ವಾಹನಗಳು ಲಕ್ಷ ಲಕ್ಷ… ಮಾಲಿನ್ಯ ತಪಾಸಣೆ ಕೇಂದ್ರ ಬರೀ ಎರಡು!
Team Udayavani, Sep 14, 2019, 3:09 PM IST
ತಿಪ್ಪೇಸ್ವಾಮಿ ನಾಕಿಕೆರೆ
ಚಿತ್ರದುರ್ಗ: ಜಿಲ್ಲೆಯಲ್ಲಿರುವ ವಾಹನಗಳ ಸಂಖ್ಯೆ ಬರೋಬ್ಬರಿ 3.60 ಲಕ್ಷ. ಆದರೆ, ಇಷ್ಟೂ ವಾಹನಗಳ ಮಾಲಿನ್ಯ ತಪಾಸಣೆಗೆ ಇರುವ ಕೇಂದ್ರಗಳ ಸಂಖ್ಯೆ ಕೇವಲ ಎರಡು.
ಹೊಗೆ ತಪಾಸಣೆ ಅಥವಾ ಮಾಲಿನ್ಯ ತಪಾಸಣೆ ಕುರಿತು ಜಿಲ್ಲೆಯ ವಾಹನ ಸವಾರರು, ಮಾಲೀಕರಲ್ಲಿ ಇರುವ ಗಾಂಭೀರ್ಯತೆಯನ್ನು ಈ ಅಂಕಿ ಅಂಶಗಳು ಎತ್ತಿ ತೋರಿಸುತ್ತವೆ.
ಈ ಹಿಂದೆಯೂ ಪೊಲೀಸರು ಎಮಿಷನ್ ಟೆಸ್ಟ್ ಮಾಡಿಸಿದ ಪ್ರಮಾಣ ಪತ್ರ ಇಲ್ಲದಕ್ಕೆ ದಂಡ ಹಾಕುತ್ತಿದ್ದರು. ಆದರೆ, ಇದು ದೊಡ್ಡ ಮಟ್ಟದ ವಾಹನಗಳಿಗೆ ಮಾತ್ರ ಹೆಚ್ಚು ಪರಿಣಾಮಕಾರಿಯಾಗಿತ್ತು. ಉಳಿದಂತೆ ಅಷ್ಟೇನು ಗಂಭೀರವಾಗಿರಲಿಲ್ಲ ಎನ್ನುವುದು ಕೆಲ ವಾಹನ ಸವಾರರ ಅಭಿಪ್ರಾಯ.
ಈಗ ಕೇಂದ್ರ ಸರ್ಕಾರ ಸಂಚಾರಿ ನಿಯಮಗಳನ್ನು ಬಿಗಿಗೊಳಿಸಿ, ದಂಡದ ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ಏರಿಸಿದ್ದರಿಂದ ಸಹಜವಾಗಿ ವಾಹನ ಸವಾರರು ಎಮಿಷನ್ ಸೆಂಟರ್‌ಗಳ ವಿಳಾಸಗಳನ್ನು ಹುಡುಕಾಡುತ್ತಿದ್ದಾರೆ.
ಸುಮಾರು 16 ಲಕ್ಷ ಜನ ಸಂಖ್ಯೆ, 3,60,343 ವಾಹನಗಳಿವೆ. ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ 5 ತಾಲೂಕು ಕೇಂದ್ರಗಳಿವೆ. ಎಲ್ಲಾ ವಾಹನಗಳು ಪ್ರತಿ 6 ತಿಂಗಳಿಗೊಮ್ಮೆ ತಪಾಸಣೆ ಮಾಡಿಸಬೇಕು. ಹೀಗಿದ್ದರೂ ಇಲ್ಲಿರುವ ತಪಾಸಣಾ ಕೇಂದ್ರಗಳ ಸಂಖ್ಯೆ ಕೇವಲ 2. ಈ ಎರಡು ಕೇಂದ್ರ ಕೂಡಾ ಚಿತ್ರದುರ್ಗ ನಗರದಲ್ಲೇ ಇವೆ. ಉಳಿದ ಐದೂ ತಾಲೂಕು ಕೇಂದ್ರದಲ್ಲಿ ಮಾಲಿನ್ಯ ತಪಾಸಣೆ ಅಷ್ಟಕ್ಕಷ್ಟೇ.
ಸದ್ಯ ಕಾರ್ಯನಿರ್ವಹಿಸುತ್ತಿರುವ ಮಾಲಿನ್ಯ ತಪಾಸಣೆ ಕೇಂದ್ರಗಳು ಸಂಪೂರ್ಣ ಆನ್‌ಲೈನ್ ಆಗಿವೆ. ಹಾಗಾಗಿ ಕೈ ಬರವಣಿಗೆಯ ಪ್ರಮಾಣ ಪತ್ರಗಳನ್ನು ಪೊಲೀಸರು ನಿರಾಕರಿಸುತ್ತಾರೆ. ಈವರೆಗೆ ಈ ಕೇಂದ್ರಗಳ ಬಗ್ಗೆ ಆರ್‌ಟಿಒ ಕಚೇರಿಗೆ ಯಾವುದೇ ದೂರುಗಳು ದಾಖಲಾಗಿಲ್ಲ.
ಕೇಂದ್ರ ಸರ್ಕಾರ ದಂಡದ ಪ್ರಮಾಣ ಹೆಚ್ಚಳ ಮಾಡಿದ್ದರಿಂದ ತಪಾಸಣೆ ಮಾಡುವ ಕೇಂದ್ರಗಳನ್ನು ತೆರೆಯಲು ನಿಧಾನವಾಗಿ ಆಸಕ್ತಿ ತೋರಿಸುತ್ತಿದ್ದಾರೆ. ಈಗಾಗಲೇ ಚಳ್ಳಕೆರೆ ಹಾಗೂ ಹಿರಿಯೂರು ನಗರದಲ್ಲಿ ಕೇಂದ್ರಗಳನ್ನು ತೆರೆಯಲು ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದು, 15 ದಿನಗಳಲ್ಲಿ ಕಾರ್ಯನಿರ್ವಹಿಸಲಿವೆ. ಹೊಸದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ಕೇಂದ್ರಗಳಿಲ್ಲ. ನಿರ್ದಿಷ್ಟವಾಗಿ ತಪಾಸಣೆ ಪ್ರಮಾಣ ಪತ್ರಕ್ಕಾಗಿ ನಾವು ದಂಡ ಹಾಕಿಲ್ಲ ಎನ್ನುತ್ತಾರೆ ಆರ್‌ಟಿಒ ಜಿ.ಎಸ್. ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.