ಸಹಜ ಶಿವಯೋಗಕ್ಕಿದೆ ಅಪೂರ್ವ ಶಕ್ತಿ
Team Udayavani, Oct 23, 2019, 10:55 AM IST
ಚಿತ್ರದುರ್ಗ: ಆಧುನಿಕ ಜಗತ್ತಿನಲ್ಲಿ ಮಾನವ ಅನೇಕ ಏರಿಳಿತಗಳ ನಡುವೆ ಹೆಜ್ಜೆ ಹೆಜ್ಜೆಗೂ ವಿಪತ್ತು ಆಪತ್ತುಗಳಲ್ಲಿ ಕಳೆದುಹೋಗುತ್ತಿದೆ. ಆದರೆ ಅಂತರ್ಯದ ತುಮುಲಗಳನ್ನು ನಿವಾರಿಸುವ ಔಷಧ ಸಹಜ ಶಿವಯೋಗವಾಗಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಇಂಡೋನೇಷಿಯಾದ ಬಾಲಿ ನಗರದಲ್ಲಿ ನಡೆದ ಶರಣತತ್ವ ಉಪನ್ಯಾಸ ಮತ್ತು ಸಹಜ ಶಿವಯೋಗ ಸಮಾರಂಭದಲ್ಲಿ ಭಾಗವಹಿಸಿ ಮುರುಘಾ ಶರಣರು ಆಶೀರ್ವಚನ ನೀಡಿದರು.
ತದೇಕ ಚಿತ್ತದಿಂದ ಲಿಂಗವನ್ನು ನೋಡಿ ಏಕಾಗ್ರತೆ ಗಳಿಸಿದರೆ ನೀವು ಶಿವಯೋಗದ ಸಾಮ್ರಾಟರಾಗುತ್ತೀರಿ. ಮನಸ್ಸು ಮತ್ತು ದೇಹ ಸಮಾಧಾನದಿಂದ ಇದ್ದಾಗ ನಿಮ್ಮನ್ನು ನೀವೆ ಆಳಿಕೊಳ್ಳುತ್ತೀರಿ. ಇಂತಹ ಶಿವಯೋಗ ನೆಲೆಯನ್ನು ತೋರಿದವರು ಬಸವಾದಿ ಶರಣರು. ಶರಣರ ಅನುಸರಣೆ ದುಃಖದ ನಿವಾರಣೆ ಎಂದರು.
ಅನೇಕರಿಗೆ ಸಾವಿರಾರು ಕೋಟಿ ಹಣವಿದ್ದರೂ ಬದುಕಿನಲ್ಲಿ ನೆಮ್ಮದಿ ಇರುವುದಿಲ್ಲ. ಚಿಂತೆ ಸಾವಿನ ಕಡೆಗೆ ಎಳೆದರೆ, ಚಿಂತನೆ ಬದುಕಿನ ಕಡೆಗೆ ಕರೆದೊಯ್ಯವುದು. ಜೀವನದಲ್ಲಿ ಕೊರತೆಗಳಿಗೆ ಪ್ರಾಶಸ್ತ್ಯ ನೀಡಬಾರದು. ನಾವೆಂದಿಗೂ ಒಂಟಿಯಲ್ಲ, ನಮ್ಮೊಂದಿಗೆ ಸದಾ ವಿಚಾರಗಳಿವೆ. ಸಂಶಯ ಪಿಶಾಚಿಗಳಾಗಬಾರದು. ಅಪೂರ್ವವಾದ ಈ ಜೀವನವನ್ನು ದ್ವೇಷ ಸಾಧಿ ಸುತ್ತ ಹಾಳು ಮಾಡಿಕೊಳ್ಳದೆ ಸಾಧನೆ ಕಡೆಗೆ ಮುಖ ಮಾಡಿ ಭರವಸೆ ತುಂಬಿಕೊಳ್ಳಿ.
ಶಿವಯೋಗದ ಮುಖಾಂತರ ಅಂತರ್ಮುಖೀಯಾಗಿ ಹಸನ್ಮುಖೀಯಾಗಿರಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮಿಗಳು, ಕುಂಚಿಟಿಗ ಗುರುಪೀಠದ ಡಾ| ಶಾಂತವೀರ ಸ್ವಾಮಿಗಳು, ವಾಲ್ಮೀಕಿ
ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಗಳು, ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಗಳು, ತಿಪಟೂರಿನ ಶ್ರೀ ರುದ್ರಮುನಿ ಸ್ವಾಮಿಗಳು, ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು, ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಹಾವೇರಿ ಹೊಸಮಠದ ಶ್ರೀ ಶಾಂತಲಿಂಗ ಸ್ವಾಮೀಜಿ, ಸಾಹಿತಿ ರಂಜಾನ್ ದರ್ಗಾ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.