್ ಕೆ. ಬಾಲಪ್ಪ ಮಾತನಾಡಿದರು. ಕಾರ್ಯಕ್ರಮ ದಾಸೋಹಿ ರಾಜ್ಯ ಕೊರಚ ಮಹಾಸಂಘದ ಅಧ್ಯಕ್ಷ, ನ್ಯಾಯವಾದಿ ಎಚ್.ಎನ್. ರಾಮಚಂದ್ರಪ್ಪ, ನಾಗಪ್ಪ ಹರಪನಹಳ್ಳಿ, ವೈ. ಕುಮಾರ್ ವೇದಿಕೆಯಲ್ಲಿದ್ದರು. ಡಾ| ಬಸವಕುಮಾರ ಸ್ವಾಮಿಗಳು, ಹರಗುರು ಚರಮೂರ್ತಿಗಳು ಭಾಗವಹಿಸಿದ್ದರು.
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ
Chitradurga: ನಿಧಿಯ ಆಸೆಗೆ ಜ್ಯೋತಿಷಿ ಮಾತು ಕೇಳಿ ನರಬಲಿ: ಅಮಾಯಕನ ಕೊಲೆ!
Stampede: ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಾಸಾಧು ಮೃತ್ಯು!
BJP ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ ವೆಂಕಟೇಶ್
You seem to have an Ad Blocker on.
To continue reading, please turn it off or whitelist Udayavani.