ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ರಂಜಾನ್ ಸಂಭ್ರಮ
ಹಬ್ಬದ ಸಲುವಾಗಿ ಸಂಗ್ರಹಿಸಿದ್ದ 6 ಸಾವಿರ ರೂ. ಹಾಗೂ ದವಸ ಧಾನ್ಯ ಅನಾಥಾಶ್ರಮಕ್ಕೆ ದೇಣಿಗೆ
Team Udayavani, Jun 5, 2019, 11:54 AM IST
ಚಿತ್ರದುರ್ಗ: ಎಂ.ಕೆ. ಹಟ್ಟಿ ಗಾಂಧಿ ಮತ್ತು ಅಂಬೇಡ್ಕರ್ ಅನಾಥಶ್ರಮಕ್ಕೆ ದವಸ ಧಾನ್ಯ ನೀಡಲಾಯಿತು
ಚಿತ್ರದುರ್ಗ: ನಗರದ ಹೊರವಲಯದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ಮಂಗಳವಾರ ರಂಜಾನ್ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ರಂಜಾನ್ ಹಬ್ಬ ಆಚರಿಸಿದರು.
ಶಾಲೆಯಲ್ಲಿ ಸಂಗ್ರಹಿಸಿದ 6,000 ರೂ ಮತ್ತು ದವಸ ಧಾನ್ಯವನ್ನು ಎಂ.ಕೆ. ಹಟ್ಟಿ ಬಸವೇಶ್ವರ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಯಾದ ಗಾಂಧಿ ಮತ್ತು ಅಂಬೇಡ್ಕರ್ ಅನಾಥಶ್ರಮಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಆರ್‌ಎಸ್ ಶಿಕ್ಷಣ ಸಮೂಹ ಸಂಸ್ಥೆ
ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ರಂಜಾನ್ ಎಂದರೆ ಶಾಂತಿ, ಸಮೃದ್ಧಿಯ ವಾತಾವರಣ ನಿರ್ಮಾಣ ಮಾಡಲು ದೇವರಲ್ಲಿ ಹರಕೆ ಸಲ್ಲಿಸುವ ವಿಧಾನವಾಗಿದೆ. ಪ್ರತಿಯೊಬ್ಬ ಮನುಷ್ಯನ ಸಂಪಾದನೆಯಲ್ಲಿ ಕಾಲು ಭಾಗವನ್ನು ದೀನರು, ನಿರ್ಗತಿಕರಿಗೆ ಕೊಡುವ ಉದ್ದೇಶವನ್ನು ಸಾಕಾರಗೊಳಿಸುವ ಹಬ್ಬವಾಗಿದೆ. ರಂಜಾನ್ ಹಬ್ಬ ಏಕತಾ ಮನೋಭಾವನೆ ಬೆಳೆಸುವ ಧ್ಯೇಯೊದ್ದೇಶವನ್ನೊಳಗೊಂಡಿದೆ ಎಂದರು.
ಶಿಕ್ಷಣ ತಜ್ಞ ಕುದ್ರತ್ ಮಾತನಾಡಿ, ದೇಶದೆಲ್ಲೆಡೆ ಮುಸ್ಲಿಂ ಸಮುದಾಯದವರು ಸೌಹಾರ್ದತೆಯ ಪ್ರತೀಕವಾಗಿ ಶುಭಾಶಯಗಳ ಸಂದೇಶ ವಿನಿಮಯ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ಪ್ರಾಂಶುಪಾಲ ಎಂ.ಎಸ್. ಪ್ರಭಾಕರ್ ಮಾತನಾಡಿ, ಯಾಂತ್ರಿಕ ಬದುಕು ಸಾಗಿಸುವ ವೇಳೆ ಅನಿರೀಕ್ಷಿತವಾಗಿ ಬಂದೊದಗುವ ದುಃಖದಿಂದ ಪಾರಾಗಲು ಈ ಪವಿತ್ರ ಮಾಸದಲ್ಲಿ ರಂಜಾನ್ ಆಚರಿಸಲಾಗುತ್ತದೆ. ಕುರಾನ್ ಗ್ರಂಥ ಓದಿದರಷ್ಟೇ ಸಾಲದು, ಸತ್ಯದ ಸಾಕ್ಷಾತ್ಕಾರದಿಂದ ಆತ್ಮ ಸಂಸ್ಕಾರ ಹೊಂದುವ ಮೂಲಕ ಸಿದ್ಧಿ ಪಡೆಯಬೇಕು. ನಿರಂತರ ಒಂದು ತಿಂಗಳ ಕಾಲ ಉಪವಾಸವನ್ನು ಕಡ್ಡಾಯವಾಗಿ ಅನುಸರಿಸಬೇಕು. ಉಪ ಎಂದರೆ ಹತ್ತಿರ ವಾಸ ಎಂದರೆ ಇರುವುದು. ದೇವರನ್ನು ಆರಾಧಿಸುವ ಮೂಲಕ ದೇವರಿಗೆ ಹತ್ತಿರವಾಗುವುದು ಹಾಗೂ ದೇಹಕ್ಕೆ ಮತ್ತು ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳುವುದು ಎಂದರ್ಥ ಎಂದರು.
ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯೆ ಎಂ.ಎಸ್. ಅರ್ಪಿತಾ, ಕೆ.ಜೆ. ಪದ್ಮಾವತಮ್ಮ, ಈವೆಂಟ್ ಕೋ-ಆರ್ಡಿನೇಟರ್ ರಾಹುಲ್ ಬಿ., ಫರ್ಹಾ, ನಸೀಬಾ, ಲುಬ್ನ, ತಬುಸೂಮ್, ಫರೀನ್, ಬಿಸ್ಮಾ, ಮುಕ್ತಿಯಾರ್ ಮೊದಲಾದವರು ಪಾಲ್ಗೊಂಡಿದ್ದರು.
ಕುರಾನ್ ಗ್ರಂಥ ಓದಿದರಷ್ಟೇ ಸಾಲದು, ಸತ್ಯದ ಸಾಕ್ಷಾತ್ಕಾರದಿಂದ ಆತ್ಮ ಸಂಸ್ಕಾರ ಹೊಂದುವ ಮೂಲಕ ಸಿದ್ಧಿ ಪಡೆಯಬೇಕು. ನಿರಂತರ ಒಂದು ತಿಂಗಳ ಕಾಲ ಉಪವಾಸವನ್ನು ಕಡ್ಡಾಯವಾಗಿ ಅನುಸರಿಸಬೇಕು. ಈ ಮೂಲಕ ದೇಹಕ್ಕೆ ಮತ್ತು ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬಹುದು.
•ಎಂ.ಎಸ್. ಪ್ರಭಾಕರ್,
ಪ್ರಾಂಶುಪಾಲರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.