ನಿರ್ಭೀತಿಯಿಂದ ಮತ ಚಲಾಯಿಸಿ: ಸತ್ಯಭಾಮ
ವಿಕಲಚೇತನರಿಗೆ ಮತಗಟ್ಟೆಯಲ್ಲಿ ಅನುಕೂಲ ಕಲ್ಪಿಸಲು ಅಗತ್ಯ ಕ್ರಮ
Team Udayavani, Apr 11, 2019, 3:37 PM IST
ಚಿತ್ರದುರ್ಗ: ಮತದಾನ ಜಾಗೃತಿ ಕಾರ್ಯಕ್ರಮವನ್ನು ಜಿಪಂ ಸಿಇಒ ಸಿ. ಸತ್ಯಭಾಮ ಉದ್ಘಾಟಿಸಿದರು.
ಚಿತ್ರದುರ್ಗ: ವಿಕಲಚೇತನರು ಮತದಾನದಿಂದ ವಂಚಿತರಾಗದೆ ಮತ ಚಲಾಯಿಸಬೇಕು. ಈ ಮೂಲಕ ಬಲಿಷ್ಠ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಜಿಪಂ ಸಿಇಒ ಸಿ. ಸತ್ಯಭಾಮ ಕರೆ ನೀಡಿದರು.
ನಗರದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಆವರಣದಲ್ಲಿ ಜಿಲ್ಲಾ
ಸ್ವೀಪ್ ಸಮಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನ ಮಾಡಲು ಬರುವ ವಿಕಲಚೇತನರಿಗೆ ಮತಗಟ್ಟೆಗಳಲ್ಲಿ ಅಗತ್ಯ
ಸೌಲಭ್ಯ ಕಲ್ಪಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಮತದಾನದ ಕುರಿತು ತರಬೇತಿ ನೀಡಲಾಗುತ್ತಿದೆ. ಸಂಬಂಧಿಸಿದ ಇಲಾಖೆ ಮತ್ತು ಜಿಲ್ಲಾ ಪಂಚಾಯತ್‌ದಿಂದ ತರಬೇತಿ ಮತ್ತಿತರ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಜೆ. ವೈಶಾಲಿ ಮಾತನಾಡಿ, ವಿಕಲಚೇತನರಿಗೆ ಒದಗಿಸಿರುವ ಸೌಲಭ್ಯ ಬಳಸಕೊಂಡು ಮತ ಚಲಾವಣೆ ಮಾಡಬೇಕು. ನಿಮ್ಮ ಸ್ನೇಹಿತರಿಗೂ ಮತ ಚಲಾಯಿಸುವಂತೆ ಪ್ರೋತ್ಸಾಹ
ನೀಡಬೇಕು. ಉದಾಸೀನ ತೋರದೆ ಮತದಾನ ಮಾಡಿ ಹಕ್ಕು ಚಲಾಯಿಸಬೇಕು.
ವಿಕಲಚೇತನರಿಗಾಗಿ ಮತದಾನ ಮಾಡಲು ಮತಗಟ್ಟೆಗಳಲ್ಲಿ ರ್‍ಯಾಂಪ್, ರೇಲಿಂಗ್ಸ್, ಗಾಲಿ ಕುರ್ಚಿ, ವಾಹನ ವ್ಯವಸ್ಥೆ, ಮಂದ ದೃಷ್ಟಿ ಹೊಂದಿದವರಿಗೆ ಭೂತಗನ್ನಡಿ, ದೃಷ್ಠಿ ದೋಷ ಇರುವವರಿಗೆ ಬ್ರೈಲ್ ಲಿಪಿಯಲ್ಲಿ ಚುನಾವಣಾ ಮಾರ್ಗದರ್ಶಿ ಕೈಪಿಡಿ ನೀಡಲಾಗುವುದು, ಮತಗಟ್ಟೆಗಳಲ್ಲಿ ಬ್ರೈಲ್
ಬ್ಯಾಲೆಟ್ ಪೇಪರ್ ಇಡಲಾಗುವುದು. ಅದರ ಸಹಾಯದಿಂದ ಅಭ್ಯರ್ಥಿಯ ಕ್ರಮಸಂಖ್ಯೆ ತಿಳಿದು ಮತದಾನ ಮಾಡಬಹುದು. ಸುಗಮ ಮತದಾನಕ್ಕೆ ವಿಶೇಷ ಸಿಬ್ಬಂದಿಗಳ ನೆರವು ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅ ಧಿಕಾರಿ
ಮಂಜುನಾಥ್ ಎಸ್. ನಾಡರ್, ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಕೆ. ಶಂಕರಪ್ಪ, ಸ್ವೀಪ್ ಸಮಿತಿಯ ಬಷೀರ್, ಕಿವುಡ ಹಾಗೂ ಮೂಕರ ಸಂಘದ ಅಧ್ಯಕ್ಷ ಡಿ. ಅವಿನಾಶ್, ಶ್ವೇತಾ, ಸುರಕ್ಷಾ, ರವಿಕುಮಾರ್ ಇದ್ದರು.
ಪ್ರತಿಯೊಬ್ಬ ವಿಕಲಚೇತನರು ಏ. 18 ರಂದು ನಡೆಯಲಿರುವ ಮತದಾನ ಹಬ್ಬದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಇತರರಿಗೆ ಮಾದರಿಯಾಗಬೇಕು. ಒಂದು ಮತ ಒಬ್ಬ ಅಭ್ಯರ್ಥಿಯ ಗೆಲುವು-ಸೋಲನ್ನು ನಿರ್ಧರಿಸುತ್ತದೆ ಎಂಬುದನ್ನು ಅರಿತು ಮತದಾನ ಮಾಡಬೇಕು.
ಸಿ. ಸತ್ಯಭಾಮ, ಜಿಪಂ ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.