ಮಕ್ಕಳಿಗೆ ಕಡ್ದಾಯ ಲಸಿಕೆ ಹಾಕಿ

ಮಾರಕ ರೋಗ ತಡೆ ಉದ್ದೇಶದಿಂದ ಲಸಿಕೆ: ವಿಶಾಲಾಕ್ಷಿ ನಟರಾಜ್‌

Team Udayavani, Dec 12, 2019, 4:25 PM IST

12-December-21

ಚಿತ್ರದುರ್ಗ: ಜಿಲ್ಲೆಯ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆ ಹಾಕಬೇಕು ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌ ಹೇಳಿದರು.

ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಬುಧವಾರ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಲಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಧನುರ್ವಾಯು, ಗಂಟಲು ಮಾರಿ ಹಾಗೂ ನಾಯಿಕೆಮ್ಮು ತಡೆಗಟ್ಟುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಶಾಲಾ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಎಲ್ಲಾ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾಧಿಕಾರಿ ಆರ್‌. ವಿನೋತ್‌ ಪ್ರಿಯಾ ಮಾತನಾಡಿ, ಡಿ.11 ರಿಂದ 31 ರವರೆಗೆ ಲಸಿಕಾ ಅಭಿಯಾನ ನಡೆಯಲಿದೆ. 5 ರಿಂದ 6 ವರ್ಷದ 38,785 ಮಕ್ಕಳಿಗೆ ಡಿಪಿಟಿ ಬೂಸ್ಟರ್‌ ಲಸಿಕೆ, 7 ರಿಂದ 16 ವರ್ಷದ 2,29,204 ಮಕ್ಕಳಿಗೆ ಟಿ.ಡಿ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಎಲ್ಲಾ ಶಾಲೆ, ಅಂಗನವಾಡಿ ಹಾಗೂ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಹಾಕಲಾಗುತ್ತಿದೆ. ಆಸ್ಪತ್ರೆಯಲ್ಲಿ ನೀಡುವ ಆರೋಗ್ಯ ಕಾರ್ಡ್‌, ಶಾಲಾ ಹಂತದಲ್ಲೂ ಮುಂದುವರೆಯುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಪಂ ಮುಖ್ಯ ಕಲಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಲಸಿಕೆ ನೀಡಿ ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡಿ, ದೇಶದಲ್ಲಿ ಮಾನವ ಸಂಪನ್ಮೂಲ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಆಯಾ ಶಾಲಾ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯತ್‌ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಅನಂತ್‌, ತಾಲೂಕು ಪಂಚಾಯತ್‌ ಅಧ್ಯಕ್ಷ ಲಿಂಗರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಸ್‌.ಎಲ್‌. ಪಾಲಾಕ್ಷ, ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿ ಎನ್‌.ಎಸ್‌. ಮಂಜುನಾಥ್‌, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಜಯಣ್ಣ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

Bengaluru: ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

13

Surathkal: ಅನಾರೋಗ್ಯದಿಂದ ಸಿ.ಎ. ವಿದ್ಯಾರ್ಥಿನಿ ಸಾವು

byndoor

Siddapura: ಬೈಕಿಗೆ ಕಾರು ಡಿಕ್ಕಿ; ಬೈಕ್‌ ಸವಾರ ಗಂಭೀರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

13

Surathkal: ಅನಾರೋಗ್ಯದಿಂದ ಸಿ.ಎ. ವಿದ್ಯಾರ್ಥಿನಿ ಸಾವು

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.